Skip to main content

Posts

Showing posts with the label Banjamin Lewis Rice director of Mysore archaeological dept visited Anandapuram in 1868

ಆನಂದಪುರಂ ಇತಿಹಾಸ - 67, ಆನಂದಪುರಂ ಗೆ ಸ್ವತಃ ಬೇಟಿ ನೀಡಿ 36 ಶಿಲಾಶಾಸನ ಮತ್ತು 2 ತಾಮ್ರ ಶಾಸನ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಇಂಗ್ಲೀಷ್ ಗೆ ಅನುವಾದಿಸಿ ಪ್ರಕಟಿಸಿದ ಮೈಸೂರು ಆರ್ಕಾಲಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಬೆಂಜಮಿನ್ ಲೆವಿಸ್ ರೈಸ್.

#ಆನಂದಪುರಂ_ಇತಿಹಾಸ_67. #ಬೆಂಜಮಿನ್_ಲೆವಿಸ್_ರೈಸ್_ಎಪಿಗ್ರಾಫಿ_ಕನಾ೯ಟಕ_1902_ರಲ್ಲಿ_ಪ್ರಕಟ. #ಇದರಲ್ಲಿ_ಆನಂದಪುರಂ_ಸುತ್ತಲಿನ_36_ಶಿಲಾಶಾಸನ_2_ತಾಮ್ರ_ಶಾಸನ_ದಾಖಲಾಗಿದೆ. #ಬೆಂಜಮಿನ್_ಲೆವಿಸ್‌_ರೈಸ್_ಶಾಸನ_ಅಧ್ಯಯನದ_ಅಶ್ವಿನಿದೇವತೆಗಳು_ಎಂಬ_ಬಿರುದಿದೆ. #ರೈಸ್_20_ಡಿಸೆಂಬರ್_1868ರಲ್ಲಿ_ಆನಂದಪುರಂಗೆ_ಬಂದಿದ್ದರು. #ಆಗಿನ_ಆನಂದಪುರಂ_ರಸ್ತೆ_ಕೋಟೆಯ_ಬಗ್ಗೆ_ತಮ್ಮ_ಈಸ್ಟರ್ನ್_ಎಕ್ಸ್ಪೆರಿಯನ್ಸ್_ಪುಸ್ತಕದಲ್ಲಿ_ಬರೆದಿದ್ದಾರೆ.   12 ಸಂಪುಟಗಳ ಎಪಿಗ್ರಾಫಿ ಕರ್ನಾಟಕ (Epigraphia Carnatica) 1894-1905 ರವರೆಗೆ ಮೈಸೂರು ಅರ್ಕಾಲಾ ಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಆಗಿದ್ದ ಬೆಂಜಮಿನ್ ಲೆವಿಸ್ ರೈಸ್ ಪ್ರಕಟಿಸಿದ್ದರು, ಇದರಲ್ಲಿ 8869 ಶಾಸನಗಳನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ.    ದೇಶದಲ್ಲಿ ತಮಿಳುನಾಡು ಬಿಟ್ಟರೆ ಅತಿ ಹೆಚ್ಚು ಶಾಸನಗಳಿರುವುದು ಕರ್ನಾಟಕದಲ್ಲಿ ಮಾತ್ರ.   ಸುಮಾರು ಇಪ್ಪತ್ತು ಸಾವಿರ ಶಾಸನದಲ್ಲಿ ಅರ್ಧದಷ್ಟು ಪ್ರಕಟವಾಗಿದೆ.    ಬೆಂಜಮಿನ್ ಲೇವಿಸ್ ರೈಸ್ ಹುಟ್ಟಿದ್ದು ಬೆಂಗಳೂರಿನಲ್ಲಿ 17- ಜುಲೈ - 1837 ಇವರ ತಂದೆ ಚರ್ಚ್ ನ ಮುಖ್ಯಸ್ಥರಾಗಿದ್ದರು, ವಿವರ ವಿದ್ಯಾಬ್ಯಾಸ ಲಂಡನ್ ನಲ್ಲಿ ಆಯಿತು, ಸೇನೆಯ ಮೇಜರ್ ಒಬ್ಬರು ಶಿಲಾ ಶಾಸನಗಳ ಚಿತ್ರ ನೀಡಿ ವಿವರಿಸಲು ಕೋರಿದ್ದೇ ಅವರಿಗೆ ರಾಜ್ಯದಾದ್ಯಂತ 3 ನೇ ಶತಮಾನದಿಂದ 19 ನೇ ಶತಮಾನದವರೆಗಿನ ಎಲ್ಲೇಲ್ಲೋ ಅ...