ಆನಂದಪುರಂನ ಬೋಜರಾಜ್ ಮಾಸ್ತರ್ ಎಂಬ ಅಜಾತ ಶತೃ, ಬದರಿನಾರಾಯಣ್ ಅಯ್ಯಂಗಾರ್ ಅಜ್ಜನ ಕುಟುಂಬ ಗೊರೂರಿನಿಂದ ಕರೆತಂದ ಕುಟುಂಬದವರು
#ಭಾಗ_16.
#ಇವರ_ಅಜ್ಜ_ಶ್ರೀನಿವಾಸಅಯ್ಯಂಗಾರರೆ_ಬದರಿನಾರಾಯಣಅಯ್ಯಂಗಾರರ_ಅಜ್ಜ
#ಲಕ್ಷ್ಮಿಪತಿಅಯ್ಯಂಗಾರರನ್ನು_ಗೊರೂರಿನಿಂದ_ಕರೆತಂದವರು.
#ಭೂಸುದಾರಣೆ_ಕಾನೂನು_ಬಂದಾಗ_ನೂರು_ಎಕರೆ_ಜಮೀನುದಾರರು
#ಆದರೆ_ಗೇಣಿದಾರರು_ಅರ್ಜಿ_ಹಾಕದೆ_ಇವರಿಗೆ_ಗೌರವ_ಸಲ್ಲಿಸಿದ_ವಿಶೇಷ_ಘಟನೆ
ಎರೆಡು ವರ್ಷದ ಹಿಂದೆ ಸಹಸ್ರ ಚಂದ್ರ ದರ್ಶನ ಮಾಡಿದ ಬೋಜರಾಜ ಅಯ್ಯಂಗಾರರಿಗೆ ಈಗ 82 ವರ್ಷ ಇರಬಹುದು ಇವತ್ತು ಆನಂದಪುರಂ ಹೋಬಳಿಯಲ್ಲಿ ಎಲ್ಲೇ ಹೋದರು ಇವರಿಗೆ ವಿಶೇಷ ಗೌರವ ಇದೆ ಈ ಭಾಗದಲ್ಲಿ ಪ್ರೌಡ ಶಾಲೆಯಲ್ಲಿ ಇವರಿಂದ ಗಣಿತ ಕಲಿತವರೇ ಎಲ್ಲರು.
ಬದರಿನಾರಾಯಣ ಅಯ್ಯಂಗಾರರ ಆನಂದಪುರಂ ಚರಿತ್ರೆಗೆ ಇವರ ಕುಟುಂಬದ ಕೊಡುಗೆ ಮರೆಯಲಾರದ್ದು.
ಇವರ ಅಜ್ಜ ಶ್ರೀನಿವಾಸಯ್ಯ0ಗಾರರು ಆ ಕಾಲದಲ್ಲಿ ಆನಂದಪುರಂನ ಗುತ್ತಿಗೆದಾರ ವೃತ್ತಿಯ ಶ್ರೀಮಂತರು ಮತ್ತು ಜಮೀನ್ದಾರರು ಇವರು ಆ ಕಾಲದಲ್ಲಿ ಅಥಿ೯ಕವಾಗಿ ಅನುಕೂಲವಿಲ್ಲದ ಲಕ್ಷ್ಮೀಪತಿ ಅಯ್ಯಂಗಾರರನ್ನು ಹಾಸನದ ಗೊರೂರಿನಿಂದ ಆನಂದಪುರಂಗೆ ಕರೆತಂದು ನೆಲೆಸುವಂತೆ ವ್ಯವಸ್ಥೆ ಮಾಡುತ್ತಾರೆ ಆಗ ಲಕ್ಷ್ಮೀಪತಿ ಆಯ್ಯಂಗಾರ್ ಅಣ್ಣ ಸಾಗರದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಸಣ್ಣ ಉದ್ಯೋಗದಲ್ಲಿ ಇರುತ್ತಾರೆ.
ಲಕ್ಷ್ಮೀಪತಿ ಆಯ್ಯಂಗಾರರ ಪುತ್ರ ರಾಮಕೃಷ್ಣ ಆಯ್ಯಂಗಾರ್, ಇವರ ಪುತ್ರರೆ ರಾಜ್ಯ ರಾಜಕಾರಣದಲ್ಲಿ ಪ್ರಸಿದ್ಧರಾದ ಬದರಿನಾರಾಯಣ ಅಯ್ಯಂಗಾರ್.
ಶ್ರೀಮಂತ ಗುತ್ತಿಗೆದಾರರಾದ ಆನಂದಪುರಂನ ಶ್ರೀನಿವಾಸ ಅಯ್ಯಂಗಾರರಿಗೆ ಇಬ್ಬರು ಗಂಡು ಮಕ್ಕಳು ಮೊದಲನೆಯವರು ಸುಂದರ್ ರಾಜ್ ಅಯ್ಯಂಗಾರರು ಎರಡನೆಯವರು ಸೀತಾರಾಂ ಅಯ್ಯ೦ಗಾರರು ಇವರು ಆ ಕಾಲದಲ್ಲೇ ಬೆಂಗಳೂರಲ್ಲಿ ನೆಲೆಸುತ್ತಾರೆ.
ಆನಂದಪುರಂನಲ್ಲೇ ನೆಲೆಸಿದ ಸುಂದರ್ ರಾಜ್ ಅಯ್ಯಂಗಾರ್ ಮತ್ತು ಜಯಲಕ್ಷಮ್ಮ ದಂಪತಿಗಳಿಗೆ
ಜಗನ್ನಾಥ, ಸತ್ಯನಾರಾಯಣ, ಬೋಜರಾಜ್, ವನಜಾಕ್ಷಿ, ನಾಗರತ್ನ, ಪ್ರಭಾವತಿ, ಕೃಷ್ಣ ಪ್ರಸಾದ್, ಶ್ರೀನಿವಾಸ ಪ್ರಸನ್ನ ಮತ್ತು ಶ್ರೀ ಹರಿ ಎಂಬ ಆರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು.
ಜಗನ್ನಾಥ, ಸತ್ಯನಾರಾಯಣ, ಬೋಜರಾಜ್, ವನಜಾಕ್ಷಿ, ನಾಗರತ್ನ, ಪ್ರಭಾವತಿ, ಕೃಷ್ಣ ಪ್ರಸಾದ್, ಶ್ರೀನಿವಾಸ ಪ್ರಸನ್ನ ಮತ್ತು ಶ್ರೀ ಹರಿ ಎಂಬ ಆರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು.
ಹಿರಿಯರಾದ ಜಗನಾಥರು ಬದರಿನಾರಾಯಣ ಅಯ್ಯಂಗಾರರ ಸಹಪಾಠಿಗಳು ತುಮಕೂರಿನಲ್ಲಿ ವಿದ್ಯಾಬ್ಯಾಸ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಶ್ರೀನಿವಾಸ ಪ್ರಸನ್ನ ಸೂಪಾ ಆಣೆಕಟ್ಟಿನ ಇಂಜಿನಿಯರ್ ಆಗಿದ್ದವರು ಗೆಳೆಯರೊಡನೆ ಗೋಕರ್ಣ ಪ್ರವಾಸಕ್ಕೆ ಹೋದಾಗ ಸಮುದ್ರದಲ್ಲಿ ಈಜಲು ಹೋಗಿ ಮೃತರಾಗುತ್ತಾರೆ.
ಎರಡನೇ ಸತ್ಯನಾರಾಯಣ ಅಯ್ಯಂಗಾರರು ನೂರಾರು ಎಕರೆ ಕೃಷಿ ಭೂಮಿಯನ್ನು ಅಡೂರಿನಲ್ಲಿನ ತೋಟದ ಮನೆಯಲ್ಲಿದ್ದು ಅನೇಕ ವರ್ಷ ನಿವ೯ಹಿಸುತ್ತಾರೆ, ಇವರಿಗೆ ಆಭಾಗದಲ್ಲಿ ಸತ್ಯಣ್ಣ ಮತ್ತು ಮೀಸೆ ರಾಯರು ಅಂತ ಜನ ಪ್ರೀತಿಯಿಂದ ಕರೆಯುತ್ತಿದ್ದರು.ಇವರ ಮಗ ಅಚ್ಯುತ್ ಅಯ್ಯಂಗಾರ್ ಕೂಡ ತಂದೆ ಹಾಗೆ ಮೀಸೆ ಬಿಟ್ಟಿದ್ದಾರೆ ಆನಂದಪುರಂ ನಾಡ ಕಛೇರಿ ಪಕ್ಕದಲ್ಲಿ ಬಿಸಿನೆಸ್ ಸೆಂಟರ್ ನಡೆಸುತ್ತಿದ್ದಾರೆ.
ಜನಪ್ರಿಯ ಗಣಿತದ ಶಿಕ್ಷಕರಾಗಿ ನಿವೃತ್ತರಾಗಿರುವ ಬೋಜರಾಜ ಮಾಸ್ತರ್ ಗೆ ಇಬ್ಬರು ಗಂಡು ಮಕ್ಕಳು ಇವರಲ್ಲಿ ರಾಜೀವ್ ಅಯ್ಯಂಗಾರ್ ಕೃಷಿ ಮತ್ತ ಇಟ್ಟಿಗೆ ಕೈಗಾರಿಕೆ ನಡೆಸುತ್ತಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಇವರ ಸಹೋದರ ಕೃಷ್ಣ ಪ್ರಸಾದ್ ಅತ್ಯುತ್ತಮ ಬಾಲ್ ಬಾಡ್ಮಿಂಟನ್ ಆಟಗಾರರು, ಎಂ.ಬಿ.ಬಿ.ಎಸ್ ಶಿಕ್ಷಣ ಅರ್ದದಲ್ಲೇ ಬಿಟ್ಟುಬಿಡುತ್ತಾರೆ, ಒಂದು ಅವಧಿ ಆನ೦ದಪುರಂ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಕೊನೆಯ ಸಹೋದರ ಶ್ರೀ ಹರಿ ಇಂಜಿನಿಯರ್ ಆಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
ಬೋಜರಾಜ ಮಾಸ್ತರ್ ಸಹೋದರರಿಗೆ ಕುಟುಂಬದ ಆಸ್ತಿ ನೂರು ಎಕರೆಗೂ ಹೆಚ್ಚಿನ ಭತ್ತ ಬೆಳೆಯುವ ಜಮೀನು, ನೂರಾರು ಎಕರೆ ಖುಷ್ಕಿ ಜಮೀನು ಮತ್ತು ದಟ್ಟ ಅರಣ್ಯ ಇರುವ ನೂರಕ್ಕೂ ಹೆಚ್ಚು ಎಕರೆಯ ಕಾತೆ ಕಾನು ಎಂಬ ಅರಣ್ಯ ಇವರ ಸುಪರ್ದಿಯಲ್ಲಿರುತ್ತದೆ, ಈ ಎಲ್ಲಾ ಜಮೀನು ಅಡೂರಿನ ಪರಿಶಿಷ್ಟ ಜಾತಿಯ ಮತ್ತು ಗಂಗಾಮತಸ್ಥ ಜನಾಂಗದವರೆ ಗೇಣಿ ಮಾಡಿಕೊಂಡಿದ್ದಾರೆ.
ಭೂ ಸುದಾರಣ ಕಾಯ್ದೆ ಬಂದಾಗ ಇವರ ಜಮೀನನ ಮೇಲೆ ಅರ್ಜಿ ನೀಡಿ ಜಮೀನು ನಿಮಗೆ ಮಂಜೂರು ಮಾಡುತ್ತೇವೆ ಎಂದು ಯಾರೆಲ್ಲ ಎಷ್ಟು ಒತ್ತಾಯಿಸಿದರೂ ಒಬ್ಬನೇ ಒಬ್ಬ ಗೇಣಿದಾರ ಪಾರಂ ಸಲ್ಲಿಸದಿದ್ದದ್ದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣ ಈ ಸಂದರ್ಭದಲ್ಲಿ ಬದರಿನಾರಾಯಣ ಅಯ್ಯಂಗಾರರ ನೂರಾರು ಎಕರೆ ಜಮೀನು, ಮುರುಘಾ ಮಠದ ಜಮೀನುಗಳು ಗೇಣಿದಾರ ಪಾಲಾಗುತ್ತದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಈ ಬಾಗದ ಅವರ ಗೇಣಿದಾರರಿಗೆ ನೀವು ಏಕೆ ಗೇಣಿದಾರರಾಗಿಯೂ ಅರ್ಜಿ ಸಲ್ಲಿಸಲಿಲ್ಲ ಎಂದು ಕೇಳಿದಾಗ ಅವರುಗಳು ಹೇಳಿದ್ದು ನಮಗೆ ಊಟ ಕೊಟ್ಟ ಮನೆ ವಿರುದ್ಧ ನಾವು ಹೋಗಬಾರದೆಂದೇ ತೀಮಾ೯ನ ಮಾಡಿದ್ದೆವೆಂದು ಈ ಕುಟುಂಬದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು.
ಬೋಜರಾಜರ ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿ ಆಗಿ ನಂತರ ಸಾಗರದಲ್ಲಿ ವಕೀಲರಾಗಿದ್ದ ಆನಂದಪುರಂ ಸಮೀಪದ ತಂಗಳವಾಡಿಯ ಭಟ್ಟಿ ಧರ್ಮಪ್ಪ ಜನತಾದಳದಲ್ಲಿ ವಿದಾನ ಸಭೆಗೆ ಸ್ಪರ್ದಿಸಿ ಗೆಲ್ಲಿಸಿ ಶಾಸಕರನ್ನಾಗಿಸಲು ಬೋಜರಾಜ ಮಾಸ್ತರ ಶ್ರಮ ತುಂಬಾ ಇತ್ತು.
ರಂಗನಾಥ ಸ್ವಾಮಿ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ನಿವೃತ್ತ ಜೀವನ ನಡೆಸುತ್ತಿದ್ದಾರೆ ಇಡೀ ಆನಂದಪುರಂನ ಇತಿಹಾಸ ಬಲ್ಲ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವರು ಒಬ್ಬರು.
(ನಾಳೆ ಭಾಗ-17)
Comments
Post a Comment