Skip to main content

Posts

Showing posts with the label My morning session with my loving Ratwailer Shambhurama

Blog number 2148. ನನ್ನ ಪ್ರೀತಿಯ ಶಂಭೂರಾಮನ ಜೊತೆ ಇವತ್ತಿನ ಬೆಳಗು

#ಎಂದಿನಂತೆ_ಇವತ್ತಿನ_ಬೆಳಗು_ಆದರೆ #ರಾಟವೀಲರ್_ರೋಟಿನ್ #ನನಗೆ_ಮತ್ತು_ನನ್ನ_ಪ್ರೀತಿಯ_ಶಂಭೂರಾಮನಿಗೆ_ಮಾತ್ರ_ನಿತ್ಯ_ನೂತನ #ಅವನ_ದೃಡವಾದ_ಸಂಯಮ_ನಮಗೆ_ಅನುಕೂಲವಾಗಿದೆ  #ಮತ್ತು_ಅವನ_ಮೇಲೆ_ಹೆಚ್ಚು_ಪ್ರೀತಿಗೆ_ಕಾರಣವಾಗಿದೆ. https://youtu.be/KqLC-NL32pI?feature=shared    ನಿತ್ಯ ನೂತನದ ಇವತ್ತಿನ ಬೆಳಗು ನನ್ನ ಮತ್ತು ಶಂಭೂರಾಮನ ಬೆಳಗಿನ ಒಂದು ಗಂಟೆಯ ವಾಕಿಂಗ್ ಪ್ರಾರಂಭಕ್ಕೆ ಮೊದಲಿನ ಕೆಲ ತಯಾರಿಗಳು ಇದೆ.  ಮೊದಲಿಗೆ ಅವನಿಗೆ ಕುಡಿಯುವ ನೀರು ಬಾಟಲ್ ನಲ್ಲಿ ತುಂಬಿಸಿ ಕೊಳ್ಳುವುದು, ಅವನ ಪೀಡಿಂಗ್ ಪ್ಲೇಟಿಗೆ ತೊಳೆದು ಸ್ಲೈಸ್ ಮಾಡಿದ ಸಲಾಡ್ ಸೌತೆ, ಬಾಳೆಹಣ್ಣು, ಅವನ ಸ್ಟ್ರಾಪ್, ಬಿಸ್ಕಿಟ್, ಗೇಟಿಗೆ ಹಾಕುವ ಬೇಗಗಳು, ನನ್ನ ಆಫೀಸ್ ಹಿಂಭಾಗದ ಬಾಗಿಲ ಬೀಗದ ಕೀ, ಬ್ಲೀಚಿಂಗ್ ಪುಡಿ ಡಬ್ಬಿ, ನನ್ನ ಶೂ, ನನ್ನ ವಾಕಿಂಗ್ ಪಾತ್ ಗಾರ್ಡನ್ ಹೂವಿನ ಗಿಡಕ್ಕೆ ಹಾಕುವ ನೀರು ತುಂಬಿದ ಬಕೇಟ್ ಜಗ್, ಪಿಟ್ನೆಸ್ ಟ್ರಾಕರ್ ಸಮೇತ ತಯಾರಾಗಬೇಕು.   ನಂತರ ಎಲ್ಲಾ ಗೇಟುಗಳ ಲಾಕ್ ಮಾಡಿದ ನಂತರ ಶಂಭೂರಾಮನಿಗೆ ತರಕಾರಿ ನೀಡುವ ಕೆಲಸ ಅವನು ಅದಕ್ಕಾಗಿ ಅವನು ನಿರ್ದಿಷ್ಟ ಜಾಗದಲ್ಲಿ ಕುಳಿತುಕೊಳ್ಳುತ್ತಾನೆ ನನಗೆ ಪ್ರತಿ ತುತ್ತಿಗೆ ಎರೆಡು ಥ್ಯಾಂಕ್ಸ್ ಕೊಡುತ್ತಾನೆ.   ನನ್ನ ಒಪ್ಪಿಗೆ ಇಲ್ಲದಿದ್ದರೆ ತಿನ್ನುವುದಿಲ್ಲ, ಒತ್ತಾಯದಿಂದ ಬಾಯಿಗೆ ತುರುಕಿದರೂ ಊಹೂಂ....ತಿನ್ನುವುದಿಲ್ಲ ನನ್ನ ಒಪ್ಪಿ...