#ನಮ್ಮ_ಕುಟುಂಬದ_ಆರೋಗ್ಯ_ಕವಚ_ನಾವೇ_ನಿರ್ಮಿಸೋಣ
#ಮೈ_ಮರೆಯಬೇಡಿ_ಕೊರಾನಾ_ಸುಳ್ಳು_ಎನ್ನುವವರನ್ನು_ನಂಬಬೇಡಿ.
ನಮ್ಮ ಊರಿನ ಹಾದೀಬೀಸು ಇಬ್ರಾಹಿಂ ಸಾಹೇಬರ ಪುತ್ರ ಮೆಕ್ಯಾನಿಕ್ ಗಲ್ಫ್ ನಿಂದ ಬಂದ ನಂತರ ರಿಕ್ಷಾ ನಡೆಸುತ್ತಿದ್ದರು ಇವರು ಮದುವೆ ಆಗಿದ್ದು ಆನಂದಪುರಂ ಪದವಿ ಪೂರ್ವ ಕಾಲೇಜಲ್ಲಿ ಉದ್ಯೋಗಿ ಆಗಿದ್ದ ಶ್ರೀಮತಿ ಮಮ್ತಾಜ್ ಪುತ್ರಿಯನ್ನು.
ಇವತ್ತು ಬೆಳಿಗ್ಗೆ ಮರಣವಾರ್ತೆ ಬಂದಿದೆ, ಊರಲ್ಲಿ ಮತ್ತು ಇವರ ಗೆಳೆಯರಲ್ಲಿ ವಿಷಾದ ಮಡುಗಟ್ಟಿದೆ, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಮಂಗಳೂರಿನ ಎನ್ನಾಪೋಯಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಹೋದರೂ ಬದುಕಿಸಲಾಗಲಿಲ್ಲ.
ಮಂಗಳೂರಿಂದ ಬರಲಿರುವ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಅವರ ಅಂದು ಬಂದುಗಳು ತಯಾರಿ ನಡೆಸಿದ್ದಾರೆ.
ಕೊರಾನಾ ಎರಡನೆ ಅಲೆ ಯಾವತ್ತು ಕೊನೆ ಆಗುತ್ತೋ? ಇನ್ನು ಎಷ್ಟು ಬಲಿ ಪಡೆಯುತ್ತೋ ? ಮೂರನೆ ಅಲೆ ಹೇಗೋ? ಯಾರಿಗೂ ಗೊತ್ತಿಲ್ಲ.
ಇವರ ಅಜ್ಜ ಹಾದೀಬೀಸು ಮೈದೀನ್ ಸಾಹೇಬರು (ನಗರದಿಂದ ಬಂದಿದ್ದರಿಂದ ನಗರದ ಮೈದೀನ್ ಸಾಹೇಬರು ಅಂತಲೂ ಕರೆಯುತ್ತಿದ್ದರು) ಆ ಕಾಲದಲ್ಲಿ ಇವರು, ದಂಡಿಗೆಸರ ಪುಟ್ಟ ಸೇರೆಗಾರರು ಗಳಸ್ಯ ಕಂಠಸ್ಯ ಗೆಳೆಯರು, ಊರಿಗೆ ಯಕ್ಷಗಾನ ಬಂದಾಗ ಇವರಿಬ್ಬರೂ ತಪ್ಪಿಸುತ್ತಿರಲಿಲ್ಲ, ಬೆಳ್ಳಂಬೆಳಗೆ ಯುಕ್ಷಗಾನ ನೋಡಿ ಬಂದವರು ನಮ್ಮ ಹಳೆಯ ಮನೆಯ ಕಟಾಂಜನದಲ್ಲಿ ಕುಳಿತು ಅವತ್ತಿನ ಪ್ರಸಂಗ ವಿಮರ್ಶೆ ಮಾಡುತ್ತಾ ನಮ್ಮ ಮನೆಯಲ್ಲಿ ಚಹಾ ಕುಡಿದು ಊರಿಗೆ ಹೋಗುವುದು ಅವರ ಪದ್ಧತಿ.
ಹಾದೀಬೀಸಿನ ದೊಡ್ಡ ಜಮೀನ್ದಾರರು, ಎಲ್ಲಾ ಮಕ್ಕಳು ಕೃಷಿ, ಪಶು ಸಂಗೋಪನೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಗೆ ಮಾಡಿಕೊಂಡು ಬಂದವರು, ಈಗ ಮೊಮ್ಮಕ್ಕಳುಗಳು ಹೊಸ ಹೊಸ ಉದ್ಯೋಗ ಮಾಡಿಕೊಂಡಿದ್ದಾರೆ, ಇದರಲ್ಲಿ ಷಪಿಯುಲ್ಲಾ ಕೂಡ.
#ನಿಮ್ಮ_ಆರೋಗ್ಯ_ನಿಮ್ಮ_ಕೈಯಲ್ಲಿದೆ
#ನಿಮ್ಮ_ಕುಟುಂಬದ_ಆರೋಗ್ಯ_ಕವಚ_ರಚಿಸಿ
ಮೊನ್ನೆ ಬೆಂಗಳೂರಿಂದ ಗೆಳಯರು ಫೋನ್ ಮಾಡಿದ್ದರು ಸಾಗರದಲ್ಲಿ ಅವರ ಚಿಕ್ಕಪ್ಪನ ಮಗಳ ಮದುವೆ ಇತ್ತಂತೆ ಹಾಗಾಗಿ ಚಿಕ್ಕಪ್ಪ ಚಿಕ್ಕಮ್ಮ ತಮ್ಮ ಸಂಬಂದಿ ಒಬ್ಬರಿಗೆ ಆಮಂತ್ರಣ ನೀಡಲು ಹೋಗಿದ್ದಾರೆ ಅಲ್ಲಿ ಅವರು ತಮ್ಮ ಗೇಟಿಗೆ ಅಂಟಿಸಿದ ಬಿತ್ತಿ ಪತ್ರದಲ್ಲಿ "ನಮಗೆಲ್ಲ ಕೊರಾನಾ ಪಾಸಿಟಿವ್ ಬಂದಿದೆ ನಮ್ಮ ಸಂಪರ್ಕದಿಂದ ದೂರ ಇರಿ " ವಿನಂತಿ ಆದರೆ ಮದುವೆಗೆ ಕರೆಯಲು ಹೋದವರು ಆ ಮನೆಯವರು ವಿನಂತಿಸಿದರೂ ಮನ್ನಿಸದೆ ಮನೆ ಒಳಗೆ ಹೋಗಿ ಕಾಫಿ ಕುಡಿದು ಕರೆದು ಬಂದಿದ್ದಾರೆ, ಸರ್ಕಾರದ ಅನುಮತಿ ಪಡೆದು ಮದುವೆಯಲ್ಲಿ ಭಾಗವಹಿಸಿದ 40 ಜನರಿಗೆ ಕೊರಾನ ಹರಡಿದೆ ಅಂತೆ !
ಶಿವಮೊಗ್ಗದಲ್ಲಿ ನನ್ನ ಗೆಳೆಯರ ಮಾವನ ಮನೆ ಪಕ್ಕದ ಮನೆಯ ದಂಪತಿಗೆ ಪಾಸಿಟಿವ್ ಆದರೆ ಸಿಂಪ್ಟಮ್ ಇರಲಿಲ್ಲ ಅವರೂ ಮತ್ತ ಇವರೂ ಗೆಳೆಯರಾದ್ಧರಿಂದ ಅವರ ಮನೆಗೆ ಇವರು ಇವರ ಮನೆಗೆ ಅವರು ಒಡನಾಟ ತಾತ್ಕಾಲಿಕವಾಗಿಯೂ ನಿಲ್ಲಿಸಲಿಲ್ಲ, ಗೆಳಯರು ಹೇಳಿದರೆ ಕೊರಾನಾ ಎಲ್ಲಿದೆ? ತಂಡಿ ಶೀಥ ಆದವರಿಗೆ ಪರೀಕ್ಷೆ ಮಾಡಿದರೂ ಪಾಸಿಟೀವ್ ಬರುತ್ತೆ ಅಂತ ವಾದ ಮಾಡಿದ್ದಾರೆ, ಈಗ ಎರೆಡೂ ಮನೆಯ ಯಜಮಾನರು ಶಿವಮೊಗ್ಗದ ಖಾಸಾಗಿ ಆಸ್ಪತ್ರೆಯಲ್ಲಿ ಕಷ್ಟಕರ ಪರಿಸ್ಥಿತಿಯಲ್ಲಿ ಇದ್ದಾರೆ ಈಗಾಗಲೇ 4 ರಿಂದ 5 ಲಕ್ಷ ಖಚಾ೯ಗಿದೆ ಮನೆಯಲ್ಲಿರುವವರಿಗೂ ಪಾಸಿಟೀವ್ !
ಆತ್ಮೀಯ ಗೆಳೆಯರು N -95 ಮಾಸ್ಕ ದರಿಸದೆ ಹೊರ ಹೋಗುವುದಿಲ್ಲ ಅವರ ಕಾರಲ್ಲಿ ಯಾರಿಗೂ ಕೂರಿಸುವುದಿಲ್ಲ ಆದರೆ ಕೆಲ ದಿನದ ಹಿಂದೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸ್ಟಾಂಪ್ ವೆಂಡರ್ ಅನಿವಾರ್ಯವಾಗಿ ಕರೆದೊಯ್ದಿದ್ದಾರೆ ಅವರೂ ಮಾಸ್ಕ ದರಿಸಿದ್ದರು ಈಗ ಇಬ್ಬರಿಗೂ ಕೊರಾನಾ ದೇವರ ದಯೆಯಿಂದ ಬದುಕಿ ಬಂದಿದ್ದಾರೆ.!
ಹೇಗೆ ರೂಪಾಂತರಿ ಕೊರಾನಾ ವೈರಸ್ ಹರಡುತ್ತದೆ ಅಂತ ಗೊತ್ತಾಗುವುದಿಲ್ಲ, ಸರ್ಕಾರ - ಆಸ್ಪತ್ರೆ - ಅಮೇರಿಕಾ - ಚೀನಾ - ಮೊದಿ ಅಂತೆಲ್ಲ ವಾದ ಮಾಡುವುದು ಬದಿಗಿಟ್ಟು ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ತುರ್ತು ಪರಿಸ್ಥಿತಿ ಇದು.
ನಮ್ಮ ಕೈ ನಮ್ಮ ತಲೆ ಮೇಲೆ ಎಂಬ ಗಾದೆಯಂತೆ ತಕ್ಷಣದಿಂದ ಮನೆಯ ಬಾಗಿಲು - ಗೇಟುಗಳಿಗೆ ಬೀಗ ಹಾಕಿ, ಹೊರಗಿನವರು ಒಳಗೆ ಬರುವುದು ಬೇಡ ಮತ್ತು ಒಳಗಿನವರು ಹೊರ ಹೋಗುವುದು ಬೇಡ, ಸೋಪಿನಿಂದ ಕೈ ತೊಳೆಯುವುದು, ಡಬಲ್ ಮಾಸ್ಕ್ ದರಿಸುವುದು ಮರೆಯ ಬೇಡಿ, ಯಾವುದೇ ಕಾರಣಕ್ಕೂ ಅಭ್ಯಾಸ ಬಲದಂತೆ ಪದೇ ಪದೇ ಮುಖ ಸ್ಪರ್ಷ ಮಾಡಬೇಡಿ ನಮ್ಮ ಮನೆಯ #ಆರೋಗ್ಯ_ಕವಚ ನಾವೇ ನಿರ್ಮಿಸಿಕೊಳ್ಳಬೇಕು.
Comments
Post a Comment