Skip to main content

Posts

Showing posts with the label Magsesse award winner K.V.Subbanna circulated pomplte apposing upper caste organisation

Blog number 1850. ಮೇಲ್ಜಾತಿ ಬ್ರಾಹ್ಮಣ ಸಂಘಟನೆ ಬಗ್ಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ. ವಿ. ಸುಬ್ಬಣ್ಣರ ಕರಪತ್ರದ ಬಗ್ಗೆ ಹೆಚ್ಚು ಚರ್ಚೆ ಮತ್ತು ವಿಮರ್ಶೆಗಳಾಗಲಿ.

#ಮೇಲ್ಜಾತಿ_ಸಂಘಟನೆ_ಬಗ್ಗೆ_ಕೆವಿ_ಸುಬ್ಬಣ್ಣರ_ಪ್ರತಿಭಟಿನೆ_ಕರ_ಪತ್ರ #ಸಾಗರದಲ್ಲಿ_1982ರ_ಪೆಬ್ರುವರಿ_6_ಮತ್ತು_7ರಲ್ಲಿ_ನಡೆದ_ಅಖಿಲ_ಹವ್ಯಕ_ಮಹಾಸಮ್ಮೇಳನದಲ್ಲಿ. #ದೇಶದ_ಖ್ಯಾತ_ಪತ್ರಕರ್ತ_ಡಿಪಿ_ಸತೀಶ್ #ನಾಡಿನ_ಖ್ಯಾತ_ವಿಮರ್ಶಕ_ಅರವಿಂದ_ಚೊಕ್ಕಾಡಿ #ಧೀರ_ಹವ್ಯಕ_ಕನ್ನಡಿಗ_ಅನಿವಾಸಿ_ಭಾರತೀಯ_ಶಾಂತರಾಮ_ಹೆಗಡೆಕಟ್ಟೆ  #ಜಾತಿ_ಆಚರಣೆ_ವಿರೋದಿಸಿದ್ದಾರೆ.     ಹೆಗ್ಗೋಡಿನ ನೀನಾಸಂ - ಸಂಸ್ಥೆ ನಾಟಕ ಮತ್ತು ಸಿನಿಮಾ ಜನರಿಗೆ ಹೇಗೆ ಚಿರಪರಿಚಿತವೋ ಹಾಗೆಯೇ ಇದರ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ತಮ್ಮ ವಿಚಾರ ಮತ್ತು ಬರವಣಿಗೆಯಿಂದ ವಿಶ್ವವಿಖ್ಯಾತರು.    ಅಂತರಾಷ್ಟ್ರೀಯ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರು ಶಿವಮೊಗ್ಗ, ಜಿಲ್ಲೆಯ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಹೆಗ್ಗೋಡಿನವರು ಮತ್ತು  ನಮ್ಮ ತಾಲ್ಲೂಕಿನವರು ಅಂತ ನಮಗೆಲ್ಲ ಕೆ.ವಿ.ಸುಬ್ಬಣ್ ಅಂದರೆ ಹೆಮ್ಮೆ.      ಒಮ್ಮೆ ನೀನಾಸಂ ಸಭಾ0ಗಣದಲ್ಲಿ ಸುಬ್ಬಣ್ಣನವರ ಜೊತೆ ಸಭೆ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ, ದೇವಾಡಿಗ ಜಾತಿಯ (ವೀರಪ್ಪ ಮೊಯ್ಲಿ) ಜಾತಿ ಸಮಾವೇಶವದು, ಸಂಘಟಕರು ನನ್ನನ್ನ ಕರೆದಾಗ ನನಗೆ ನಂಬಲಿಕ್ಕೆ ಆಗಲಿಲ್ಲ, ಸಣ್ಣ ಜಾತಿ ಸಮಾವೇಶಕ್ಕೆ ಸುಬ್ಬಣ್ಣ ಬರುವುದು ಅನುಮಾನ ಅಂದೆ. ಇಲ್ಲ ಒಪ್ಪಿದಾರೆ ಮತ್ತು  ಸಬಾoಗಣ ಉಚಿತವಾಗಿ ನೀಡಿದ್ದಾರೆ ಅಂದರು.       ಅವತ್ತಿನ ಸಭೆಯಲ್ಲಿ ಸುಬ್ಬಣ್ಣರ ಬಾಷಣ ಸ...