Skip to main content

Posts

Showing posts with the label by his support only 2011 my Bullock cart rally about Right to information and lokayukta awareness programme was successful

ಕೇಶವಪುರದ ದಸ್ತಗೀರ್ ಸಾಬರು, ಹಲ್ಲೇ ಕಟ್ಟೊ ಸಾಬರು ಎಂಬ ಅನ್ವರ್ಥನಾಮದ ನನ್ನ ಅತ್ಯಾಪ್ತ ಗೆಳೆಯರು 2011ರ ನನ್ನ ಎತ್ತಿನಗಾಡಿ ಯಾತ್ರೆ ಯಶಸ್ವಿಗೆ ಕಾರಣಕರ್ತರು.

#ಕೇಶವಪುರದ_ದಸ್ತಗೀರು_ಸಾಬರು #ಇವರನ್ನು_ಎತ್ತಿನ_ಹಲ್ಲೇ_ಕಟ್ಟೋ_ಸಾಬರೆಂತಲೆ_ಜನ_ಕರೆಯುವುದು. #ಈಬಾಗದ_ಜನರ_ವಿಶ್ವಾಸ_ಪ್ರೀತಿಗಳಿಸಿದ_ಸಾಹೇಬರು #ನನ್ನ_2011ರ_ಎತ್ತಿನಗಾಡಿ_ಯಾತ್ರೆಗೆ_ಇವರ_ಸಹಾಯ_ಮರೆಯಲುಂಟೆ?   2014 ರಿಂದ ಸಾರ್ವಜನಿಕ ಜೀವನದಿಂದ ವಿಮುಕ್ತನಾದ ಮೇಲೆ ಆವರೆಗಿನ ಅನೇಕ ರಾಜಕಾರಣದ ಗೆಳೆಯರ ಸಂಪರ್ಕವೇ ಇಲ್ಲವಾಗಿದೆ.   ಕೇಶವಪುರದ ಮೂಲ ಹೆಸರು ದರೋಡೆಕಾನು ಈ ಹೆಸರು ಬರಲು ಹೊಸನಗರ ಮತ್ತು ಬಟ್ಟೆಮಲ್ಲಪ್ಪದ ರಸ್ತೆ ದಟ್ಟ ಕಾಡಿನ ಮಧ್ಯದಲ್ಲಿ ಶರಾವತಿಗೆ ಸೇರುವ ದೊಡ್ಡ ಹಳ್ಳ ಇಲ್ಲಿದೆ, ಎರೆಡೂ ಭಾಗದಲ್ಲಿ ತುಂಬಾ ಹೆಚ್ಚು ಎನ್ನುವ ಇಳಿಜಾರು ಮತ್ತು Z ಆಕಾರದ ತಿರುವು ಇಲ್ಲಿತ್ತು ಆ ಕಾಲದಲ್ಲಿ ಸರಕು ಸಾಗಾಣಿಕೆಯ ಎತ್ತಿನಗಾಡಿಗಳನ್ನು ಇಲ್ಲಿ ಲೂಟಿ ಮಾಡುವ ಜನ ಈ ಆಯಾ ಕಟ್ಟಿನ ಜಾಗದಲ್ಲಿ ತಮ್ಮ ಕಾಯಾ೯ಚರಣೆ ಮಾಡುತ್ತಿದ್ದರಿಂದ ಈ ಹೆಸರು.   ಈಗಿನ ಯುವಕರು ತಮ್ಮ ಈ ಕಳಂಕದ ಹೆಸರನ್ನು #ಕೇಶವಪುರ ಅಂತ ಬದಲಿಸಿದ್ದಾರೆ, ಬ್ರಿಟಿಷರ ಕಾಲದ ಹಳೇ ಸೇತುವೆ ತೆಗೆದು ದೊಡ್ಡ ಸೇತುವೆ ಆಗುವಾಗ ತಿರುವು ತಿದ್ದಿದ್ದಾರೆ ಇಳಿಜಾರು ಗೊತ್ತಾಗುವುದಿಲ್ಲ, ರಸ್ತೆ ಬದಿಯಲ್ಲಿ ಸಾಲು ಮನೆಗಳು, ಬಸ್ ನಿಲ್ದಾಣ ಸಮೀಪದಲ್ಲಿ ರೈತರ ಕಬ್ಬು ಬೆಲ್ಲ ಮಾಡುವ ಕಾರ್ಖಾನೆ ಹೀಗೆ ಅಲ್ಲಿ #ದರೋಡೆಕಾನ್ ಎಂಬುದು ಇತ್ತು ಎನ್ನುವ ಕುರುಹು ಈಗಿಲ್ಲ ಮತ್ತು ಆ ದಿನದ ನೆನಪು ಈಗ ಇಲ್ಲಿರುವ ಹೊಸಬರಿಗೆ ಗೊತ್ತೂ ಇಲ್ಲ.   ಇಲ್ಲಿಯೇ ರಸ್ತೆ ಬದಿಯ...