Skip to main content

Posts

Showing posts with the label Simple life

ಸಜ್ಜನ ರಾಜಕಾರಣಿ S.ಸುರೇಶ್ ಕುಮಾರ್ ನನ್ನ ಇವತ್ತಿನ ಅತಿಥಿ

# ನನ್ನ ಇವತ್ತಿನ ವಿಶೇಷ ಅತಿಥಿ ಮಾಜಿ ಕಾನೂನು ಸಚಿವ ಹಾಲಿ ರಾಜಾಜಿ ನಗರದ ಶಾಸಕರಾದ ಶ್ರೀ ಸುರೇಶ್ ಕುಮಾರ್#   ಕನಾ೯ಟಕ ರಾಜ್ಯದಲ್ಲಿ ಸಜ್ಜನ ರಾಜಕಾರಣಿ ಅಂತ ಎಲ್ಲಾ ಪಕ್ಷದವರಿಂದ ಕರೆಸಿಕೊಳ್ಳುವ S. ಸುರೇಶ್ ಕುಮಾರ್ ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ.   ನಾನು ಅವರ ಅಭಿಮಾನಿ, ಪೇಸ್ ಬುಕ್ ನಲ್ಲಿ ಅವರನ್ನ ಹಿಂಬಾಲಿಸುತ್ತೇನೆ, ಅವರ ಯಾವುದೇ ಹೇಳಿಕೆ ಇದ್ದರೂ ತಪ್ಪದೇ ಓದುತ್ತೇನೆ.   ಸರಳ ಜೀವನ, ಆಹಾರ ಉಡುಪುಗಳ ಸುರೇಶ್ ಕುಮಾರ್ ಕೊಡಗಿನ ಹಿಂದಿನ ಚುನಾವಣೆಯಲ್ಲಿ ಸಣ್ಣ ಪಾರಂ ಹೌಸ್ ನ ಕೊಟ್ಟಿಗೆಯಲ್ಲಿ ವಾಸ್ತವ್ಯ ಹೂಡಿದ್ದರು ಅದರ ನಿತ್ಯ posting ನೋಡುತ್ತಿದ್ದೆ, ಇವತ್ತಿನ ರಾಜಕಾರಣಿಗಳು  ಕಾರು ಬಾರು, ವಿದೇಶ ಪ್ರಯಾಣ, ಪಂಚತಾರ ಸೇವೆ ಬಯಸುವಾಗ ಇವರು ಸರಳ ಮಾಗ೯ದಲ್ಲಿ ಜೀವನ ಮಾಡುವುದು ಇವತ್ತಿನ ಅಪರೂಪದಲ್ಲಿ ಅಪರೂಪ.   ಇವರಿಗೆ ಡಾಕ್ಟರೇಟ್ ಕೊಡುವುದಾಗಿ ಯಾರೋ ಸಂಪಕಿ೯ಸಿದರು, ಬೇರೆಯವರಾದರೆ ಹಿಂದೆ ಮುಂದೆ ನೋಡದೆ ಹೆಸರಿನ ಮುಂದೆ ಡಾಕ್ಟರ್ ಅಂತ ಹಾಕಿ ಕೊಳ್ಳಲು ಓಡುತ್ತಿದ್ದರು ಆದರೆ ಇವರು ಅದನ್ನ ನಿರಾಕರಿಸಿದ್ದಲ್ಲದೆ ನಕಲಿ ಡಾಕ್ಟರೇಟ್ ನೀಡುವ ಆ ಸಂಸ್ಥೆಯ ಅಸಲಿಯತ್ತು ಬಯಲಿಗೆಳೆದರು.   ಸದನದಲ್ಲಿ ಇವರ ಪಕ್ಷದವರೇ ಬ್ಲೂಪಿಲಂ ವೀಕ್ಷಿಸಿ ಸುದ್ದಿ ಆದಾಗ ಇವರ ಕೋಪ ನೋಡಬೇಕಿತ್ತು, ಅಯೋಗ್ಯ ಕೆಲಸ ಮಾಡಿದ ಮಂತ್ರಿಗಳನ್ನ ಲೆಪ್ಟ್ ರೈಟ್ ಮಾಡಿದ್ದರು, ಜೀವನದಲ್ಲಿ ನಡ...