#ಮುಂಗಾರು_ಬಿರುಸಾಗಿದೆ_ಎಲ್ಲೆಡೆ #ತಣ್ಣನೆಯ_ಸುಳಿ_ಗಾಳಿ_ಬೀಸುತ್ತಿದೆ. #ಜಲದ_ಬುಗ್ಗೆ_ಒಡೆಯುವ_ಕಾಲ #ಪರಸ್ಪರವಾಗಿ_ಸಂಪ್ರದಾಯಿಕವಾಗಿ_ಕೇಳುವ_ಪ್ರಶ್ನೆ #ನಿಮ್ಮಲ್ಲಿ_ಜಲದ_ಕಣ್ಣು_ಒಡೆಯಿತಾ? #ನೀರಿನ_ಒರತೆ_ಎದ್ದಿದಿಯಾ? ಮದ್ಯಾಹ್ನ ಊಟ ಆಯಿತಾ ಎಂದು ಕೇಳುವ ಸಂಪ್ರದಾಯದಂತೆ ಮುಂಗಾರಿನ ಮಳೆಗಾಲದ ಮಧ್ಯದಲ್ಲಿ ನಿಮ್ಮಲ್ಲಿ ಜಲ ಒಡಿತಾ? ಒರತೆ ಎದ್ದಿದಿಯಾ? ಎಂಬ ಪ್ರಶ್ನೆ ಸಹಜ ಯಾಕೆ?. ಪುನರ್ವಸು-ಪುಷ್ಯಾ - ಆಶ್ಲೇಷ ಮಳೆ ಮುಗಿದಾಗ ಆಗಸ್ಟ್ ಮಧ್ಯಭಾಗ ಬಂದಿರುತ್ತದೆ ಆಗಲೇ ಮಘಾ ನಕ್ಷತ್ರದ ಮಳೆ (ಆಡುಮಾತಿನಲ್ಲಿ ಮಗೆ ಮಳೆ) ಪ್ರಾರಂಭವಾದಾಗ ಚಳಿಯ ಸುಳಿಗಾಳಿಯ ಜೊತೆ ಮಳೆ ಬೀಳುವಾಗ ಜಲ ಒಡೆಯುತ್ತದೆ ಈ ಜಲದ ನೀರು ಸ್ವಚ್ಚ ಸ್ಪಟಿಕದಂತೆ ಹರಿಯುತ್ತದೆ. ಜಲ-ಬುಗ್ಗೆ - ಒರತೆ ಮುಂತಾದ ಪ್ರಾದೇಶಿಕ ಭಾಷೆಯಲ್ಲಿ ಕರೆಯುವ ಮಳೆಗಾಲದ ನೀರಿನ ಒರತೆ ಎದ್ದಿತೂ ಅಂದರೆ ಆ ವರ್ಷದ ಮಳೆ ಭೂಮಿಗೆ ಹದವಾಗಿ ತಲುಪಿತು ಅಂತಲೇ ಅರ್ಥ, ಇತ್ತೀಚಿಗೆ ಎಷ್ಟೋ ಮಳೆಗಾಲದಲ್ಲಿ ಮಳೆ ಪ್ರಮಾಣ ಕಡಿಮೆಯಿಂದ ಜಲ ಒಡೆಯುವುದಿಲ್ಲ. ಮಳೆ ಜಾಸ್ತಿ ಆಗಿ ಚಳಿಯ ಸುಳಿಗಾಳಿ ಪ್ರಾರಂಭ ಆಯಿತೆಂದರೆ ಜಲದ ಬುಗ್ಗೆಗಳು ಎದ್ದಿದೆ ಎಂದೇ ಅರ್ಥ. ಭೂಮಿಯು ಸರಿಯಾದ ಮಳೆ ನೀರು ದಾರಣೆ ಆದರೆ ನೈಸರ್ಗಿಕ ಒತ್ತಡದಿಂದ ಭೂಮಿಯಲ್ಲಿನ ಹೆಚ್ಚು ಪ್ರಮಾಣದ ಸೀಪೇಜ್ ನೀರು ಭೂಮಿ ಒಡೆದು ಹೊರ ಬರುತ್ತದೆ. ಒತ್ತಡ ಹೆಚ್ಚಿದ್ದಲ್ಲಿ ಬುಗ್ಗೆಯಾಗಿ...