ಶಿವಮೊಗ್ಗ ಜಿಲ್ಲೆಯ ಕೆಳದಿ ರಾಜ ವೆಂಕಟಪ್ಪ ನಾಯಕರು 400 ವರ್ಷದ ಹಿಂದೆ ರಾಣಿ ಚಂಪಕಳ ಸ್ಮರಣಾರ್ಥ ನಿರ್ಮಿಸಿದ ಸ್ಮಾರಕ ಚಂಪಕ ಸರಸ್ಸು ಪುನರುಜ್ಜೀವನಕ್ಕೆ ಮುಂದಾಗಿರುವ ಖ್ಯಾತ ಚಲನಚಿತ್ರ ನಟ ಯಶ್ ಮತ್ತು ಇದರ ನೇತೃತ್ವ ವಹಿಸಿರುವ ಖ್ಯಾತ ಜಲ ತಜ್ಞ ಶಿವಾನಂದ ಕಳವೆ ಅಭಿನಂದನಾರ್ಹರು.
#ಆನಂದಪುರಂ_ಚಂಪಕಸರಸ್ಸು_ನಿರ್ಮಾಣವಾಗಿ_ನಾಲ್ಕು_ಶತಮಾನ. #ಚಂಪಕಸರಸ್ಸು_ಪುನರುಜ್ಜೀವನಕ್ಕೆ_ಮುಂದಾಗಿರುವ_ಖ್ಯಾತ_ಚಲನಚಿತ್ರನಟ_ಯಶ್. #ಪುನರುಜ್ಜೀವನದ_ಕಾರ್ಯದ_ಮುಖ್ಯ_ಪ್ರೇರಕರು_ಜಲತಜ್ಞ_ಶಿವಾನಂದಕಳವೆ . #ಇವತ್ತಿಂದ_ಯಶೋಮಾರ್ಗದಿಂದ_ಪಾರಂಪರಿಕ_ಕಲ್ಯಾಣಿ_ಚಂಪಕಸರಸ್ಸು_ಪುನರುಜ್ಜೀವನ_ಕಾರ್ಯ_ಪ್ರಾರಂಭ. ಚಂಪಕ ಸರಸ್ಸು ಸುಂದರವಾದ ಕಲ್ಯಾಣಿ ಇದರ ಮಧ್ಯೆ ಶಿವಾಲಯ ಅಲ್ಲಿಗೆ ಹೋಗಲು ನೀರಿನ ಮೇಲೆ ಕಲ್ಲಿನದ್ದೇ ಸಂಕ, ಸುಂದರವಾದ ಶಿಲಾಮಯ ಆನೆಗಳು, ಸುತ್ತಲೂ ಪಗಾರ ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಬಸ್ ಸ್ಟಾಂಡಿನಿಂದ ಶಿಕಾರಿಪುರ ರಸ್ತೆಯಲ್ಲಿ ಸಿಗುವ ಮಲಂದೂರಿನ ಸಂತೋಷ್ ಕೋಲ್ಡ್ ಸ್ಟೋರೇಜ್ ಹಿಂಬಾಗದಲ್ಲಿದೆ. ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ರಾಣಿ ಚಂಪಕಳ ನಿತ್ಯ ಬಿಡುಸುತ್ತಿದ್ದ ರಂಗೋಲಿಯಿಂದ ಪ್ರಾರಂಭವಾಗುವ ಪ್ರೇಮ ಕಥೆ, ವಿವಾಹವಾಗಿ ಆನಂದಪುರಂನ ಕೋಟೆಯ ಅರಮನೆಯಲ್ಲಿ ತನ್ನ ಆಹಾರ ಪದ್ಧತಿಗಾಗಿ ಪಟ್ಟದ ರಾಣಿ ಭದ್ರಮ್ಮಾಜಿಯ ಮತ್ತು ರಾಜ ವೆಂಕಟಪ್ಪ ನಾಯಕರ ಮಧ್ಯ ಉಂಟಾಗುವ ವಿರಹ ಇದಕ್ಕಾಗಿ ರಾಜ್ಯದ ಪ್ರಜೆಗಳಲ್ಲಿ ರಾಜ ವೆಂಕಟಪ್ಪ ನಾಯಕರ ಮೇಲೆ ಹೆಚ್ಚಾಗುವ ಆಸಹನೆ ತಾಳಿಕೊಳ್ಳದೆ ರಾಣಿ ಚಂಪಕ ವಜ್ರದ ಪುಡಿ ಹಾಲಿನ ಜೊತೆ ಸೇವಿಸಿ ಜೀವ ತ್ಯಾಗ ಮಾಡುತ್ತಾಳೆ, ರಾಣಿ ಚಂಪಕಾಳ ಸ್ಮರಣೆಗಾಗಿ ನಿರ್ಮಿಸಿರುವುದೇ ಈ ಚಂಪಕ ಸರಸ್ಸು (ಸರಸ್ಸು ಎಂದರೆ ಕೊಳ). ಕೆಳದಿ ಇತಿಹಾಸದಲ್ಲಿ ದೀರ್ಘ ...