Skip to main content

Blog number 923. ಆನಂದಪುರಂ ಇತಿಹಾಸ ಭಾಗ-77, ಆನಂದಪುರಂ ಸಮೀಪದ ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ಸಮೀಪದ ವೀರಗಲ್ಲು 12ನೇ ಶತಮಾನದ ಕೋಟಿ ನಾಯಕನ ವೀರ ಮರಣದ ಕಥೆ ಹೇಳುತ್ತಿದೆ.

#ಆನಂದಪುರಂ_ಇತಿಹಾಸ_ಭಾಗ_77.

#ಸಮೀಪದ_ಹೊಸೂರು_ಗ್ರಾಮಪಂಚಾಯತನ_ಚೆನ್ನಶೆಟ್ಟಿ_ಗ್ರಾಮದ_ಕೆರೆ_ಬಳಿ_ನೆಟ್ಟಿರುವ_ವೀರಗಲ್ಲು.

#ಹನ್ನೆರಡನೆ_ಶತಮಾನದ_ಕಥೆ_ಹೇಳುತ್ತದೆ.

#ಎಂಟು_ಅಡಿ_ಎತ್ತರ_ಮತ್ತು_ಐದು_ಅಡಿ_ಅಗಲದ_ವೀರಗಲ್ಲು

#ಆ_ಕಾಲದಲ್ಲಿ_ಈ_ಪ್ರದೇಶ_ಆಳುತ್ತಿದ್ದ_ಕೋಟಿನಾಯಕ_ಯದ್ದದಲ್ಲಿ_ವೀರಮರಣ_ಹೊಂದಿದ್ದಕ್ಕಾಗಿ
#ಅವನ_ಅಳಿಯ_ತನ್ನ_ಮಾವನ_ಸ್ಮರಣೆಗಾಗಿ_ಸ್ಥಾಪಿಸಿದ_ವೀರ_ಶಾಸನ

#ಈ_ನಾಯಕರು_ಯಾರು_ದೀವರಾ_ಸಂಶೋದನೆಗಳಾಗಬೇಕು.

#ಈ_ಸಂಶೋದನೆಗಳು_ಕೆಳದಿ_ಅರಸರ_ಮೂಲ_ಸಂಶೋದನೆಗೂ_ಕಾರಣ_ಆಗಬಹುದು

ಶಿವಮೊಗ್ಗ ಜಿಲ್ಲೆ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ ಎಂಬ ಗ್ರಾಮದ ದೊಡ್ಡ ಕೆರೆ ಬಳಿ ಇರುವವೀರಕಲ್ಲು ಕ್ರಿ.ಶ.1292ರಲ್ಲಿ ಸ್ಥಾಪಿಸಲಾಗಿದೆ.
  ವೀರ ಕೋಟಿ ನಾಯಕ ತನ್ನ ರಾಜ್ಯವನ್ನು ಶಾಂತಿಯಿಂದ ಬುದ್ದಿಶಕ್ತಿಯಿಂದ ಆಳುತ್ತಿದ್ದ ಅವನ ಅನೇಕ ಬಿರುದಾವಳಿ ಈ ವೀರ ಕಲ್ಲಿನಲ್ಲಿ ಕೆತ್ತಲಾಗಿದೆ.
  ಕೋಟಿ ನಾಯಕ ಕಮದೂರು ಎಂಬಲ್ಲಿ (ಹಾಲಿ ರಿಪ್ಪನ್ ಪೇಟೆ ಸಮೀಪ ಕಮದೂರು ಎಂಬ ಹಳ್ಳಿ ಇದೆ ಇದೇ ಕಮದೂರ ಗೊತ್ತಿಲ್ಲ?) ಮಾಚನಾಯಕ,ದೇಸುನಾಯಕ, ಆಲೂರು ಜಕ್ಕೆ ನಾಯಕರ ಜೊತೆ ಯುದ್ಧದಲ್ಲಿ ದೈಯ೯ದಿಂದ ಹೋರಾಡಿ ಕುದುರೆಯ ರುಂಡ ಚಂಡಾಡಿ ನಂತರ ವೀರ ಮರಣ ಪಡೆಯುತ್ತಾರೆ ಆದ್ದರಿಂದ ಅವರ ಪತ್ನಿ ಮಕ್ಕಳಿಗೆ ಭೂದಾನ ಮಾಡಿ ಅವರ ನೆನಪಿಗಾಗಿ ಅವರ ಅಳಿಯ ( ಹೆಸರು ನಮೂದಾಗಿಲ್ಲ) ತನ್ನ ಮಾವನ ವೀರ ಮರಣದ ಸ್ಮಾರಕವಾದ ಈ ವೀರಗಲ್ಲು ಕ್ರಿ.ಶ.1292ರಲ್ಲಿ ಸ್ಥಾಪಿಸುತ್ತಾನೆ.
   ಇದರಲ್ಲಿ...
    16 ಸಾಲುಗಳಲ್ಲಿ ಹಳೇ ಗನ್ನಡದಲ್ಲಿ ಈ ರೀತಿ ಬರೆದಿದ್ದಾರೆ.
  "ನಮಸ್ತುಂಗಸಿರಸ್ತುಂಗ ಚಂದ್ರಚಾಮರವೇತ್ರ್ಯಲೋಕ್ಯನಗರಂಭಾಮೂಲಸ್ತಂಭಯಸಂಭವೇತುII ಸ್ಟಸ್ತಿ ಸಮಸ್ತ ಪ್ರಸಸ್ತಿ ಸಹಿತಂ "
" ಶ್ರೀಮನುಮಮಂಡಳೇಸ್ಟರಂಸತ್ಯರತ್ನಾ ಕರಂಸರಣಾಗತವಜ್ರವಂಜರ೦ಯರಸಂಕ ಕರಗ ಸಂಬಿರುವರ೦ಕುಸಂಮೂರ್ತಿನಾರಣ೦ "
"ವಿಳಾಸಲಭಂವಯಿರಿಮಂಡಳಿಕರಗಳ ಗಂಡಗತ್ತರಿಹಂನೊಂದು ಮಂಡಳಿ ಕರಗಂಡಅಂತೆಂಬರಗಂಡಕೊಂಕಣಿಗಬೇಂಟೆಕಾ"
"ಅಕದಂಟರಾಯವಿಬಾಡವೀರದವುಡವೀರವ೦ಚತುವರಪ್ರತಿಷ್ಟಾಚಾಯ೯ಮಲೆಯತಾತ್ತ೯ಳದುಳಿವ ಮೂರು ಲೋಕ ಜಗದ್ಯಕಟ್ಟಿಹ"
"ರಿಕರಹತ್ತಮಲ್ಲನಪ್ಪಶ್ರೀಕಲಿನಾಥದೇವರದಿವ್ಯಶ್ರೀಪಾದಪದ್ಮಾರಾಧಕ ೦ಪ್ಪರಬಳಸಾದಕರುಮಪ್ಪವೀರ ಕೋಟಿನಾಯ್ಕರುಸುಖಸಂಕಥಾ"
"ವಿಸೋದಾತ್ತ೯ದಲ್ಲಿರಾಜ್ಯಂಗೆಯತಮಿರವೀರರೂಳಂವಿತರಣದೊಳಂಕಾರುಣ್ಯಕರತಯ೦ಕಮಂಸತನದೊಳು 1213ನೇಯನಂ"
"ದನಸ೦ವತ್ಸರದಚಯಿತ್ರಸು ನಂ ಗುರುವಲು II ಶ್ರೀಮತುಕೋಟಿನಾಯ್ಕರುವುಖಡಿಗೆನಡುಮೇಚನಯ್ಕಕದೇ ಸುನಯ್ಕಕಳಗದಲಿಅಲುಜಕೆ"
"ನಯ್ಕನು ಕಮದುರ ಕಳಗದೊಳಗೆಬೀರರಮುಚುಆತಾತಳದುಳಿದು ಕುದುರೆಯ ಕುತಿತಳತಿಳಿದಂದುಮಅದುಸುರಲೋಕಪ್ರಾಪ್ತರಾ II ಮ೦ಗಳಮ"

" ಹಾ ಕ್ರಿಶ್ರೀಶ್ರೀ II ಒಂದು ಮತ್ತ ರುಭುಮಿಯ ಬಿಟ್ಟ ವಿವರ ತೋಟದ ಕೆಯ ಭುಂಗನ ಮೊರಡು ಮೊಲಾಗಿ ಅತ್ತಿಯಕೆ II"
"ಇಮೊದಲಾಗಿಸ್ತಳಮೂಜಕಂಮಾಮಣ್ಣುಸಹಿತ ಮತ್ತು ವೊಂದುಜಕೆನಾಯ್ಕನಹೆಂಡತಿಮಕ್ಕಳಗಸ"
"ಲಹುರುತಾಗಿಕೋಟಿನಾಯಕಯಅಜಕ್ಕೆಯನವೀರಾಳಾಕ್ಕೆಮೆಚ್ಚಿಅಚಂದ್ರಾರ್ಕ ತಾರಂಬರಂಕೊಟ್ಟಭೂಮಿ"
"ಕೋಟಿನ್ರಿಪಸಲ್ತನಡದಾಕೋಟಿಬಲಂಪೆರಸುವೀರಮೇನೊಳಿಅರಿಯಲ್ಕೋಟಿಸಿಗೆಲಲರಿದೆನಲಾನೋಟಕಜನವಾ"
"ದ್ದು೯ಪೊಗಳಜಕ್ಕೆಯನಿಅರಿದನು II ತೊಟ್ಸನಿರಿದಂತೆಕುದುರೆಯತಟ್ಟಿನೊಳಂತೆಯ್ದೆಪೊಕ್ಕುಕೋಟ ನ್ರಿಪಾಳ೦ನೆ "
"ಟ್ಟನೆಪೂರದಾಳನ್ನದಜೆಟ್ಟಿಗನಾಲೂರುಜಕ್ಕಕೌತುಕವೀರ0 II ಅಂತಾತಅರಿದುಮೆಅದುಸುರಲೋಕದಸುಖಮನೆ"
"ಯ್ದಿದನತ್ತಲಿತ್ತನಾತ ನಳಿಯಂ || ತಾನಯ ಮಾವನ ವೀರ ಮನು೦ನಾಗುತಗುಣನಿಳಯಮೇಚಿಗಂನೆಅರೆಕೇಳ್ವಾ | ಮಂನ"
"ಯವೀರಶಾಸನದುಂನತಿಯ೦ಮಾಡಿನಿಅರಿಸಿದಂದರೆ ಪೊಗಳಲು II"

1902 ರಲ್ಲಿ ರೈಸ್ ರವರು ಪ್ರಕಟಿಸಿದ ಎಪಿಗ್ರಾಫಿ ಕರ್ನಾಟಕದ ಸಂಪುಟದಲ್ಲಿ ಇದು ನಮೂದಾಗಿದೆ ಇನ್ನೊಂದು ವಿಶೇಷ ಅಂದರೆ ಸ್ವತಃ ರೈಸ್ ರವರೇ ಆನಂದಪುರಂಗೆ ಬೇಟಿ ನೀಡಿ ಇದನ್ನೆಲ್ಲ ದಾಖಲಿಸಿದ್ದಾರೆ.
   ಆನಂದಪುರಂ ಸುತ್ತಮುತ್ತಲಿನ ಶಿಲಾಶಾಸನ ಮತ್ತು ತಾಮ್ರಪತ್ರಗಳ ದಾಖಲೆಯಲ್ಲಿ
  ಎಪಿಗ್ರಾಫಿಯ ಕ್ರ.ಸಂ. 110. ಕ್ರಿಶ 1292 AD.
ಚೆನ್ನಶೆಟ್ಟಿಕೊಪ್ಪದ ಕೆರೆ ಬಳಿ ನೆಟ್ಟಿರುವ  8 ಅಡಿ ಎತ್ತರ ಮತ್ತು 5 ಅಡಿ ಅಗಲದ ವೀರ ಕಲ್ಲು.
  ಈ ಬೃಹತ್ ಶಿಲಾ ಶಾಸನ ಮುಂದಿನ ಪೀಳಿಗೆಗಾಗಿ ಈಗಲೇ ಸಂರಕ್ಷಿಸಿಕೊಳ್ಳಬೇಕಾಗಿದೆ ಇದು ಆನಂದಪುರಂ ಇತಿಹಾಸವನ್ನು ಕ್ರಿಸ್ತ ಶಕ 12 ನೇ ಶತಮಾನಕ್ಕೆ ಒಯ್ಯುವ ಅತ್ಯಂತ ಪುರಾತನ ದಾಖಲೆ ಕೂಡ ಮತ್ತು ಕೆಳದಿ ಅರಸರ ಆಳ್ವಿಕೆ ಮು೦ಚಿನ  ಈ ನಾಯಕರು ಯಾರು?  ಈ ಪ್ರದೇಶದಲ್ಲಿರುವ ಯೋದರೇ ಆಗಿದ್ದ ದೀವರ ನಾಯಕರಾ? ಈ ಬಗ್ಗೆ ಸಂಶೋದನೆಗಳಾಗಬೇಕು ಹಾಗಾದಲ್ಲಿ ಕೆಳದಿ ನಾಯಕರು ಯಾರು? ಇವರೇ ವಿಜಯನಗರದ ಅರಸರ ಪ್ರಭಾವದಿಂದ ವೀರಶೈವ ಧರ್ಮ ಸ್ವೀಕರಿಸಿದರಾ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ