Skip to main content

Posts

Showing posts with the label My 60 years completed

Blog number 3391. ನನ್ನ 60 ವರ್ಷ ವಯಸ್ಸು ಪೂರ್ತಿ ಆದ ಕ್ಷಣ

#ಜೀವಿತಾವದಿಯ_60_ವಷ೯_ಕಳೆಯಿತು. #ನನ್ನ_ಅರವತ್ತೊಂದನೆ_ವಯಸ್ಸು_ಪ್ರಾರಂವಾಯಿತು #ನನ್ನ_ಜೀವನದ_ಹಿನ್ನೋಟ #ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965        ಭಾನುವಾರ 9 - ಫೆಬ್ರುವರಿ-2025  ನನ್ನ 60 ವಷ೯ದ ಆಯಸ್ಸು ದಾಟಲಿದೆ ಮತ್ತು 61 ಕ್ಕೆ ಪಾದಾರ್ಪಣ ಮಾಡಲಿದೆ.  ಈಗ  ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು.   ಅಂದರೆ ನನಗೆ ನನ್ನ ಜೀವಿತದ 60 ವರ್ಷ ಕಳೆದು 61ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ. #birthdaywishes #birthdaycelebration #Age #sixty #memories #mylife #experience      ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ.    ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.    ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು.  ಮಿತ್ರ ದ್ರೋಹದ ಫಲ ಕೂಡ ಸ್ವ...