#ಮಳೆ_ನಿಂತ_ಮೇಲೆ..... #ನಮ್ಮ_ಊರು #ಈ_ವರ್ಷದ_ಆರಿದ್ರಾ_ಮಳೆ_ನಿರಾಸೆ_ತರಿಸಲಿಲ್ಲ #ಪಕ್ಕದ_ಹೊಸನಗರ_ತೀರ್ಥಹಳ್ಳಿಗಳಲ್ಲಿ_ಭರಪೂರ_ದಾರೆ. https://youtu.be/iw-Mtdg1EP0?si=oXUseIPI70wdx9CJ ನಮ್ಮ ಆನಂದಪುರಂ ಊರು ಮಲೆನಾಡ ಮಧ್ಯದಲ್ಲಿತ್ತು ಈಗ ಕ್ರಮೇಣ ಮಲೆನಾಡ ಅಂಚಿಗೆ ಸರಿದಿದೆ ಅಂದರೆ ಬಯಲು ಸೀಮೆಯ ಲಕ್ಷಣಗಳು ಸಮೀಪಿಸುತ್ತಿದೆ. ಆರಿದ್ರಾ ಮಳೆ ನಾಳೆ ರಾತ್ರಿಗೆ ಮುಗಿಯಲಿದೆ, ಕಳೆದ ವರ್ಷಗಳಂತೆ ಈ ಮಳೆ ಈ ವರ್ಷ ನಿರಾಸೆ ತರಿಸಲಿಲ್ಲ ರೈತರು ಆರಿದ್ರಾ ಮಳೆ ಜೊತೆಯಲ್ಲೇ ಆದ್ರೆ ಮಳೆ ಹಬ್ಬ ಆಚರಿಸಿದ್ದಾರೆ. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಳೆ ಸುರಿಸಿದೆ ಮಧ್ಯಾಹ್ನ ಸಣ್ಣ ಬಿಸಿಲೂ ತಪ್ಪಲಿಲ್ಲ, ಇವತ್ತು ಮಳೆ ನಿಂತ ಮೇಲೆ ನಮ್ಮ ಲಾಡ್ಜ್ ನ ಲಿಫ್ಟ್ ಮೆಷಿನ್ ರೂಮಿನಿಂದ ನಮ್ಮ ಊರ ವೃತ್ತ, ರಾಷ್ಟ್ರೀಯ ಹೆದ್ದಾರಿ, ಕೆರೆ ಮತ್ತು ಅದರ ಕೆಳಗಿನ ವಿಶಾಲ ಗುಂಡಿ ಗದ್ದೆ ಬಯಲು ನೋಡಿ.