Skip to main content

Posts

Showing posts from September, 2021

ಹದಿನಾರನೆ ವಯಸ್ಸಲ್ಲಿ ದಿನಸಿ ಅಂಗಡಿ ವ್ಯವಹಾರ

#ಹೊಟ್ಟೆಪಾಡಿಗಾಗಿ_ಉದ್ಯೋಗದಲ್ಲಿ_ಅವತಾರಗಳು #ವಿದಿಯಾಟದ_ಜೀವನ_ಪಲ್ಲಟವಲ್ಲವೇ?     #ನಲವತ್ತೊಂದು_ವರ್ಷದ_ಹಿಂದಿನ_ನೆನಪಿನ_ಚಿತ್ರ.   1980 ರಲ್ಲಿ ನಾನು ಎಸ್. ಎಸ್.ಎಲ್.ಸಿ ಆದರೆ ಎಂಟನೆ ತರಗತಿಯಿಂದನೇ ಸಾಗರದ ಮುನ್ಸಿಪಲ್ ಹೈಸ್ಕೂಲ್ ಗೆ ಚಕ್ಕರ್ ಪ್ರತಿ ದಿನ ಆನಂದಪುರಂನಿಂದ ಬರುತ್ತಿದ್ದ ಗೆಳೆಯನ ಜೊತೆ ಸಾಗರ ರೈಲು ನಿಲ್ದಾಣದ ಎದುರಿನ ಪುಟ್ಬಾಲ್ ಮೈದಾನದಲ್ಲಿ ಕ್ರಿಕೆಟ್.   ಹಾಗಾಗಿ ಆ ವರ್ಷ ಪರೀಕ್ಷೆ ತೆಗೆದುಕೊಳ್ಳದೆ ಒಂದು ವರ್ಷ ಓದಿ ಎಸ್.ಎಸ್.ಎಲ್.ಸಿ ಪರೀಕ್ಷೆ ತೆಗೆದುಕೊಳ್ಳುವುದೆಂದು ತೀರ್ಮಾನಿಸಿ ಬಿಟ್ಟಿದ್ದೆ ಆದರೆ ನನ್ನ ತೀರ್ಮಾನ ಪರೀಕ್ಷೆಗೆ ಒಂದು ವಾರ ಇರುವಾಗ ತಂದೆಯವರಲ್ಲಿ ತಿಳಿಸಿದಾಗ ಅವರು ಒಪ್ಪಲೇ ಇಲ್ಲ ಆದ್ದರಿಂದ ಸಾಗರದ ಶ್ರೀ ಟ್ರೇಡರ್ಸ್ ನಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ಸಮಾಜಶಾಸ್ತ್ರದ ಎಸ್ ಎಸ್.ಎಲ್.ಸಿ ಬಂದು ಎಂಬ (ಆ ಕಾಲದ ಪ್ರಸಿದ್ದ ಗೈಡುಗಳು) ಗೈಡ್ ಖರೀದಿಸಿ ಓದಿ ಈ ನಾಲ್ಕು ಸಬ್ಜೆಕ್ಟ್ ಉತ್ತಮ ಅಂಕದಲ್ಲೇ ಪಾಸು ಮಾಡಿದೆ.    ಗಣಿತ ಮತ್ತು ವಿಜ್ಞಾನ ಪರೀಕ್ಷೆ ಬರೆಯಲೇ ಇಲ್ಲ, ಅದನ್ನು ಆನಂದಪುರಂ ರತ್ನಾಕರ ಮಾಸ್ಟರ್ ಎಂಬ ಸಹೃದಯಿ ಶಿಕ್ಷಕರಿಂದ ಟ್ಯೂಷನ್ ಪಡೆದು ಸಪ್ಲಿಮೆಂಟರಿ ಪರೀಕ್ಷೆ ಪಾಸು ಮಾಡಿಕೊಂಡೆ.   ಈ ಒಂದು ವರ್ಷದ ಗ್ಯಾಪ್ ನ್ನು ಸದುಪಯೋಗ ಮಾಡಿಕೊಳ್ಳಲು ದಿನಸಿ ಅಂಗಡಿ ಕನಸು ಕಂಡಿದ್ದೆ ಆಗಲೇ ನನ್ನ ತಂದೆಯ ಗೆಳೆಯರು, ನಮ್ಮ ಕುಟುಂಬದ ಶ್ರೇಯಸ್ಸು ಯಾವತ್ತೂ ಬಯಸುವ

ವಂತಿಕೆ ಕೇಳಲು ಬಂದವರಿಗೆ ಅವಮಾನ ಆಗಬಾರದೆಂಬ ಬಾಗಿಸತ್ಯನಾರಾಯಣರ ತಂದೆಯವರ ಆಶಯ ಎಲ್ಲರಿಗೂ ನೀತಿ ಪಾಠ.

#ಕೆಲವು_ಸಂದರ್ಭ_ಘಟನೆ_ಜೀವನದ_ಪಾಠ_ಕಲಿಸುತ್ತವೆ.  #ಹೆಗ್ಗೋಡಿನ_ಬಾಗಿಸತ್ಯನಾರಾಯಣರಿಂದ     ಹೆಗ್ಗೋಡಿನ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದ (1995-2000) ಭಾಗಿ ಸತ್ಯನಾರಾಯಣರ ಮನೆಗೆ ನಾನು ಮತ್ತು ಆಗಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಬೀಮನೇರಿ ಶಿವಪ್ಪ ಒಂದು ಸಂಜೆ ಹೋಗಿದ್ದೆವು.   ಲೋಕಾರೂಡಿ ಮಾತಾಡಿ ಹೋಗುವ ಉದ್ದೇಶವಾಗಿತ್ತು ಆ ಸಂದರ್ಭದಲ್ಲೇ ಅವರಿಗೆ ಪರಿಚಿತರೋರ್ವರು ಬಂದರು. ಅವರ ಬೇಟಿ ಉದ್ದೇಶ ಯಾವುದೋ ಕಾರಣಕ್ಕೆ ದೇಣಿಗೆಗಾಗಿ ರಶೀದಿ ಪುಸ್ತಕ ಮುಂದೆ ಮಾಡಿದರು.   ನಾನು ಇದನ್ನು ಮೌನವಾಗಿ ವೀಕ್ಷಿಸುತ್ತಿದ್ದೆ ಅಲ್ಲಿಯವರೆಗೆ ನಾನು ಈ ರೀತಿ ದೇಣಿಗೆ ಕೇಳಲು ಬಂದವರಿಗೆ ಪ್ರಶ್ನೆ ಹಾಕುವುದು, ನನ್ನ ದೇಣಿಗೆ ಹಣ ಸದ್ವಿನಿಯೋಗ ಆದೀತಾ ಎಂಬ ಅನುಮಾನ, ಹೀಗೆ ಬರುವವರೆಲ್ಲ ಎ೦ತವರೋ ? ಇತ್ಯಾದಿ ಭಾವನೆಯಲ್ಲೇ ಸ್ವಲ್ಪ ಜುಗ್ಗತನದಿಂದ ದೇಣಿಗೆ ನೀಡುವುದು ಅನುಮಾನ ಅನ್ನಿಸಿದರೆ ನಿಮ್ಮ ಸಂಸ್ಥೆಗೆ ನೇರ ಜಮ ಮಾಡುತ್ತೇನೆ ಅಂತ ತಿರಸ್ಕರಿಸುವ, ನನಗೇ ಅರಿವಿಗೆ ಬಾರದೇ ಕುಹಕ ಮನಸ್ಥಿತಿಯವನಾಗಿದ್ದೆ.    ರಶೀದಿ ಪುಸ್ತಕದೊಂದಿಗೆ ಒಳ ಹೋದ ಭಾಗಿಸತ್ಯನಾರಾಯಣರು ಒ0ದು ನೂರು ರೂಪಾಯಿ ತಂದು ಅವರ ಕೈಗೆ ಇಟ್ಟು "ಇವತ್ತು ನನಗೆ ಇಷ್ಟು ನೀಡಲು ಸಾಧ್ಯವಾಗಿದೆ ಸ್ವೀಕರಿಸಿ" ಅಂತ ನಯವಾಗಿ ವಿನಂತಿಸಿದರು, ದೇಣಿಗೆ ಪಡೆದವರು ಹೋದ ನಂತರ ಕೇಳಿದಾಗ ಅವರು ಹೇಳಿದ್ದು ಇದು ಅವರ ತಂದೆಯವರ ನಿರ್ಧೇಶನವನ್ನು ಇವರು ಪಾಲಿಸಿಕೊಂಡು ಬ

ನನ್ನ ಶಂಭುವಿಗೆ ಆರು ತಿಂಗಳು .

#ನನ್ನ_ಪ್ರೀತಿಯ_ಶಂಭುವಿಗೆ_ಆರು_ತಿಂಗಳು .   ರಾಟ್ ವೀಲರ್ ತಳಿ ಸಾಕುವ ಆಸೆ ಬಹು ವರ್ಷದ್ದು ಇದಕ್ಕೆ ತಯಾರಿ ಮಾಡಿಕೊಂಡು ಮೂರು ವರ್ಷ ಆಗಿತ್ತು, ಊಟಿಯಲ್ಲಿ ಕೆನಲ್ ಪಾರಂ ಇರುವ ವಿದೇಶದಲ್ಲಿ ಉದ್ಯೋಗದಲ್ಲಿರುವ ಜಗನ್ ರೂ ಸ್ಥಳಕ್ಕೆ ಬಂದು ಸಲಹೆ ನೀಡಿದ ಪ್ರಕಾರ ಮನೆ ಸುತ್ತಲೂ ಗೇಟ್ ಇತ್ಯಾದಿ ಅಳವಡಿಸಿದ್ದೆ.   ಈ ವರ್ಷ ಪುನಃ ಕೊರಾನಾ ಲಾಕ್ ಡೌನ್‌ ಶುರುವಾಗುವಾಗಲೆ ಮಗಳು ಅಳಿಯ ಬೆಂಗಳೂರಿಂದ ನಂಬಿಕಸ್ಥ ಕೆನಲ್ ಪಾರಂನಿಂದ 25 ದಿನದ ಶಂಭುವನ್ನು ಹುಟ್ಟಿದ ದಾಖಲೆ ಅದರ ವಂಶವಾಹಿಯ ಮಾಹಿತಿಯ ದಾಖಲೆಯೊಂದಿಗೆ ತಂದು ಕೊಟ್ಟರು.   ಸರಿಯಾಗಿ ತರಬೇತಿ ಸಣ್ಣವನಿಂದಲೆ ನೀಡದಿದ್ದರೆ ಅನೇಕ ಅನಾಹುತಕ್ಕೆ ಕಾರಣ ಆಗುವುದು ಸತ್ಯ, ಇದಕ್ಕೆ ಉದಾಹರಣೆ ನಮ್ಮ ಗೆಳೆಯರದ್ದೆ ನೋಡಿ,ಅವರ ಗೆಳೆಯರು ಸುಮಾರು ಆರು ತಿಂಗಳ ಈ ಜಾತಿ ನಾಯಿ ಸಾಕಿದವರಿಗೆ ಸುದಾರಿಸಲಾಗಲೇ ಇಲ್ಲ ಕಾರಣ ತರಬೇತಿ ನೀಡಲಾಗಲಿಲ್ಲ ಅದನ್ನು ನಮ್ಮ ಗೆಳೆಯರು ತಂದರು ತಂದ ದಿನವೇ ಪಕ್ಕದ ಮನೆಯ ಎಮ್ಮೆ ಕರು ಸಾಯಿಸಿತಂತೆ ಆದ್ದರಿಂದ ವಾಪಾಸ್ ಕೊಟ್ಟರು ಅಂತ, ಮೈಸೂರಿನ ಅಶ್ವದಳದ ಪ್ರಸಿದ್ದ ವೈದ್ಯರೂ ಇವುಗಳನ್ನು ಸಾಕು ಪ್ರಾಣಿ ಎ೦ದು ಒಪ್ಪುವುದಿಲ್ಲ ಸರಿಯಾಗಿ ತರಬೇತಿ ನೀಡಿ ಅಂತ.   ಈ ರೀತಿಯ ಎಚ್ಚರಿಕೆ ಸ್ವಲ್ಪ ಭಯ ಉಂಟು ಮಾಡಿದ್ದು ಸುಳ್ಳಲ್ಲ ಆದರೆ ಇದು ನಮಗೆ ನೀಡಿದ ಅತ್ಯುತ್ತಮ ಸಲಹೆಯೇ ಆದ್ದರಿಂದ ನನ್ನ ಶಂಭುವಿಗೆ ನನ್ನ ಮಗ ಈ ಆರು  ತಿಂಗಳು ನೀಡಿದ ತರಬೇತಿ

ಹದಿನಾರು ವರ್ಷದ ವ್ಯವಹಾರದ ಏಳು ಬೀಳಿನಲ್ಲಿ ನಿತ್ಯ ಸಂಗಾತಿ ಆಗಿದ್ದ ಬ್ಯಾಗ್ ಬದಲಾಯಿಸುವ ಸಂಕಟದ ಸಮಯದಲ್ಲಿ

#ದೀಘ೯_ಹದಿನಾರು_ವರ್ಷದ_ನಂತರ_ಬದಲಾದ_ ಬ್ಯಾಗ್     ಬಹುಶಃ ಲಾಸೆಲ್ಲಾ ಚರ್ಮದ ಬ್ಯಾಗಿನ ಉತ್ಕೃಷ್ಟತೆ ಇಷ್ಟು ಕಾಲ ಬಾಳಕೆಗೆ ಕಾರಣ ಇರಬಹುದು, 2005ರಲ್ಲಿ ಇದರ ಬೆಲೆ ಸುಮಾರು ಏಳು ಸಾವಿರ, ಇಟಲಿ ದೇಶದ ಉತ್ಪನ್ನ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಈ ಬ್ರಾಂಡ್ ಈಗಲೂ ಹೆಸರುವಾಸಿ ಆಗಿದೆ.   ಈಗಲೂ ಬಳಸಲಾಗದ ಸ್ಥಿತಿ ತಲುಪಿಲ್ಲ ಆದರೆ ಇತ್ತೀಚೆಗೆ ನನ್ನ ಪ್ರೀತಿಯ ನಾಯಿ ಮರಿಗಳು ಇದರ ಹಿಡಿ ಹಾಳು ಮಾಡಿದೆ, ಜಿಪ್ ಗಳು ನಾದುರಸ್ತಾಗಿದೆ ಪುನಃ ದುರಸ್ತಿ ಮಾಡಿ ಪಾಲೀಶ್ ಮಾಡಿದರೆ ಲಕಲಕ ಆಗುತ್ತದೆ.   ಅಲ್ಲಿ ತನಕ ಬದಲಿ ವ್ಯವಸ್ಥೆಗಾಗಿ 2 ಹೊಸ ಬ್ಯಾಗ್ ತರಿಸಿ ಅದಕ್ಕೆ ನಿತ್ಯ ವ್ಯವಹಾರದ ಲೆಕ್ಕ ಪತ್ರದ ಪುಸ್ತಿಕೆ, ಪೈಲ್ ಮತ್ತು ಚೆಕ್ ಬುಕ್ ಗಳನ್ನು ಸ್ಥಳಾಂತರಿಸುವಾಗ ದೀರ್ಘ 16 ವರ್ಷ ಲಾಭ ನಷ್ಟಗಳಲ್ಲಿ ನಿತ್ಯ ಸಂಗಾತಿ ಆಗಿದ್ದ ಬ್ಯಾಗ್ ಬಗ್ಗೆ ಯೋಚಿಸಿದಾಗ ಬೇಸರ ಆಗದೇ ಇರಲಿಲ್ಲ ಆದರೂ ಬಳಕೆ ನಂತರ ದುರಸ್ತಿ, ವಿರಾಮ ನಂತರ ನಿವೃತ್ತಿ ಅನಿವಾಯ೯.   ಹಾಗಾಗಿ ಈ ಬ್ಯಾಗ್ ಸೆಂಟಿಮೆಂಟಲ್ ದುರಸ್ತಿ ಮಾಡಿಸಿ ಪುನಃ ಬಳಸುವ ತೀರ್ಮಾನದಿಂದ ಲಾಸೆಲ್ಲಾ ಕಂಪನಿ ಬ್ಯಾಗಿಗೆ ವಿಶ್ರಾಂತಿಯ ವಿರಾಮ ನೀಡಿದ್ದೇನೆ.

ಆನಂದಪುರಂ ಇತಿಹಾಸ ಭಾಗ 62, ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘ ಮತ್ತು ಆನಂದಪುರಂನ ಹೆಸರನ್ನು ಸಾಂಸ್ಕೃತಿಕವಾಗಿ ಕೆಲ ದಶಕ ಶ್ರೀಮಂತಗೊಳಿಸಿದ ಪ್ರಖರ ವಾಗ್ಮಿ ಕಲಾವಿದ ಸಂಘಟನಾಕಾರ ದಿವಂಗತ ಹಾ.ಮೊ.ಬಾಷಾ ಸ್ಮರಣೆಯಲ್ಲಿ

#ಆನಂದಪುರಂ_ಇತಿಹಾಸ #ಭಾಗ_62. #ಆನಂದಪುರಂ_ಜನತೆಯ_ಸದಾನೆನಪಿನಲ್ಲಿ_ಉಳಿದಿರುವ #ದಿವ೦ಗತ_ಹಾ_ಮೋ_ಭಾಷಾ . #ಕನ್ನಡಸಂಘ_ಉತ್ತುಂಗಕ್ಕೆ_ತಲುಪಿಸಿದ_ಕನಸುಗಾರ. #ಆನಂದಪುರಂನ_ಮೂಲ_ನಿವಾಸಿಗಳು_ಈ_ಮನೆತನದವರು. #ಆನಂದಪುರಂನ_ಏಕೈಕ_ಬಾರೂದ್_ಮನೆತನ.   ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಸುತ್ತ ನೂರಾರು ಹಳ್ಳಿಗಳ ಮಧ್ಯೆ ಒಂದು ಪೇಟೆ ಸೃಷ್ಟಿ ಆಗುತ್ತಿತ್ತು, ಆ ಪೇಟೆಯಲ್ಲಿ ಸುತ್ತ ಹಳ್ಳಿಯ ಜನರ ಕೃಷಿ ಉಪಕರಣ ತಯಾರಿಸುವ, ದುರಸ್ತಿ ಮಾಡುವ ವಿಶ್ವಕರ್ಮಿಯರ ಕುಲುಮೆಗಳು, ಕ್ಷೌರಿಕರ ಅಂಗಡಿಗಳು, ಪಂಡಿತರುಗಳು, ನಿತ್ಯ ಉಪಯೋಗಿ ಹಿತ್ತಾಳೆ ಪಾತ್ರೆಗಳಿಗೆ ಕಲಾಯಿ ಹಾಕುವವರು, ಜೋಡು ಹೊಲೆದು ಕೊಡುವವರು, ದಿನಸಿ ಮಾರಾಟ ಮಾಡುವವರು, ಕಂಬಳಿ ಮಾರುವವರು, ಕುಂಬಾರರ ಮನೆಗಳು, ಪುರೋಹಿತರು, ಡಬ್ಬ - ಛತ್ರಿ- ಟಾರ್ಚ್ ದುರಸ್ತಿಗಾರರ ಮತ್ತು ಪಸಲು ರಕ್ಷಣೆಗಾಗಿ - ಶಿಕಾರಿಗಾಗಿ ಬಳಸುವ ಬಂದೂಕುಗಳಿಗೆ ಮದ್ದು ತಯಾರಿಸುವ ಬಾರೂದ್ ಮನೆತನಗಳು ಇದ್ದರೆ ಮಾತ್ರ ಅದು ಪೇಟೆಯ ಅರ್ಹತೆ ಪಡೆಯುತ್ತಿತ್ತು.   ಇಂತಹ ಪೇಟೆಗಳಲ್ಲೆ ಬ್ರಿಟೀಷ್ ಆಡಳಿತದ ಪೋಲಿಸ್ ಠಾಣೆ ಇತ್ಯಾದಿಗಳು ಬಂದವು.    ಆನಂದಪುರಂ ಇಂತಹ ಪೇಟೆ ಆಗಿ ಹೋಬಳಿ ಆಗಿ ನಂತರ ತಾಲ್ಲೂಕ್ ಕೂಡ ಕೆಲ ದಶಕ ಕಾಲ ಆಗಿದ್ದು ಇತಿಹಾಸ.   ಆನಂದಪುರಂ ಸುತ್ತಮುತ್ತ ದಟ್ಟ ಅರಣ್ಯದಿಂದ ರೈತರ ಪಸಲು ರಕ್ಷಣೆಗಾಗಿ ಮದ್ದುಗುಂಡುಗಳನ್ನು ತಯಾರಿಸಿ ಕೊಡುವ ಉದ್ಯೋಗ ಮಾಡಲು ದೂರದ ಹೊನ್ನಾವರದಿಂದ ಬಂದ ಬಾರೂದ್ ಮ

ಸಾಗರದ ರವೀ೦ದ್ರ ಪ್ರಕಾಶನದಲ್ಲಿ ಪ್ರಕಟಿಸಿದ ಕಾದಂಬರಿಗಳು ಪ್ರಸಿದ್ಧ ಚಲನ ಚಿತ್ರ ನಟರ ಸೂಪರ್ ಹಿಟ್ ಸಿನಿಮಾ ಆಗಿರುವ ಗರಿ ಪ್ರಕಾಶಕ ದಂತಿಯವರದ್ದು

#ಎಡಕಲ್ಲು_ಗುಡ್ಡದ_ಮೇಲೆ #ದ್ವೀಪಾ #ಗಿರಿಕನ್ಯೆ #ಹುಲಿಹಾಲಿನಮೇವು_ಕಾಡಿನಬೆಂಕಿ_ಬಯಲುದಾರಿ_ಮುಂತಾದ_ಸಿನಿಮಾ_ಆದ_ಪುಸ್ತಕ_ಪ್ರಕಟಿಸಿದ್ದು_ಸಾಗರದ #ರವೀಂದ್ರ_ಪುಸ್ತಕಾಲಯದ_ಯಲ್ಲಪ್ಪ_ಅಪ್ಪಾರಾವ್_ದಂತಿ.     ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ (1995-2000) ಸಾಗರದ ಲೋಕೋಪಯೋಗಿ ಸಹಾಯಕ ಕಾಯ೯ಪಾಲಕ ಅಭಿಯಂತರ ಕಛೇರಿಗೆ ಹೋದಾಗೆಲ್ಲ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಗರದ ಪ್ರಖ್ಯಾತ ಪ್ರಕಾಶಕರಾದ ದಂತಿಯವರನ್ನು ಮತ್ತು ಇವರ ಪಕ್ಕದ ಟೇಬಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರಖ್ಯಾತ ಸಾಹಿತಿ ನಾ.ಡಿಸೋಜರನ್ನು ಮಾತಾಡಿಯೇ ಬರುತ್ತಿದ್ದ ಕಾಲವಾಗಿತ್ತು.   ಇಬ್ಬರೂ ಸಾಗರ ತಾಲ್ಲೂಕಿನ ಕಾರ್ಗಲ್ ನಿಂದಲೇ ವೃತ್ತಿ ಪ್ರಾರಂಬಿಸಿದವರು ನಾ.ಡಿಸೋಜ ಸಾಹಿತಿಯೂ ಆಗಿ ಪ್ರಸಿದ್ಧರಾದರೆ ದೂರದ ಅಥಣಿಯಿಂದ ಬಂದು ಇಲ್ಲಿ ಉದ್ಯೋಗದ ಜೊತೆ ರವೀ೦ದ್ರ ಪುಸ್ತಕಾಲಯದ ಹೆಸರಲ್ಲಿ ಪ್ರಕಾಶಕರಾಗಿ ಪ್ರಸಿದ್ಧರಾದರು.   ಇತ್ತೀಚೆಗೆ ನನಗೆ #ಗಜಾನನ_ಶರ್ಮಾರ ಪುಸ್ತಕ ಇವರಲ್ಲಿದೆ ಅಂತ ಗೆಳೆಯರು ಇವರ ಪೋನ್ ನಂಬರ್ ಗೆ ಪೋನಾಯಿಸಿದಾಗ ಇವರು ನನ್ನ ವಿಳಾಸ ಬರೆದು ಕೊಳ್ಳುವಾಗ ಪುನಃ ಸಂಬಂದ ಏರ್ಪಟ್ಟಿತು.   ಅವರ ಅಕೌಂಟ್ ಗೆ ಸುಮಾರು ಒಂದು ಸಾವಿರದ ನಾನೂರು ಕಳಿಸಲು ಅಕೌಂಟ್ ಮಾಹಿತಿಗೆ ಕಾಯುತ್ತಿದ್ದರೆ ಎಲ್ಲಾ ಪುಸ್ತಕ ಅಂಚೆಯಲ್ಲೇ ಕಳಿಸಿಬಿಟ್ಟಿದ್ದಾರೆ (ನಂಬಿಕೆ ದೊಡ್ಡದು) ನಂತರವೇ ಹಣ ಪಾವತಿಸಿದೆ.

ಭಟ್ಟರ ಬೊಂಡಾ ಬಾಂಡಲಿಯಲ್ಲಿ "ಬಿಲಾಲಿ ಬಿಲ್ಲಿ ಅಭ್ಯಂಜನ" ಮತ್ತು 28 ಕಥೆಗಳು ಎಂಬ ನನ್ನ ಸಣ್ಣ ಕಥಾ ಸಂಕಲನದ ಮುಖಪುಟ ನೋಡಿ

#ನನ್ನ_ಎರಡನೆ_ಪುಸ್ತಕ_ಸಣ್ಣಕಥೆಗಳ_ಮುಖಪುಟದ_ಕವರ್_ಪೇಜ್_ಇಲ್ಲಿದೆ_ನೋಡಿ     ಸದ್ಯದಲ್ಲೇ ಪುಸ್ತಕವಾಗಿ ಕೈ ಸೇರಲಿದೆ, ನನ್ನ ಮೊದಲ ಕಾದಂಬರಿ #ಬೆಸ್ತರರಾಣಿ_ಚಂಪಕ ಮುದ್ರಿಸಿದ ಶಿವಮೊಗ್ಗದ ಪತ್ರಕರ್ತ ಮಿತ್ರರಾದ ಶೃಂಗೇಶರ ಜನ ಹೋರಾಟ ಪ್ರಿಂಟರ್ಸ್ ನನ್ನ ಎರಡನೇ ಪ್ರಕಟನೆ 29 ಸಣ್ಣ ಕಥಾ ಸಂಕಲನದ ಮುದ್ರಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.   ಇವತ್ತು ಕವರ್ ಪೇಜ್ ಅಂತಿಮ ನೋಟ ಕಳಿಸಿದ್ದಾರೆ, ನನಗೂ ಮೆಚ್ಚುಗೆ ಆಗಿದೆ, ಹಿಂಪುಟದಲ್ಲಿ ನಾನು ಇಷ್ಟ ಪಡುವ ಬರಹಗಾರ, ಸಾಹಿತಿ, ವಾಗ್ಮಿ ಅರವಿಂದ ಚೊಕ್ಕಾಡಿ, ಆತ್ಮೀಯರು ರಾಜ್ಯದ ಪ್ರಸಕ್ತ ಪ್ರಖ್ಯಾತ ಪತ್ರಕರ್ತರಾದ ಆರ್.ಟಿ. ವಿಠಲಮೂರ್ತಿ ಮತ್ತು ನನ್ನ ದೀರ್ಘಕಾಲದ ಮಿತ್ರರು ಹಿತೈಷಿಗಳು ಪತ್ರಕರ್ತರೂ ಮತ್ತು ಈ ಪುಸ್ತಕದ ಮುದ್ರಣದ ಸಂಪೂರ್ಣ ಜವಾಬ್ದಾರರೂ ಆದ ಶೃಂಗೇಶರು ಪುಸ್ತಕದ ಬಗ್ಗೆ ಬರೆದ ಲೇಖನದ ತುಣುಕಿನೊಂದಿಗೆ ಅಚ್ಚಾಗಿದೆ.    ನನ್ನ ಈ ಕಥಾ ಸಂಕಲನದ ಹೆಸರು         "ಭಟ್ಟರ ಬೊಂಡಾ ಬಾಂಡಲಿಯಲ್ಲಿ"    #ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳು    ಇದಕ್ಕೆ ಅನುಗುಣವಾಗಿ ಮುಖಪುಟ ಕಲಾವಿದ ಸ೦ತೋಷ್ ಸಸಿಹಿತ್ಲು ಸುಂಂದರವಾಗಿ ಚಿತ್ರಿಸಿದ್ದಾರೆ , ನನ್ನ ಸಾಕುಪ್ರಾಣಿ ಸಾಂಗತ್ಯದಲ್ಲಿ ಅತಿ ಹೆಚ್ಚು ನೆನಪು ಉಳಿಸಿ ಹೋದ ಬೆಕ್ಕು ಪಾಣಿಯ ಫೋಟೋ ಕೂಡ ಇರಿಸಿದ್ದೇನೆ.   ಸುಮಾರು ಇನ್ನೂರು ಪುಟದ ಈ ಪುಸ್ತಕದ ಬೆಲೆ ರೂ.200 ಇದನ್ನು "ಪಶ್ಚಿಮ ಘಟ್ಟದ

ಲಂಡನ್ ನ ಶ್ರೀಮಂತ ನಗರಿ ಪ್ಲೀಟ್ ನ ಕೌನ್ಸಿಲರ್ ಆಗಿ ಆಯ್ಕೆ ಆದ ಕನ್ನಡಿಗ ಅನಿವಾಸಿ ಭಾರತೀಯ ಕುಮಾರ್ ಕುಂಟಿಕಾನಮಠ ಇವರಿಗೆ ಸಮಸ್ತ ಕನ್ನಡಿಗರ ಅಭಿನಂದನೆಗಳು.

#ಅಭಿನಂದನೆಗಳು #ದೂರದ_ಇಂಗ್ಲೇಂಡ್_ಶ್ರೀಮ೦ತ_ನಗರ_ಪ್ಲೀಟ್_ಸಿಟಿ_ಕೌನ್ಸಿಲರ್_ಆಗಿ_ಆಯ್ಕೆ #ಶ್ರೀರಾಮಕಥಾಮಂಜರಿ_ಶ್ರೀಕೃಷ್ಣಕಥಾಮಂಜರಿ_ಬರೆದ_ಕುಂಟಿಕಾನಮಠ_ಬಾಲಕೃಷ್ಣಭಟ್_ಪುತ್ರ #ಕಲಾರಾದಕ_ಉದ್ಯಮಿ_ಹಠಗಾರ_ಅನಿವಾಸಿ_ಭಾರತೀಯ #ಕುಮಾರ್_ಕುಂಠಿಕಾನಮಠ     ನಿನ್ನೆ ಗೆಳಿಯರಾದ ಕುಮಾರ್ ಕುಂಟಿಕಾನಮಠ ದೂರದ ಇಂಗ್ಲೇಂಡ್ ನ ಶ್ರೀಮಂತ ನಗರ ಪ್ಲೀಟ್ ಸಿಟಿ ಕೌನ್ಸಿಲರ್ ಆದ ಸುದ್ದಿ ಕೇಳಿ ಅತ್ಯಂತ ಸಂತೋಷದಿಂದ ಅವರಿಗೆ ಅಭಿನಂದನೆ ಅರ್ಪಿಸಿದೆ ಮತ್ತು ಈ ಸಂತೋಷವನ್ನು ಪೇಸ್ ಬುಕ್ ಗೆಳೆಯರಿಗಾಗಿ ಮತ್ತೊಮ್ಮೆ ಹಂಚಿಕೊಳ್ಳುವ ಬಯಕೆ ನನ್ನದು.   ಪುರಾತನವಾದ ಕುಂಟಿಕಾನಮಠ ಕೇರಳದ ಕಾಸರಗೋಡಿನ ಸಮೀಪ ಇದೆ, ಇವರ ಕುಟುಂಬದ್ದೇ ಆದ ಈ ಮಠವನ್ನು ಇವರ ಜಾತಿಯ ಹೊಸನಗರದ ಮಠಾದೀಶರು ತಮ್ಮ ಶಿಷ್ಯರ ಭುಜ ಭಲ ಮತ್ತು ಅವರ ಹಣ ಬಲದಿಂದ ವಶಪಡಿಸಿಕೊಂಡಿದ್ದರು.  ಆ ಸಂದಭ೯ದಲ್ಲಿ ಇವರ ವಯೋವೃದ್ದರಾಗಿದ್ದ ಇವರ ತಂದೆ ಕನ್ನಡದಲ್ಲಿ ಶ್ರೀ ರಾಮಕಥಾ ಮಂಜರಿ ಮತ್ತು ಶ್ರೀ ಕೃಷ್ಣ ಕಥಾ ಮಂಜರಿ ಎಂಬ ಬೃಹತ್ ಗ್ರಂಥ ಬರೆದ ಬೆಂಗಳೂರಿನ ಎನ್.ಎಲ್.ಎನ್. ವಿದ್ಯಾಸಂಸ್ಥೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಕುಂಟಿಕಾನಮಠ ಬಾಲಕೃಷ್ಣ ಭಟ್ಟರ ಮೇಲೂ ಹಲ್ಲೆ ನಡೆಸಿದ್ದರಿಂದ ಈ ಕುಟುಂಬ ನೋವು ದುಃಖ ಅನುಭವಿಸಿತ್ತು.   ಸದರಿ ಮಠಕ್ಕೆ ಲಕ್ಷಾಂತರ ದೇಣಿಗೆ ನೀಡಿದ್ದ ಕುಮಾರ್ ಲ೦ಡನ್ನಿಂದ ಸ್ವಾಮಿಗೆ ಪೋನಾಯಿಸಿದರೆ ಪೋ

ಕೊರೋನಾ ಪರಿಣಾಮ ಸ್ವಯಂ ಕ್ಷೌರದಿಂದ ಸಲೂನ್ ತ್ಯಜಿಸಿದ್ದು, 18 ತಿಂಗಳ ನಿರಂತರ ಅಭ್ಯಾಸದಿಂದ ಕರತಲಾಮಲಕವಾದ ಸ್ವಯಂ ಕೇಶವಿನ್ಯಾಸ

#ಪ್ರಾಕ್ಟಿಸ್_ಮೇಕ್_ಪಪೆ೯ಕ್ಟ್ #ಹಾಡಿ_ಹಾಡಿ_ರಾಗ #ನಿರಂತರ_18_ತಿಂಗಳ_ಪ್ರಯತ್ನದಲ್ಲಿ_ಯಶಸ್ಸು.         2020 ರ ಮಾರ್ಚ್ ತಿಂಗಳಿಂದ 2021ರ ಸೆಪ್ಟೆಂಬರ್ ತನಕ 18 ತಿಂಗಳಿಂದ ಸ್ವಯಂ ಆಗಿ ಮನೆಯಲ್ಲಿ ಕ್ಷೌರ ಮಾಡಿಕೊಳ್ಳುತ್ತಿದ್ದೆ ಇದು ಕೊರಾನಾ ಪರಿಣಾಮ ಕೂಡ.   ಇದಕ್ಕಾಗಿ ಪ್ರಾರಂಭದಲ್ಲಿ ಕಡಿಮೆ ಬೆಲೆಯ ಉಪಕರಣ ಆನ್ ಲೈನ್ ನಲ್ಲಿ ಖರೀದಿಸಿ ಬುದ್ದಿ ಕಲಿತ ಮೇಲೆ ಬ್ರಾಂಡೆಡ್ ಟ್ರಿಮ್ಮರ್, ನೋಸ್ ಹೇರ್ ಟ್ರಿಮ್ಮರ್ ಖರೀದಿಸಿದೆ.   ಏನೇ ಆದರೂ ತರಬೇತಿ ಇಲ್ಲದಿದ್ದರೆ ಪ್ರಾರಂಭದಲ್ಲಿ ಬೋಳು ಹೊಡೆಯಲೇ ಸುಸ್ತಾಗಿ ಬಿಡುತ್ತಿತ್ತು ಆದರೂ ನಿರಂತರ ಪ್ರಯತ್ನದಿಂದ ನಿನ್ನೆಯ ಕೇಶ ವಿನ್ಯಾಸದಲ್ಲಿ ಹೆಚ್ಚು ನೈಪುಣ್ಯ ಪಡೆದ ಸಾರ್ಥಕತೆ ಅನುಭವ ಆಯಿತು.   ಮುಂದಿನ ತಿಂಗಳಿಂದ ಇನ್ನೂ ಸುಲಭ ಆಗಬಹುದು.

ಮಲೆನಾಡಿನಲ್ಲಿ ವಿಸ್ತರಿಸುತ್ತಿರುವ ಮೆಕ್ಕೆಜೋಳದ ಬೆಳೆ, ದಕ್ಷಿಣ ಮೆಕ್ಸಿಕೋದಲ್ಲಿ ಹತ್ತು ಸಾವಿರ ವರ್ಷದ ಹಿಂದೆಯೇ ಬಳಸುತ್ತಿದ್ದರು. ವಿಶ್ವದ ಮೆಕ್ಕೆಜೋಳ ಬೇಳೆಯುವ ದೇಶದಲ್ಲಿ ಭಾರತಕ್ಕೆ ನಾಲ್ಕನೆ ಸ್ಥಾನವಿದೆ.

#ಮೆಕ್ಕೆ_ಜೋಳ_ಪುರಾತನ_ಬೆಳೆ #ಪಾಪ್_ಕಾರ್ನ್_ಕಂಡು_ಹಿಡಿದವರು_ರೆಡ್_ಇಂಡಿಯನ್_ಅಮೇರಿಕಾದ_ಮೂಲನಿವಾಸಿಗಳು #ಪಶ್ಚಿಮಘಟ್ಟದಲ್ಲಿ_ಹೆಚ್ಚುತ್ತಿರುವ_ಮೆಕ್ಕೆ_ಜೋಳ   ಈ ವರ್ಷದ ಏಪ್ರಿಲ್ ತಿಂಗಳಿಂದ ಬೀಳುತ್ತಿರುವ ಮಳೆ ಮುಂದಿನ ತಿಂಗಳು ಅಕ್ಟೋಬರ್ ವರೆಗೆ ಮುಂದುವರಿದರೆ ಅರ್ಧ ವರ್ಷ ಮಳೆಗಾಲ ಅಂದರೆ ಆರು ತಿಂಗಳೂ ಮಳೆ ಆದ೦ತೆ, ಈ ಮಳೆ ಈ ವರ್ಷದ ಮಲೆನಾಡಿನ ಜೋಳದ ಬೆಲೆ ಇಳುವರಿ ಏನು ಮಾಡುತ್ತದೆ ಗೊತ್ತಿಲ್ಲ.   ಅತಿ ಕಡಿಮೆ ಮಳೆ ಪ್ರದೇಶದ ಬೆಳೆ ಮೂಲ ಅಮೇರಿಕಾದ ದಕ್ಷಿಣ ಮೆಕ್ಸಿಕೊ, ಈ ಮೆಕ್ಕೆ ಜೋಳ 10 ಸಾವಿರ ವರ್ಷದ ಹಿಂದೆ ಇದ್ದ ಬಗ್ಗೆ ಸಂಶೋದನೆ ದೃಡಪಡಿಸಿದೆ.   ಅಮೇರಿಕಾ ಖಂಡದ ಮೂಲ ನಿವಾಸಿಗಳಾದ ರೆಡ್ ಇಂಡಿಯನ್ ರು ಪಾಪ್ ಕಾನ್೯ ಕಂಡು ಹಿಡಿದವರು!    ಈಗ ಇಡೀ ವಿಶ್ವದ ಮೆಕ್ಕೆಜೋಳದ ಶೇ 36 ಭಾಗ ಇಡೀ ಅಮೇರಿಕಾದಲ್ಲಿ ಬೆಳೆಯುತ್ತಾರೆ, ಯುರೋಪಿನಿಂದ ಅಮೇರಿಕಾಕ್ಕೆ ವಲಸೆ ಹೋದ ಯುರೋಪಿಯನ್ನರಿಂದ ಕ್ರಿಶ14 - 15 ರಲ್ಲಿ ಯುರೋಪಿಗೆ ಪರಿಚಯ ಆಗಿ ಈಗ ವಿಶ್ವದಾದ್ಯಂತ ಆಹಾರೋದ್ಯಮ, ಪಶು ಆಹಾರ, ಸ್ಟಾರ್ಚ್, ಎಥೆನಾಲ್, ಸಿರಪ್ ಮತ್ತು ಪಾಪ್ಕಾರ್ನ್ ಗಾಗಿ ವಿಶ್ವ ದಾದ್ಯಂತ ಬೇಡಿಕೆ ಪಡೆದಿದೆ.   ಭಾರತ ದೇಶ ಕೂಡ ವಿಶ್ವದ ಅತಿ ಹೆಚ್ಚು ಮೆಕ್ಕೆಜೋಳದಲ್ಲಿ ನಾಲ್ಕನೇ ಸ್ಥಾನಗಳಿಸಿದೆ, ನಮ್ಮ ದೇಶದಲ್ಲಿ ಆಂದ್ರ ಪ್ರದೇಶ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ರಾಜ್ಯ ಆಗಿದೆ ಇದರ ನಂತರದ ಸ್ಥಾನ ನಮ್ಮ ಕರ್ನಾಟಕ ಮತ್ತು ಬಿಹಾರ

ಅನೇಕ ಪುರುಷರು ವಿವಾಹ ಆಗದೇ ಉಳಿಯಲು ಸ್ತ್ರೀ-ಪುರುಷರ ಅನುಪಾತ ಕಾರಣ ಎನ್ನುತ್ತಾರೆ! ಆದರೆ ಸ್ತ್ರೀಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆ ಸ್ತ್ರೀ-ಪುರುಷರ ಸಮಾನತೆಗೆ ಒತ್ತು ನೀಡಿರುವುದು ಕಾರಣ ಆಗಿಲ್ಲವಾ?

#ವಿಚಾರವಂತರಾದ_ಸಾಗರದ_ಗಂಗಾದರನಾಯಕರು_ಸಮಾಜದ_ಪಿಡುಗುಗಳನ್ನು_ಅವರ_ಪೇಸ್_ಬುಕ್_ನಲ್ಲಿ #ಬರೆದು_ತರ್ಕಕ್ಕೆ_ಅವಕಾಶ_ಮಾಡುತ್ತಾರೆ_ಅವರ_ಲೇಖನಕ್ಕೆ  Gangadhara Nayak ನನ್ನ ಅನಿಸಿಕೆ ವಿವಾಹ ಆಗುವ ಸ್ತ್ರಿಯರು ಅವರ ಆಯ್ಕೆಗೆ ಕುಟುಂಬ ಮತ್ತು ಸಮಾಜದ ನಿರ್ಬಂದ ದಾಟಿದ್ದಾರೆ, ಮೊದಲೆಲ್ಲ ಕುಟುಂಬದ ಹಿರಿಯರು ನಿದ೯ರಿಸಿದರೆ ಕನ್ಯೆ ಒಪ್ಪಬೇಕಾಗಿತ್ತು ಈಗ ಅದು ಸಾಧ್ಯವಿಲ್ಲ ಇದು ಸ್ತ್ರಿ ಸ್ಟಾತಂತ್ರ , ಪುರುಷ ಮತ್ತು ಮಹಿಳೆಯರ ಸಮಾನತೆ ತಲುಪಿತ್ತಿರುವುದು.   ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಸಾಕ್ಷರತೆಯಿಂದ ಅವರ ಹಕ್ಕುಗಳ ಪ್ರತಿಪಾದನೆಗೆ ಬಲ ಬಂದಿದೆ.  ಎಲ್ಲಾ ದರ್ಮಿಯರಲ್ಲೂ, ಜಾತಿಯಲ್ಲೂ ಇದು ಉಂಟಾಗಿದೆ, ವರದಕ್ಷಿಣೆ ಕ್ರಮೇಣ ಇಲ್ಲವಾಗುತ್ತಿರುವುದು, ಹೆಚ್ಚಾಗುತ್ತಿರುವ ವಿವಾಹೇತರ ಸಂಬಂದಗಳು , ವಿಚ್ಚೇದನಗಳು ಮತ್ತು ಅವಿವಾಹಿತರಾಗಿ ಉಳಿಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇದರ ದ್ಯೋತಕ.   ಸ್ತ್ರೀ ಪುರುಷರ ಅನುಪಾತದ ವ್ಯತ್ಯಾಸ ಮಾತ್ರದಿಂದ ಹಿಂದು ಧರ್ಮದ ಮೇಲುವರ್ಗದ ಪುರುಷರಿಗೆ ಮಾತ್ರ ವಿವಾಹ ಆಗುತ್ತಿಲ್ಲ ಎಂಬ ನಿಮ್ಮ ನಿಲುವು ಪರಿಶೀಲಿಸಲು ವಿನಂತಿಸುತ್ತೇನೆ (ಏಕೆಂದರೆ ಈ ಗಣತಿ ಜಾತಿ ಅಥವ ಧರ್ಮ ಆದಾರದಿಂದ ನಡೆದಿಲ್ಲ)    1961 ರಲ್ಲಿ ಸ್ತ್ರೀ ಪುರುಷರ ಅನುಪಾತ 1000 ಪುರುಷರಿದ್ದರೆ ಸ್ತ್ರೀಯರು 976 ಇದ್ದರು, 2011 ರಲ್ಲಿ ಇದು 1000 ಕ್ಕೆ 914 ಇದೆ.    ಪುರುಷರಲ್ಲಿಯೂ ಸ್ತ್ರೀಯರು ಇಷ್ಟ ಪಡದಂತಹ ಕಾರಣಗಳು ಏನು ಎನ

ಅಮಾವಾಸ್ಯೆಯ ನಡು ರಾತ್ರಿ ಕೊಪ್ಪಾದಿಂದ ತೀರ್ಥಳ್ಳಿ ಮಾರ್ಗದಲ್ಲಿ ಶ್ವೇತ ವಸ್ತ್ರ ದಾರಿಣಿ, ನೀಳ ಕೇಶದಾರಿ ಕಾರಿನ ಪ್ರಖರ ಬೆಳಕಲ್ಲಿ ಪಳಪಳಿಸಿದ ಅವಳ ನತ್ತಿನ ಮೂಗುತಿ ! ಅಳಾರು?!

#ಅಮಾವಾಸ್ಯೆಯ_ಮಧ್ಯರಾತ್ರಿ_ಶ್ವೇತವಸ್ತ್ರದಾರಿಣಿ_ನೀಳಕೇಶದ_ಮೂಗಿನ_ನತ್ತಿನ_ಪಳಪಳಿಸುತ್ತಾ #ಕೊಪ್ಪ_ತೀರ್ಥಳ್ಳಿ_ರಸ್ತೆ_ಬದಿಯಲ್ಲಿ_ವೇಗವಾಗಿ_ನಡೆದವಳು_ಯಾರು ? #ಇವತ್ತಿಗೂ_ಉತ್ತರ_ಸಿಕ್ಕಿಲ್ಲ.    ಇದು ನಡೆದದ್ದು 1993ರಲ್ಲಿ ಅವತ್ತು ಅಮಾವಾಸ್ಯೆ, ಅವತ್ತು ಬೆಳಿಗ್ಗೆನೇ ತಾಳಗುಪ್ಪದ ಕೃಷ್ಣಮೂರ್ತಿ (ಅಂಬೇಡ್ಕರ್ ಸಂಘ ಇದ್ದಿದ್ದರಿಂದ ಇವರಿಗೆ ಅಂಬೇಡ್ಕರ ಕೃಷ್ಣಮೂರ್ತಿ ಅಂತ ಹೆಸರು) ಶಿವಮೊಗ್ಗದಿಂದ ಅಂಬಾಸಡರ್ ಟ್ಯಾಕ್ಸಿಯಲ್ಲಿ ಬಂದು ನನ್ನ ಕೊಪ್ಪಕ್ಕೆ ಕರೆದೊಯ್ದರು ಅಲ್ಲಿ ಪ್ರಖ್ಯಾತ ಜೋತಿಷಿ ಬಾಲಗೋಪಾಲರನ್ನು ಕರೆದುಕೊಂಡು ಕುಂದಾಪುರದ ಹಟ್ಟಿಯಂಗಡಿ ವಿನಾಯಕ ದೇವಸ್ಥಾನದಲ್ಲಿ ನಡೆಯುವ ವಿಶೇಷ ಗಣಹೋಮಕ್ಕೆ ಭಾಗವಹಿಸಲು ಹೋಗಿದ್ದೆವು.   ಹಟ್ಟಿಯಂಗಡಿಯಲ್ಲಿ ಹೋಮ ಹವನ ಮುಗಿಸಿ ಪುನಃ ಜೋತಿಷಿ ಬಾಲಗೋಪಾಲರನ್ನು ಕೊಪ್ಪದ ಅವರ ಮನೆಗೆ ತಲುಪಿಸುವಾಗ ಮಧ್ಯರಾತ್ರಿ ಒ0ದು ಗಂಟೆ ದಾಟಿತ್ತು.   ಅವರನ್ನು ಮನೆಗೆ ತಲುಪಿಸಿ ನನ್ನ ಮನೆಗೆ ತಲುಪಿಸಲು ಅಂಬಾಸಡರ್ ಟ್ಯಾಕ್ಸಿ ಕೊಪ್ಪದಿಂದ ತೀಥ೯ಹಳ್ಳಿ ಮಾರ್ಗವಾಗಿ ಹೊರಟಿತು.   ಟ್ಯಾಕ್ಸಿ ಡ್ರೈವರ್ ನಿದ್ದೆ ಮಾಡಬಾರದೆಂದು ನಾನು ಮುಂದಿನ ಸೀಟಲ್ಲಿ ರಸ್ತೆ ಸವೆಸಲು ಡ್ರೈವರ್ ಗೆ ಒಂದೊಂದು ಪ್ರಶ್ನೆ ಉರಳಿಸುವುದು ಮಾಡುತ್ತಿದ್ದೆ, ಹಿರಿಯ ಗೆಳೆಯರು ಹಿಂದಿನ ಸೀಟಲ್ಲಿ ಕುಳಿತಲ್ಲೇ ಅರೆ ಬರೆ ನಿದ್ದೆ ಮಾಡುತ್ತಿದ್ದರು.   ಕೊಪ್ಪ ದಾಟಿ ಕೆಲವು ಕಿಲೋ ಮೀಟರ್ ದಾಟಿರಬೇಕು ಕಾರಿನ ಬೆಳಕಿಗೆ ಕಣ್ಣು ಕುಕ್ಕುವಂತ

ಆನಂದಪುರಂ ಇತಿಹಾಸ, ಭಾಗ - 61, ಆನಂದಪುರಂನ ಪುರಾತನ ಗಣಪತಿ ದೇವಾಲಯ ಏನಾಯಿತು? ಯಡೇಹಳ್ಳಿಯ ಕೆಂಡದ ಮಾಸ್ತಿಯಮ್ಮ ದೇವಾಲಯದ ಆವರಣ ಪುರಾತನ ಗಣಪತಿ ದೇವಾಲಯ ಆಗಿತ್ತಾ? ಕೆಳದಿ ಸೇನಾಧಿಕಾರಿ ವೀರ ಮರಣ ಹೊಂದಿದಾಗ ಸತಿ ಸಹಗಮನದ ಸ್ಥಳ ಉಪ್ಪಾರ ಸಮಾಜದ ಆರಾದ್ಯ ದೇವಾಲಯವಾಗಿದೆ.

#ಆನಂದಪುರಂ_ಇತಿಹಾಸ #ಭಾಗ_61   #ಆನಂದಪುರಂನಲ್ಲಿದ್ದ_ಐತಿಹಾಸಿಕ_ಗಣಪತಿ_ದೇವಸ್ಥಾನ_ಏನಾಯಿತು? #ಕೆಳದಿ_ಅರಸರು_ಕಾಲದಲ್ಲಿ_ಕೋಟೆಕಾರರ_ಪ್ರಕಾರ_ಗಣಪತಿ_ದೇವಸ್ಥಾನ_ಇರಲೇ_ಬೇಕಿತ್ತು. #ಡಾ_ಎನ್_ಎಸ್_ವಿಶ್ವಪತಿಶಾಸ್ತ್ರೀಗಳ_ಪ್ರಕಾರ_ಕೇರಳದ_ಪಯ್ಯನೂರಿನ_ನಂಬೂದರಿಗಳ_ಅಷ್ಟಮಂಗಲದಲ್ಲೂ_ಉಲ್ಲೇಖ. #ಕೆಳದಿ_ಸೈನ್ಯದ_ಅಧಿಕಾರಿ_ಬಿದನೂರಿನಲ್ಲಿ_ನಡೆದ_ಯುದ್ಧದಲ್ಲಿ_ವೀರಮರಣ_ಹೊಂದಿದ_ಸತಿಸಹಗಮನದ_ಪ್ರದೇಶ. #ಉಪ್ಪಾರ_ಸಮಾಜದ_ಆರಾದನ_ಕೇಂದ್ರ_ಯಡೇಹಳ್ಳಿಯ_ಕೆಂಡದ_ಮಾಸ್ತಿಯಮ್ಮ_ದೇವಾಲಯ.   2006 ರವರೆಗೆ ಆನಂದಪುರಂ ಹೋಬಳಿಯಲ್ಲೇ ಗಣಪತಿ ದೇವಸ್ಥಾನ ಇರಲಿಲ್ಲ, 2006ರಲ್ಲಿ ಯಡೇಹಳ್ಳಿಯ ಹೊಸನಗರ ರಸ್ತೆಯಲ್ಲಿ ಐತಿಹಾಸಿಕ ಕೆಂಡದ ಮಾಸ್ತಮ್ಮ ದೇವರ ಗುಡಿ ಅವರಣದಲ್ಲಿ ಶ್ರೀ ವರಸಿದ್ಧಿವಿನಾಯಕ ಸ್ವಾಮಿ ದೇವಾಲಯ ನಿರ್ಮಾಣವಾಗಿ ನಿತ್ಯ ಪೂಜೆ, ಸಂಕಷ್ಟಹರ ಚತುರ್ಥಿ ದಿನ ಗಣಹೋಮ, ಸಂಕಷ್ಟಹರ ಪೂಜೆ ಚಂದ್ರ ದರ್ಶನದ ನಂತರ ಅನ್ನ ಸಂತರ್ಪಣೆ, ಪ್ರತಿ ವರ್ಷ ವಿನಾಯಕ ಚತುರ್ಥಿಯಂದು ಬ್ರಹ್ಮ ರಥೋತ್ಸವ, ಪಲ್ಲಕ್ಕಿ ಉತ್ಸವ, ಸಾಮೂಹಿಕ ಗಣಹೋಮ, ಸಾಮೂಹಿಕ ಅನ್ನ ಸಂತರ್ಪಣೆ (ಹೋಳಿಗೆ ತುಪ್ಪದೊಂದಿಗೆ) ಮತ್ತು ವಿಶೇಷವಾಗಿ ರಂಗ ಪೂಜೆ ನಡೆಯುತ್ತದೆ.    ದೇವಾಲಯ ನಿರ್ವಹಣೆಗಾಗಿ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯ ಟ್ರಸ್ಟ್ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದೆ.  ಟ್ರಸ್ಟ್ ಗೌರವಾದ್ಯಕ್ಷರಾಗಿ ಬೆಂಗಳೂರಿನ ಪ್ರಖ್ಯಾತ