#ಶ್ರದ್ಧಾಂಜಲಿಗಳು_ಕಿರಿಯ_ಗೆಳೆಯ_ಷಫಿಯುಲ್ಲಾ_ಹಾದೀಬೀಸು. #ನಮ್ಮ_ಕುಟುಂಬದ_ಆರೋಗ್ಯ_ಕವಚ_ನಾವೇ_ನಿರ್ಮಿಸೋಣ #ಮೈ_ಮರೆಯಬೇಡಿ_ಕೊರಾನಾ_ಸುಳ್ಳು_ಎನ್ನುವವರನ್ನು_ನಂಬಬೇಡಿ. ನಮ್ಮ ಊರಿನ ಹಾದೀಬೀಸು ಇಬ್ರಾಹಿಂ ಸಾಹೇಬರ ಪುತ್ರ ಮೆಕ್ಯಾನಿಕ್ ಗಲ್ಫ್ ನಿಂದ ಬಂದ ನಂತರ ರಿಕ್ಷಾ ನಡೆಸುತ್ತಿದ್ದರು ಇವರು ಮದುವೆ ಆಗಿದ್ದು ಆನಂದಪುರಂ ಪದವಿ ಪೂರ್ವ ಕಾಲೇಜಲ್ಲಿ ಉದ್ಯೋಗಿ ಆಗಿದ್ದ ಶ್ರೀಮತಿ ಮಮ್ತಾಜ್ ಪುತ್ರಿಯನ್ನು. ಇವತ್ತು ಬೆಳಿಗ್ಗೆ ಮರಣವಾರ್ತೆ ಬಂದಿದೆ, ಊರಲ್ಲಿ ಮತ್ತು ಇವರ ಗೆಳೆಯರಲ್ಲಿ ವಿಷಾದ ಮಡುಗಟ್ಟಿದೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಮಂಗಳೂರಿನ ಎನ್ನಾಪೋಯಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋದರೂ ಬದುಕಿಸಲಾಗಲಿಲ್ಲ. ಮಂಗಳೂರಿಂದ ಬರಲಿರುವ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಅವರ ಅಂದು ಬಂದುಗಳು ತಯಾರಿ ನಡೆಸಿದ್ದಾರೆ. ಕೊರಾನಾ ಎರಡನೆ ಅಲೆ ಯಾವತ್ತು ಕೊನೆ ಆಗುತ್ತೋ? ಇನ್ನು ಎಷ್ಟು ಬಲಿ ಪಡೆಯುತ್ತೋ ? ಮೂರನೆ ಅಲೆ ಹೇಗೋ? ಯಾರಿಗೂ ಗೊತ್ತಿಲ್ಲ. ಇವರ ಅಜ್ಜ ಹಾದೀಬೀಸು ಮೈದೀನ್ ಸಾಹೇಬರು (ನಗರದಿಂದ ಬಂದಿದ್ದರಿಂದ ನಗರದ ಮೈದೀನ್ ಸಾಹೇಬರು ಅಂತಲೂ ಕರೆಯುತ್ತಿದ್ದರು) ಆ ಕಾಲದಲ್ಲಿ ಇವರು, ದಂಡಿಗೆಸರ ಪುಟ್ಟ ಸೇರೆಗಾರರು ಗಳಸ್ಯ ಕಂಠಸ್ಯ ಗೆಳೆಯರು, ಊರಿಗೆ ಯಕ್ಷಗಾನ ಬಂದಾಗ ಇವರಿಬ್ಬರೂ ತಪ್ಪಿಸುತ್ತಿರಲಿಲ್ಲ, ಬೆಳ್ಳಂಬೆಳಗೆ ಯುಕ್ಷಗಾನ ನೋಡಿ ಬಂದವರು ನಮ್ಮ ಹಳೆಯ ಮನೆಯ ಕಟಾ...