#ಬಜೆಟ್_ಗ್ಲಾನ್ಸ್_ಹೈಲೈಟ್ಸ್_ಇತ್ಯಾದಿ_ಅರ್ಥವಾಗದ_ಉಸಾಬರಿ. #ಪತ್ರಿಕೆಗಳಿಗೆ_ಪ್ರತಿವರ್ಷ_ನೀಡುತ್ತಿದ್ದ_ಬಜೆಟ್_ಪ್ರತಿಕ್ರಿಯೆ. #ಆಯಾ_ಪಕ್ಷದವರು_ಸಮರ್ಥಿಸಿಕೊಳ್ಳುವ_ವಿರೋದಪಕ್ಷಗಳು_ವಿರೋದಿಸುವ_ಬಜೆಟ್ #ರೈತರು_ಸುಗ್ಗಿಯಲ್ಲಿ_ಕೈಸೇರುವ_ಪಸಲು_ಅದರ_ಆದಾಯದಿಂದ #ಕುಟುಂಬ_ಮತ್ತು_ಕೃಷಿ_ವೆಚ್ಚಗಳ_ನಿರ್ವಹಣೆ_ಅಂದಾಜು_ಮಾಡುವಂತೆ. #ಯಾವತ್ತೂ_ಅಂದಾಜು_ಮಾಡಿದ್ದು_ಸರಿ_ಹೊಂದುವುದಿಲ್ಲ #ಸಾರ್ವಜನಿಕ_ಹಣ_ಖರ್ಚು_ಮಾಡಲು_ಲೈಸೆನ್ಸ್_ಪಡೆಯುವ_ವ್ಯವಸ್ಥೆ. 2013 ರ ತನಕ ಪತ್ರಕರ್ತರು ಸರ್ಕಾರಗಳ ಬಜೆಟ್ ಬಗ್ಗೆ ಕೇಳುವುದು ನಾನು ಅವರಿಗೆ ಬಜೆಟ್ ರೈತರ ಪರವಂತಲೋ ಅಥವ ಜನ ವಿರೋದಿ ಅಂತಲೋ ಹೇಳಿಕೆ ನೀಡುವುದು ಮರುದಿನದ ಪತ್ರಿಕೆಯಲ್ಲಿ ನನ್ನ ಹೇಳಿಕೆ ಯಾವ ಯಾವ ಪತ್ರಿಕೆಯಲ್ಲಿ ಬಂತು ಅಂತ ಹುಡುಕುವುದು ಆ ಪತ್ರಿಕೆ ಕಟಿಂಗ್ ಜೋಪಾನ ಮಾಡುವ ಮುರ್ಖತನದ ಕೆಲಸ ನಾನು ಮಾಡುತ್ತಿದ್ದೆ. ಕೇಳುವ ಪತ್ರಕರ್ತರೂ ನನಗಿಂತ ಬಿನ್ನವಾಗಿರುತ್ತಿರಲಿಲ್ಲ ಅವರಿಗೂ ಈ ಬಜೆಟ್ ಗೊತ್ತಿರುತ್ತಿರಲಿಲ್ಲ. ಈ ಬಜೆಟ್ ಗಳು ಪ್ರಜಾಪ್ರಭುತ್ವದಲ್ಲಿ ರಾಜರ ಸ್ಥಾನದಲ್ಲಿರುವವವರಿಗೆ ವರ್ಷ ವರ್ಷ ಸರಕಾರದ ಬೊಕ್ಕಸದ ಹಣ ವಿನಿಯೋಗಿಸಲು ಪಡೆಯಬೇಕಾದ ಒಂದು ರೀತಿಯ ಅನುಮತಿ ಮಾತ್ರ. ಆಯಾ ಪಕ್ಷಗಳ ಅಭಿರುಚಿಗೆ ತಕ್ಕಂತೆ ತೋರಿಸುವ ಕನ್ನಡಿ ಗಂಟು ಅನ್ನುವುದು ಗೊತ್ತಿದ್ದರೂ ಭಾರೀ ಬುದ್ದಿವಂತರಿಗೆ ಮಾತ್ರ ಅರ್ಥ ಆಗುತ್ತದೆ ಎ೦ಬ ಕವಚದಲ್ಲಿ ಕೆಲ ...