ಬಹುಶಃ ಲಾಸೆಲ್ಲಾ ಚರ್ಮದ ಬ್ಯಾಗಿನ ಉತ್ಕೃಷ್ಟತೆ ಇಷ್ಟು ಕಾಲ ಬಾಳಕೆಗೆ ಕಾರಣ ಇರಬಹುದು, 2005ರಲ್ಲಿ ಇದರ ಬೆಲೆ ಸುಮಾರು ಏಳು ಸಾವಿರ, ಇಟಲಿ ದೇಶದ ಉತ್ಪನ್ನ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಈ ಬ್ರಾಂಡ್ ಈಗಲೂ ಹೆಸರುವಾಸಿ ಆಗಿದೆ.
ಈಗಲೂ ಬಳಸಲಾಗದ ಸ್ಥಿತಿ ತಲುಪಿಲ್ಲ ಆದರೆ ಇತ್ತೀಚೆಗೆ ನನ್ನ ಪ್ರೀತಿಯ ನಾಯಿ ಮರಿಗಳು ಇದರ ಹಿಡಿ ಹಾಳು ಮಾಡಿದೆ, ಜಿಪ್ ಗಳು ನಾದುರಸ್ತಾಗಿದೆ ಪುನಃ ದುರಸ್ತಿ ಮಾಡಿ ಪಾಲೀಶ್ ಮಾಡಿದರೆ ಲಕಲಕ ಆಗುತ್ತದೆ.
ಅಲ್ಲಿ ತನಕ ಬದಲಿ ವ್ಯವಸ್ಥೆಗಾಗಿ 2 ಹೊಸ ಬ್ಯಾಗ್ ತರಿಸಿ ಅದಕ್ಕೆ ನಿತ್ಯ ವ್ಯವಹಾರದ ಲೆಕ್ಕ ಪತ್ರದ ಪುಸ್ತಿಕೆ, ಪೈಲ್ ಮತ್ತು ಚೆಕ್ ಬುಕ್ ಗಳನ್ನು ಸ್ಥಳಾಂತರಿಸುವಾಗ ದೀರ್ಘ 16 ವರ್ಷ ಲಾಭ ನಷ್ಟಗಳಲ್ಲಿ ನಿತ್ಯ ಸಂಗಾತಿ ಆಗಿದ್ದ ಬ್ಯಾಗ್ ಬಗ್ಗೆ ಯೋಚಿಸಿದಾಗ ಬೇಸರ ಆಗದೇ ಇರಲಿಲ್ಲ ಆದರೂ ಬಳಕೆ ನಂತರ ದುರಸ್ತಿ, ವಿರಾಮ ನಂತರ ನಿವೃತ್ತಿ ಅನಿವಾಯ೯.
ಹಾಗಾಗಿ ಈ ಬ್ಯಾಗ್ ಸೆಂಟಿಮೆಂಟಲ್ ದುರಸ್ತಿ ಮಾಡಿಸಿ ಪುನಃ ಬಳಸುವ ತೀರ್ಮಾನದಿಂದ ಲಾಸೆಲ್ಲಾ ಕಂಪನಿ ಬ್ಯಾಗಿಗೆ ವಿಶ್ರಾಂತಿಯ ವಿರಾಮ ನೀಡಿದ್ದೇನೆ.
Comments
Post a Comment