ಭಟ್ಟರ ಬೊಂಡಾ ಬಾಂಡಲಿಯಲ್ಲಿ "ಬಿಲಾಲಿ ಬಿಲ್ಲಿ ಅಭ್ಯಂಜನ" ಮತ್ತು 28 ಕಥೆಗಳು ಎಂಬ ನನ್ನ ಸಣ್ಣ ಕಥಾ ಸಂಕಲನದ ಮುಖಪುಟ ನೋಡಿ
ಸದ್ಯದಲ್ಲೇ ಪುಸ್ತಕವಾಗಿ ಕೈ ಸೇರಲಿದೆ, ನನ್ನ ಮೊದಲ ಕಾದಂಬರಿ #ಬೆಸ್ತರರಾಣಿ_ಚಂಪಕ ಮುದ್ರಿಸಿದ ಶಿವಮೊಗ್ಗದ ಪತ್ರಕರ್ತ ಮಿತ್ರರಾದ ಶೃಂಗೇಶರ ಜನ ಹೋರಾಟ ಪ್ರಿಂಟರ್ಸ್ ನನ್ನ ಎರಡನೇ ಪ್ರಕಟನೆ 29 ಸಣ್ಣ ಕಥಾ ಸಂಕಲನದ ಮುದ್ರಣದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಇವತ್ತು ಕವರ್ ಪೇಜ್ ಅಂತಿಮ ನೋಟ ಕಳಿಸಿದ್ದಾರೆ, ನನಗೂ ಮೆಚ್ಚುಗೆ ಆಗಿದೆ, ಹಿಂಪುಟದಲ್ಲಿ ನಾನು ಇಷ್ಟ ಪಡುವ ಬರಹಗಾರ, ಸಾಹಿತಿ, ವಾಗ್ಮಿ ಅರವಿಂದ ಚೊಕ್ಕಾಡಿ, ಆತ್ಮೀಯರು ರಾಜ್ಯದ ಪ್ರಸಕ್ತ ಪ್ರಖ್ಯಾತ ಪತ್ರಕರ್ತರಾದ ಆರ್.ಟಿ. ವಿಠಲಮೂರ್ತಿ ಮತ್ತು ನನ್ನ ದೀರ್ಘಕಾಲದ ಮಿತ್ರರು ಹಿತೈಷಿಗಳು ಪತ್ರಕರ್ತರೂ ಮತ್ತು ಈ ಪುಸ್ತಕದ ಮುದ್ರಣದ ಸಂಪೂರ್ಣ ಜವಾಬ್ದಾರರೂ ಆದ ಶೃಂಗೇಶರು ಪುಸ್ತಕದ ಬಗ್ಗೆ ಬರೆದ ಲೇಖನದ ತುಣುಕಿನೊಂದಿಗೆ ಅಚ್ಚಾಗಿದೆ.
ನನ್ನ ಈ ಕಥಾ ಸಂಕಲನದ ಹೆಸರು
"ಭಟ್ಟರ ಬೊಂಡಾ ಬಾಂಡಲಿಯಲ್ಲಿ" #ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳು
ಇದಕ್ಕೆ ಅನುಗುಣವಾಗಿ ಮುಖಪುಟ ಕಲಾವಿದ ಸ೦ತೋಷ್ ಸಸಿಹಿತ್ಲು ಸುಂಂದರವಾಗಿ ಚಿತ್ರಿಸಿದ್ದಾರೆ, ನನ್ನ ಸಾಕುಪ್ರಾಣಿ ಸಾಂಗತ್ಯದಲ್ಲಿ ಅತಿ ಹೆಚ್ಚು ನೆನಪು ಉಳಿಸಿ ಹೋದ ಬೆಕ್ಕು ಪಾಣಿಯ ಫೋಟೋ ಕೂಡ ಇರಿಸಿದ್ದೇನೆ.
ಸುಮಾರು ಇನ್ನೂರು ಪುಟದ ಈ ಪುಸ್ತಕದ ಬೆಲೆ ರೂ.200 ಇದನ್ನು "ಪಶ್ಚಿಮ ಘಟ್ಟದ ಶಿವಮೊಗ್ಗದ ಓದುಗ ಬರಹಗಾರರ ಪ್ರಕಾಶನ" ದಿಂದ ಪ್ರಕಟಿಸುತ್ತಿದ್ದೇವೆ.
ಎಲ್ಲವೂ ನನ್ನ ಆಶಯದಂತೆ ನಡೆದರೆ ಮುಂದಿನ ವರ್ಷವೂ ನನ್ನ ಇನ್ನೊಂದು ಕಾದಂಬರಿ ಅಥವ ಸಣ್ಣ ಕಥಾ ಸಂಕಲನ (ಎರೆಡೂ ಹಸ್ತಪ್ರತಿಯಲ್ಲಿದೆ) ಪ್ರಕಟಿಸುವ ಮನಸ್ಸಿದೆ.
ಜಿಲ್ಲೆಯ ಆಯ್ದ 20 ಕಥೆಗಳು (20 ಕಥೆಗಾರರಿಂದ) ಕೂಡ ಪ್ರಕಟಿಸುವ ಯೋಜನೆ ಇದೆ.
ಲೈಬ್ರರಿಗೆ ಖರೀದಿಸಿ ಎಂದು ಸರ್ಕಾರಕ್ಕೆ ದಂಬಾಲು ಬಿಳ ಬಾರದೆಂಬ ಅಚಲ ನಿರ್ದಾರದಿಂದ ಆಸಕ್ತ ಓದುಗರಿಗೆ ತಲುಪುವಂತ ವ್ಯವಸ್ಥೆಯಲ್ಲಿ ಪುಸ್ತಕ ಮಾರಾಟ ಮಾಡಲಿದ್ದೇನೆ.
Comments
Post a Comment