#ರಾಣಿ_ಚಂಪಕಾಳ_ಆತ್ಮ_ಇನ್ನೂ_ಅಲ್ಲೇ_ಇದೆಯಾ ಅಂತ ನನಗೆ ಅನ್ನಿಸುತ್ತದೆ ರಾಣಿ ಚಂಪಕಳ ಸ್ಮಾರಕ ನಿಮಾ೯ಣವಾಗಿ 2024ಕ್ಕೆ 400 ವರ್ಷ ಆಗಲಿದೆ, ಇದು ಸತ್ಯ ಘಟನೆ ಆಧರಿಸಿ 10 ವರ್ಷದ ಹಿಂದೆ ಬರೆದದ್ದು ಇದನ್ನು ಮೊದಲು ಓದಿದವರು ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ದೇವರಾಜ ಅರಸ್ಸು, ದೇವೇಗೌಡರು, ಜೆ.ಹೆಚ್.ಪಟೇಲ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಬರೆದ ಕೋಣಂದೂರು ವೆಂಕಪ್ಪ ಗೌಡರು. ನಾನು ಬರೆದದ್ದು ಅನೇಕ ಸಣ್ಣ ಕಥೆ ಅದರ ನಂತರ ಈ ಕಾದ೦ಬರಿ ಪ್ರಕಟಿಸುವ ಅಪೇಕ್ಷೆ ಮಿತ್ರರಾದ ಶೃಂಗೇಶ್ ರಿಂದ ಬದಲಾಗಿ ಕಾದಂಬರಿ ಮೊದಲಾಯಿತು. ಈ ಕಾದಂಬರಿ ಬಗ್ಗೆ ಅನೇಕರು ಬರೆಯುತ್ತಿರುವ ವಿಮಷೆ೯ ಮತ್ತು ಪುಸ್ತಕದ ಬೇಡಿಕೆ ನೋಡಿದರೆ ಇನ್ನೋಂದು ಮುದ್ರಣ ಆಗಲಿದೆ ಅನ್ನಿಸುತ್ತೆ. ಇದೆಲ್ಲ ಏನನ್ನಿಸುತ್ತದೆಂದರೆ ಕೆಳದಿ ಸಾಮ್ರಾಜ್ಯದ ದುರಂತ ರಾಣಿ ಚಂಪಕಾ ಆತ್ಮ 400 ನೇ ವಷ೯ದ ವಷಾ೯ಚರಣೆಗೆ ಕಾದಿದೆಯಾ ಅನ್ನಿಸುತ್ತೆ. ಈಗಷ್ಟೆ ಕಾನಲೆಯ ಕಿರಿಯ ಗೆಳೆಯ ಆದರೆ ಓದು ಬರಹ ಮತ್ತು ಕ್ರಿಯಾಶೀಲತೆಯಲ್ಲಿ ನಮಗಿಂತ ಹಿರಿಯರೆನ್ನಿಸುವ ಕಾನಲೆ ಗುರುಪ್ರಸಾದ್ ತಮ್ಮ ಬಿಡುವಿಲ್ಲದ ಚಟುವಟಿಕೆಯ ಮಧ್ಯ ಓದಿ ವಸ್ತು ನಿಷ್ಠ ವಿಮಷೆ೯ ಮಾಡಿದ್ದಾರೆ. #ಓದಿ_ಓದಿಸಿ ( ಪುಸ್ತಕ ಪರಿಚಯ 17 ) ( ಬೆಸ್ತರರಾಣಿ ಚಂಪಕಾ-ಕಾದಂಬರಿ – ಕೆ.ಅರುಣ್ ಪ್ರಸಾದ್ ) ಛೆ...! ಏನಾಗ...