Blog number 2166. ಆನಂದಪುರಂ ಶ್ರೀಮತಿ ಕನಕಮ್ಮಳ್ ಆಸ್ಪತ್ರೆಗೆ ಪ್ರಥಮ ಕ್ಷ-ಕಿರಣ ಯಂತ್ರ ಜಿಲ್ಲಾ ಪಂಚಾಯತ್ ನಿಂದ ಮಂಜೂರು ಮಾಡಿಸಿ ಶಿವಮೊಗ್ಗ ಲೋಕಸಭಾ ಸದಸ್ಯರು ಮತ್ತು ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಿಂದ ಉದ್ಘಾಟನೆ ಮಾಡಿಸಿದ ನನ್ನ ಸಾದನೆಯ ನೆನಪು
#ಲೋಕಸಭಾ_ಸದಸ್ಯರಾಗಿದ್ದ_ಬಂಗಾರಪ್ಪರಿಂದಲೇ_ಕ್ಷ_ಕಿರಣ_ಯಂತ್ರ #ಉದ್ಘಾಟನೆ_ಮಾಡಿಸ_ಬೇಕೆಂಬ_ನನ್ನ_ಶಪತ #ದಿನಾಂಕ_19_ಆಗಸ್ಟ್_1996ರಂದು_ಕಾರ್ಯರೂಪಕ್ಕೆ #ಇದು_ಆನಂದಪುರಂ_ಕನಕಮ್ಮಳ್_ಆಸ್ಪತ್ರೆ_ಇತಿಹಾಸದ_ಮೊದಲ_ಕ್ಷಕಿರಣ_ಯಂತ್ರ #ಸಾಗರ_ತಾಲ್ಲೂಕಿನ_ಕೃಷಿ_ಇಲಾಖೆಯ_ಕೋಟ್ಯಾಂತರ_ರೂಪಯಿ #ಅವ್ಯವಹಾರ_ಬಯಲು_ಮಾಡಿ_ಆಗಿನ_ಕೃಷಿ_ಮಂತ್ರಿ_ಬೈರೇಗೌಡರಿಂದ #ತನಿಖೆ_ಮಾಡಿಸಿ_7ಜನ_ಕೃಷಿ_ಇಲಾಖೆ_ಅಧಿಕಾರಿಗಳ_ಜೈಲಿಗೆ_ಕಳಿಸಿದ್ದರಿಂದ #ಜಿಲ್ಲಾ_ಪಂಚಾಯಿತಿ_ಸದಸ್ಯನಾದ_ನಾನು_ಮತ್ತು_ತಾಲೂಕು_ಪಂಚಾಯಿತಿ #ಅಧ್ಯಕ್ಷ_ಬೀಮನೇರಿ_ಶಿವಪ್ಪರನ್ನ_ಕಾಗೋಡು_ಬಣ_ದೂರ_ಇಟ್ಟಿದ್ದ_ಕಾಲವದು. 19 ಆಗಸ್ಟ್ 1996ರಂದು ನಮಗೆಲ್ಲ ಸಂಭ್ರಮದ ದಿನವಾಗಿತ್ತು ಕಾರಣ ಅವತ್ತು ಆನಂದಪುರಂನ ಶ್ರೀಮತಿ ಕನಕಮ್ಮಳ್ ಆಸ್ಪತ್ರೆಗೆ ಕ್ಷ-ಕಿರಣ ಯಂತ್ರ ಉದ್ಘಾಟನೆ ಮಾಜಿ ಮುಖ್ಯಮಂತ್ರಿಗಳು ಮತ್ತು ಶಿವಮೊಗ್ಗ ಲೋಕ ಸಭಾ ಸದಸ್ಯರಾಗಿದ್ದ ಬಂಗಾರಪ್ಪನವರಿಂದ ಉದ್ಘಾಟನಾ ಸಮಾರಂಭ ಹಮ್ಮಿಕೊಂಡಿದ್ದೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ನಾನು ಈ ಆಸ್ಪತ್ರೆ ಅಭಿವೃದ್ದಿ ಸಮಿತಿ ಅಧ್ಯಕ್ಷನೂ ಆಗಿರುವುದರಿಂದ ಈ ಆಸ್ಪತ್ರೆಯಲ್ಲಿ ಎಕ್ಸ್ ರೇ ಯಂತ್ರ ಇಲ್ಲದ್ದರಿಂದ ಸ್ಥಳಿಯರಿಗೆ ಸಣ್ಣ ಪುಟ್ಟ ಮೂಳೆ ಮುರಿತವಾದರೆ ಸಾಗರ ಅಥವ ಶಿವಮೊಗ್ಗಕ್ಕೆ ಎಕ್ಸರೇ ತೆಗೆಸಲು ಹೋಗಬೇಕಾಗಿತ್ತು. ಆನಂದಪುರಂನ ಆಸ್ಪತ್ರೆ ವೈದ್ಯರು ಎಕ್ಸರೇ ಯಂತ್ರ ಇದ್ದಿದ್ದರೆ ನಾವೇ ಮೂಳೆ ಮುರಿತಕ್...