ಸಾಳ್ವರಾಣಿ_ಚೆನ್ನಬೈರಾದೇವಿ_ಸೋಲಿಸಿ ಹಾನಗಲ್ಲಿನಲ್ಲಿ_ಸ್ಥಾಪಿಸಿದ_ವಿಜಯ_ಸ್ಥಂಭ victorypillar ಕೆಳದಿ ರಾಜ ವೆಂಕಟಪ್ಪ ನಾಯಕರು ಗೇರುಸೊಪ್ಪೆಯ ರಾಣಿ ಚೆನ್ನ ಬೈರಾದೇವಿ ಸಾಮ್ರಾಜ್ಯ ಗೆದ್ದು ವಿಜಯ ಸ್ಥಂಭ ಸ್ಥಾಪಿಸಿದ್ದು ದೂರದ ಹಾನಗಲ್ಲಿನಲ್ಲಿ ... "ಸಾಳ್ವ ಗೇರುಸೊಪ್ಪೆಯ ರಾಜ್ಯಾಧಿಪತಿಯಾಗಿದ್ದ ಚೆನ್ನಭೈರಾದೇವಿಯ ಸೇನಾ ಬಲಮಂ ತರಿದು... ಹಾನಗಲ್ಲಿನಲ್ಲಿ ವಿಜಯ ಸ್ಥಂಭ ನಿರ್ಮಾಣಕ್ಕೆ ಕಾರಣ ಗೊತ್ತಾ... ಕೆಳದಿ ಸಂಸ್ಥಾನದ ಇತಿಹಾಸವನ್ನು ವಿವರಿಸುವ ಪ್ರಸಿದ್ಧ ಕನ್ನಡ ಐತಿಹಾಸಿಕ ಕಾವ್ಯವಾದ 'ಕೆಳದಿನ್ರಪವಿಜಯ' ಮತ್ತು ಸಂಸ್ಕೃತ ಗ್ರಂಥ 'ಶಿವತತ್ತ್ವ ರತ್ನಾಕರದಲ್ಲಿ ವೆಂಕಟಪ್ಪ ನಾಯಕರು ಹಾನಗಲ್‌ನಲ್ಲಿ ಈ ವಿಜಯ ಸ್ತಂಭವನ್ನು ಸ್ಥಾಪಿಸಿದ ಘಟನೆಯನ್ನು ಹೆಮ್ಮೆಯಿಂದ ದಾಖಲಿಸಲಾಗಿದೆ. ಹಾನಗಲ್ಲಿನ ವಿಜಯ ಸ್ತಂಭವು ಕೆಳದಿ ಸಂಸ್ಥಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಕೆಳದಿಯ ವೈಭವ ಹಾಗೂ ಕರಾವಳಿ ಪ್ರದೇಶದ ಮೇಲಿನ ಆಧಿಪತ್ಯವನ್ನು ಸಾರುತ್ತದೆ. ಕೆಳದಿಯ ಶ್ರೇಷ್ಠ ದೊರೆ ಹಿರಿಯ ವೆಂಕಟಪ್ಪ ನಾಯಕರು(ಕ್ರಿ.ಶ. 1586 – 1629) ಗೇರುಸೊಪ್ಪೆಯ ರಾಜಪ್ರಭುತ್ವದ ಮೇಲೆ ಸಾಧಿಸಿದ ಪೂರ್ಣ ವಿಜಯದ ಸಂಕೇತವಾಗಿ. ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿಯ ಸೇನೆ ಮತ್ತು ಅವರ ಮೈತ್ರಿಕೂಟವನ್ನು 1606 ರ ಯುದ್ಧದಲ್ಲಿ ಸೋಲಿಸಿದ ನಂತರ ಈ ವಿಜಯದ ನೆನಪಿ...