#ಅಡಿಕೆ_ವಿಶೇಷ #ಅಡಿಕೆ_ಬೆಳೆಗಾರರ_ಸಮಾವೇಶ ಸಾಗರದಲ್ಲಿ ಇದೇ 6 ಡಿಸೆಂಬರ್ 2024 ರಂದು ನಡೆಯಲಿರುವ ಅಡಿಕೆ ಬೆಳೆಗಾರರ ಸಮಾವೇಶದ ಸಂದರ್ಭದಲ್ಲಿನ ಸರಣಿ ಲೇಖನಗಳ ಭಾಗ-5. #ಮುಂಡಿಗೆಸರದ_ಮಂಜಪ್ಪಯ್ಯ. ಅಡಿಕೆ ಯಂತ್ರ ಅವಿಷ್ಕಾರದ ಪಿತಾಮಹ ಈ ಲೇಖನ ಬರೆದವರು ತಿರುಮಲ. ××× ××× ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದ ಪಿತಾಮಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ. 1945ರಲ್ಲಿಯೇ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರಯತ್ನಿಸಿದ್ದರಿಂದ ಅವರು ಅಡಿಕೆ ಸುಲಿಯುವ ಯಂತ್ರ ಅವಿಷ್ಕಾರದ ಪಿತಾಮಹ. ಉದ್ದೇಶ ಪೂವ೯ಕವಾಗಿ ಮರೆಲಾಚುತ್ತಿದ್ದಾರೆಂದು ಈ ಲೇಖನದಲ್ಲಿದೆ. ಮುಂಡಿಗೆಸರದ ಮಂಜಪ್ಪಯ್ಯರ ಪೋಟೋ, ಅಡಿಕೆ ಪತ್ರಿಕೆಯಲ್ಲಿ ಇವರ ಬಗ್ಗೆ ಬಂದ ಲೇಖನ ಯಾರಾದರೂ ನೀಡಲು ಸಾಧ್ಯವೆ? ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ. ರೈತ ಕುಲದಲ್ಲಿ ನಾವೇ ಶ್ರೇಷ್ಠರೆಂದು ಬೀಗುವ ಅಡಿಕೆ ಬೆಳೆಗಾರರೂ ಸಹ ಎಲ್ಲಾ ಸಮಾಜದಲ್ಲಿರುವ ಶ್ರೇಷ್ಠತೆಯ ವ್ಯಸನಿಗಳ ಹಾಗೆ ನಯವಂಚನೆ, ಜಾಣ ಕುರುಡುತನದಂತಹ ಆತ್ಮಘಾತುಕುತನ ಬೆಳೆಸಿಕೊಂಡು ಚರಿತ್...