Skip to main content

Posts

Showing posts with the label Kuntagodu krishnappa great personality and hundred years of valuable life.

Blog number 1733. ಶತಾಯುಷಿ ಜ್ಞಾನಿ ಎಲೆ ಮರೆಯ ಕಾಯಿಯಂತೆ ಸಾರ್ಥಕ ಜೀವನ ಸವೆಸಿದ ಕುಂಟಗೋಡು ಕೃಷ್ಣಪ್ಪ.

#ಗೆಳೆಯರಾದ_ನಾಗೇಂದ್ರ_ಸಾಗರ್_ಕುಂಟಗೋಡಿನ_ಶತಾಯುಷಿ_ಕೃಷ್ಣಪ್ಪರ_ಬಗ್ಗೆ_ಬರೆದ #ಆಪ್ತ_ಲೇಖನದಿಂದ_ಹಳೆಯ_ನೆನಪುಗಳು_ಮರುಕಳಿಸಿದಾಗ.           #ಚಿತ್ರಕೃಪೆ_ನಾಗೇಂದ್ರಸಾಗರ್        ಇವತ್ತು ಬೆಳಗಿನ ಗೆಳೆಯ ನಾಗೇಂದ್ರ ಸಾಗರ್ ಜನಪರ ಹೋರಾಟಗಾರ ಕುಂಟಗೋಡು ಸೀತಾರಾಂ ಅವರ ಮನೆಗೆ ಹೋಗಿ ಅವರ ಶತಾಯುಷಿ ತಂದೆ- ಜ್ಞಾನಿ - ಮಾನವತಾವಾದಿ ಕುಂಟಗೋಡು ಕೃಷ್ಣಪ್ಪರ ಯೋಗ ಕ್ಷೇಮ ವಿಚಾರಿಸಿದ ಪೋಸ್ಟ್ ನೋಡಿದಾಗ ನನಗೆ ಕುಂಟಗೋಡು ಕೃಷ್ಣಪ್ಪರ ನೆನಪುಗಳು ಮರುಕಳಿಸಿತು ಈ ವಾರದಲ್ಲಿ ಅವರ ಮನೆಗೆ ಹೋಗಿ ಅವರ ಹತ್ತಿರ ಮಾತಾಡಿ ಬರಬೇಕೆಂಬ ತೀಮಾನ ಮಾಡಿದ್ದೇನೆ ಅವರ ಸಂಪರ್ಕ ಆಗಲು ಕಾರಣವಾದ ಘಟನೆ ಇಲ್ಲಿ ದಾಖಲಿಸಿದ್ದೇನೆ .....    1993 ರಲ್ಲಿ ಸಾಗರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷರುಗಳ ಒಕ್ಕೂಟ ರಚಿಸಿಕೊಂಡಾಗ (ಪಂಚಾಯಿತ್ ರಾಜ್ ಕಾಯ್ದೆಯಲ್ಲಿಲ್ಲ) R.C. ಮಂಜಪ್ಪ ಕೆಳದಿ ಅಧ್ಯಕ್ಷರಾಗಿ ಸಂಚಾಲಕರಾಗಿ ಕುಂಟಗೋಡು ಸೀತಾರಾ೦, ಪ್ರದಾನ ಕಾರ್ಯದರ್ಶಿ ಆಗಿ ನಾನು, ಕಾರ್ಯದರ್ಶಿ ಆಗಿ ಯಡಜಿಗಳೆ ಮನೆ ಮಹಾದೇವ, ಸಹ ಕಾರ್ಯದರ್ಶಿ ಆಗಿ ಪತ್ರಕರ್ತ ಹಿತಕರ ಜೈನರ ತಾಯಿ, ತುಮರಿಯ ಶ್ರೀಮತಿ ಮಮತಾ ಹೀಗೆ ಒಂದು ಸಂಘಟನೆಯಿಂದ ತಾಲ್ಲೂಕಿನ ಗ್ರಾಮ ಪಂಚಾಯಿ ಆಡಳಿತದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಕ್ರಿಯ ಸಮರ್ಪಕ ಸಹಕಾರ ಸಹಭಾಗಿತ್ವ ತರಲು ಈ ಒಕ್ಕೂಟ ರಚಿಸಿ ದಾಗಿಂದ ಕುಂ...