#ಅನ್ನಬಾಗ್ಯ_ಅಕ್ಕಿ_ವರ್ಸಸ್_ಸೋನಾಮಸೂರಿ_ಅಕ್ಕಿ #ವಿಬಿನ್ನ_ಮನಸ್ಥಿತಿಯ_ಅಂತಸ್ಥಿನ_ಸ್ಥಾನಮಾನ #ಅನ್ನಭಾಗ್ಯದ_ಅಕ್ಕಿಯಿಂದ_ಜನ_ಸೋಮಾರಿಗಳಾಗುತ್ತಾರೆ_ಎನ್ನುವವರೂ_ಇದ್ದಾರೆ #ಸೊಸೈಟಿ_ಅಕ್ಕಿ_ತಿನ್ನುವುದಿಲ್ಲ_ಎನ್ನುವುದು_ದೊಡ್ಡಸ್ಥಿಕೆ. #Rice #Sonamasoori #Annabhagya ನುಚ್ಚಕ್ಕಿ - ನೆಲ್ಲಕ್ಕಿ - ಮುಗ್ಗುಲಕ್ಕಿಗಳಿಗೆಲ್ಲ ಒಂದು ಕಾಲದಲ್ಲಿ ಬೇದವಿರಲಿಲ್ಲ ಅಂತಹ ಎಲ್ಲಾ ಅನ್ನ ತಿಂದೇ ದೊಡ್ಡವರಾಗಿದ್ದು ನಾನು ಮರೆತಿಲ್ಲ. #ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ ಎಂಬ ಸರ್ವಜ್ಞ ವಚನ ಜನ ಮನದಲ್ಲಿತ್ತು. ಈಗ ಮೇಲಿನ ಅಕ್ಕಿ ಬಿಡಿ, ಸೊಸೈಟಿ ಅಕ್ಕಿ ಎಂಬ ಅನ್ವರ್ಥ ನಾಮದ ಅನ್ನ ಭಾಗ್ಯದ ಅಕ್ಕಿ ಅಂದರೆ ಮೂಗು ಮುರಿಯುವ ಜನರ ಕಾಲ ಇದಾಗಿದೆ. ಅನ್ನಭಾಗ್ಯದಿಂದ ಸೋಮಾರಿಗಳು ಸೃಷ್ಟಿ ಆಗುತ್ತಾರೆ ಅಂತ ಒಬ್ಬ ಮಠದ ಸ್ವಾಮಿಯ ಹೇಳಿಕೆ ನೋಡಿದೆ ಆತ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಪಡೆಯುವ ಹೈಟೆಕ್ ಬಿಪಿಎಲ್ ಕಾರ್ಡ್ ದಾರ. ದಿನಕ್ಕೆ 150 ರೂಪಾಯಿಗಿಂತ ಕಡಿಮೆ ಆದಾಯದವರು ಬಡತನ ರೇಖೆಗಿಂತ ಕೆಳಗಿನವರೆಂಬ ಮಾನದಂಡದಲ್ಲಿ ಭಾರತದಲ್ಲಿ ಶೇಕಡಾ 12.4% ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪಡಿತರ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಿದೆ ಇದಕ್ಕಾಗಿ ಆ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ಗಳನ್ನು ವಿತರಿಸುತ್ತಾರೆ. #ಅನ್ನ_ಬಾಗ್ಯ ...