Skip to main content

Posts

Showing posts with the label 1292 AD Veeragallu at Channashettikoppa tank tells the story of kotinayaka

Blog number 923. ಆನಂದಪುರಂ ಇತಿಹಾಸ ಭಾಗ-77, ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ಸಮೀಪದ ವೀರಗಲ್ಲು 12ನೇ ಶತಮಾನದ ಕೋಟಿ ನಾಯಕನ ವೀರ ಮರಣದ ಕಥೆ ಹೇಳುತ್ತಿದೆ.

#ಆನಂದಪುರಂ_ಇತಿಹಾಸ_ಭಾಗ_77. #ಸಮೀಪದ_ಹೊಸೂರು_ಗ್ರಾಮಪಂಚಾಯತನ_ಚೆನ್ನಶೆಟ್ಟಿ_ಗ್ರಾಮದ_ಕೆರೆ_ಬಳಿ_ನೆಟ್ಟಿರುವ_ವೀರಗಲ್ಲು. #ಹನ್ನೆರಡನೆ_ಶತಮಾನದ_ಕಥೆ_ಹೇಳುತ್ತದೆ. #ಎಂಟು_ಅಡಿ_ಎತ್ತರ_ಮತ್ತು_ಐದು_ಅಡಿ_ಅಗಲದ_ವೀರಗಲ್ಲು #ಆ_ಕಾಲದಲ್ಲಿ_ಈ_ಪ್ರದೇಶ_ಆಳುತ್ತಿದ್ದ_ಕೋಟಿನಾಯಕ_ಯದ್ದದಲ್ಲಿ_ವೀರಮರಣ_ಹೊಂದಿದ್ದಕ್ಕಾಗಿ #ಅವನ_ಅಳಿಯ_ತನ್ನ_ಮಾವನ_ಸ್ಮರಣೆಗಾಗಿ_ಸ್ಥಾಪಿಸಿದ_ವೀರ_ಶಾಸನ #ಈ_ನಾಯಕರು_ಯಾರು_ದೀವರಾ_ಸಂಶೋದನೆಗಳಾಗಬೇಕು. #ಈ_ಸಂಶೋದನೆಗಳು_ಕೆಳದಿ_ಅರಸರ_ಮೂಲ_ಸಂಶೋದನೆಗೂ_ಕಾರಣ_ಆಗಬಹುದು ಶಿವಮೊಗ್ಗ ಜಿಲ್ಲೆ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಎಂಬ ಗ್ರಾಮದ ದೊಡ್ಡ ಕೆರೆ ಬಳಿ ಇರುವವೀರಕಲ್ಲು ಕ್ರಿ.ಶ.1292ರಲ್ಲಿ ಸ್ಥಾಪಿಸಲಾಗಿದೆ.   ವೀರ ಕೋಟಿ ನಾಯಕ ತನ್ನ ರಾಜ್ಯವನ್ನು ಶಾಂತಿಯಿಂದ ಬುದ್ದಿಶಕ್ತಿಯಿಂದ ಆಳುತ್ತಿದ್ದ ಅವನ ಅನೇಕ ಬಿರುದಾವಳಿ ಈ ವೀರ ಕಲ್ಲಿನಲ್ಲಿ ಕೆತ್ತಲಾಗಿದೆ.   ಕೋಟಿ ನಾಯಕ ಕಮದೂರು ಎಂಬಲ್ಲಿ (ಹಾಲಿ ರಿಪ್ಪನ್ ಪೇಟೆ ಸಮೀಪ ಕಮದೂರು ಎಂಬ ಹಳ್ಳಿ ಇದೆ ಇದೇ ಕಮದೂರ ಗೊತ್ತಿಲ್ಲ?) ಮಾಚನಾಯಕ,ದೇಸುನಾಯಕ, ಆಲೂರು ಜಕ್ಕೆ ನಾಯಕರ ಜೊತೆ ಯುದ್ಧದಲ್ಲಿ ದೈಯ೯ದಿಂದ ಹೋರಾಡಿ ಕುದುರೆಯ ರುಂಡ ಚಂಡಾಡಿ ನಂತರ ವೀರ ಮರಣ ಪಡೆಯುತ್ತಾರೆ ಆದ್ದರಿಂದ ಅವರ ಪತ್ನಿ ಮಕ್ಕಳಿಗೆ ಭೂದಾನ ಮಾಡಿ ಅವರ ನೆನಪಿಗಾಗಿ ಅವರ ಅಳಿಯ ( ಹೆಸರು ನಮೂದಾಗಿಲ್ಲ) ತನ್ನ ಮಾ...