Skip to main content

ಆಮ್ಲಜನಕ ಕೊರತೆಯಿಂದ 24 ಜನ ಕೊರಾನಾ ಪೀಡಿತರ ಮರಣ, ನೈತಿಕ ಹೊಣೆ ಹೊತ್ತು ಜಿಲ್ಲಾ ಮಂತ್ರಿ ರಾಜಿನಾಮೆ ನೀಡಿದರೆ ಅವರ ಪ್ರಾಮಾಣಿಕತೆ ಅವರನ್ನು ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಖಂಡಿತವಾಗಿ ಒಯ್ಯವುದು.

#ಚಾಮರಾಜನಗರ_ಜಿಲ್ಲಾ_ಉಸ್ತುವಾರಿ_ಶಿಕ್ಷಣ_ಸಚಿವ_ಸಜ್ಜನ_ರಾಜಕಾರಣಿ_ಸುರೇಶ್_ಕುಮಾರ್
#ರಾಜಿನಾಮೆ_ನೀಡಲಿ_ಎಂದು_ಅವರ_ಅಭಿಮಾನಿ_ಆಗಿ_ಒತ್ತಾಯ_ಮಾಡುತ್ತೇನೆ.
    
  ಇದು ಎರೆಡು ವರ್ಷದ ಹಿಂದಿನ ಪೋಸ್ಟ್ (4 - ಮೇ -2019) ಅವತ್ತು ಸುರೇಶ್ ಕುಮಾರ್ ಮಂತ್ರಿ ಆಗಿರಲಿಲ್ಲ ಈಗ ಹಾಲಿ ಶಿಕ್ಷಣ ಸಚಿವರು.
   ಅವರು ಜಿಲ್ಲಾ ಉಸ್ತುವಾರಿ ಆಗಿರುವ ಚಾಮನಗರದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಕೊರಾನ ಪೀಡಿತರು ಮೃತರಾಗಿದ್ದಾರೆ ಇದು ಸಜ್ಜನ ರಾಜಕಾರಣಿ ಸುರೇಶ್ ಕುಮಾರ್ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ.
  ಈಗ ಸಕಾ೯ರ ಮತ್ತು ಪಕ್ಷದ ಕಾರಣದಿಂದ ಇವರಿಂದ ಕೊಡಿಸುತ್ತಿರುವ ಸಮಥ೯ನೆಗಳು ಇವರ ವ್ಯಕ್ತಿತ್ವಕ್ಕೆ ಮಸಿ ಬಳಿಯುತ್ತಿರುವುದು ಸುಳ್ಳಲ್ಲ
  ಆಮ್ಲಜನಕ ಇಲ್ಲದೆ ಸತ್ತವರು 3 ಜನ, ಉಳಿದ 21 ಜನ ಬೇರೆ ಕಾರಣದಿಂದ ಒಂದೇ ದಿನ ಅಂದರೆ ಆಸ್ಪತ್ರೆಯಲ್ಲಿ ಆಮ್ಲಜನಕ ಖಾಲಿ ಆದ ಸಂದಭ೯ದಲ್ಲೇ ಸತ್ತರು ಅನ್ನುವುದು ಯಾರಾದರು ನಂಬುವ ಸತ್ಯವೆ? ಇಂತಹ ಸುಳ್ಳನ್ನು ಸುರೇಶ್ ಕುಮಾರ್ ಬಾಯಲ್ಲಿ ಹೇಳಿಸುವ ಸಕಾ೯ರದ ಹುನ್ನಾರಕ್ಕೆ ಸುರೇಶ್ ಕುಮಾರ್ ಬಲಿಯಾಗುವುದಕ್ಕಿಂತ ತಮ್ಮ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರೆ ಅವರ ವ್ಯಕ್ತಿತ್ವಕ್ಕೆ ಶೋಭೆ ಬರುತ್ತಿತ್ತು.

               👇2 ವಷ೯ದ ಹಿಂದಿನ ಪೋಸ್ಟ್
#ನನ್ನ_ಇವತ್ತಿನ_ವಿಶೇಷ_ಅತಿಥಿ_ಮಾಜಿ_ಕಾನೂನು_ಸಚಿವ_ಹಾಲಿ_ರಾಜಾಜಿ_ನಗರದ_ಶಾಸಕರಾದ_ಶ್ರೀಸುರೇಶ್_ಕುಮಾರ್#
  ಕನಾ೯ಟಕ ರಾಜ್ಯದಲ್ಲಿ ಸಜ್ಜನ ರಾಜಕಾರಣಿ ಅಂತ ಎಲ್ಲಾ ಪಕ್ಷದವರಿಂದ ಕರೆಸಿಕೊಳ್ಳುವ S. ಸುರೇಶ್ ಕುಮಾರ್ ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ.
  ನಾನು ಅವರ ಅಭಿಮಾನಿ, ಪೇಸ್ ಬುಕ್ ನಲ್ಲಿ ಅವರನ್ನ ಹಿಂಬಾಲಿಸುತ್ತೇನೆ, ಅವರ ಯಾವುದೇ ಹೇಳಿಕೆ ಇದ್ದರೂ ತಪ್ಪದೇ ಓದುತ್ತೇನೆ.
  ಸರಳ ಜೀವನ, ಆಹಾರ ಉಡುಪುಗಳ ಸುರೇಶ್ ಕುಮಾರ್ ಕೊಡಗಿನ ಹಿಂದಿನ ಚುನಾವಣೆಯಲ್ಲಿ ಸಣ್ಣ ಪಾರಂ ಹೌಸ್ ನ ಕೊಟ್ಟಿಗೆಯಲ್ಲಿ ವಾಸ್ತವ್ಯ ಹೂಡಿದ್ದರು ಅದರ ನಿತ್ಯ posting ನೋಡುತ್ತಿದ್ದೆ, ಇವತ್ತಿನ ರಾಜಕಾರಣಿಗಳು  ಕಾರು ಬಾರು, ವಿದೇಶ ಪ್ರಯಾಣ, ಪಂಚತಾರ ಸೇವೆ ಬಯಸುವಾಗ ಇವರು ಸರಳ ಮಾಗ೯ದಲ್ಲಿ ಜೀವನ ಮಾಡುವುದು ಇವತ್ತಿನ ಅಪರೂಪದಲ್ಲಿ ಅಪರೂಪ.
  ಇವರಿಗೆ ಡಾಕ್ಟರೇಟ್ ಕೊಡುವುದಾಗಿ ಯಾರೋ ಸಂಪಕಿ೯ಸಿದರು, ಬೇರೆಯವರಾದರೆ ಹಿಂದೆ ಮುಂದೆ ನೋಡದೆ ಹೆಸರಿನ ಮುಂದೆ ಡಾಕ್ಟರ್ ಅಂತ ಹಾಕಿ ಕೊಳ್ಳಲು ಓಡುತ್ತಿದ್ದರು ಆದರೆ ಇವರು ಅದನ್ನ ನಿರಾಕರಿಸಿದ್ದಲ್ಲದೆ ನಕಲಿ ಡಾಕ್ಟರೇಟ್ ನೀಡುವ ಆ ಸಂಸ್ಥೆಯ ಅಸಲಿಯತ್ತು ಬಯಲಿಗೆಳೆದರು.
  ಸದನದಲ್ಲಿ ಇವರ ಪಕ್ಷದವರೇ ಬ್ಲೂಪಿಲಂ ವೀಕ್ಷಿಸಿ ಸುದ್ದಿ ಆದಾಗ ಇವರ ಕೋಪ ನೋಡಬೇಕಿತ್ತು, ಅಯೋಗ್ಯ ಕೆಲಸ ಮಾಡಿದ ಮಂತ್ರಿಗಳನ್ನ ಲೆಪ್ಟ್ ರೈಟ್ ಮಾಡಿದ್ದರು, ಜೀವನದಲ್ಲಿ ನಡೆ ನುಡಿ ಮತ್ತು ಆಚರಣೆಯಲ್ಲಿ ಈ ರೀತಿ ಶಿಸ್ತು ಅಳವಡಿಸಿಕೊಂಡಿರುವ ಇಂತವರು ರಾಜಕೀಯ ಪಕ್ಷದಲ್ಲಿ ಇರುವುದೂ ಅಸಾಧ್ಯ ಆದರೆ ಇದ್ದರೂ ಅತ್ಯಂತ ಕಡಿಮೆ ಅದರಲ್ಲಿ ಇವರೊಬ್ಬರು ಮಾತ್ರ.
  ಇಂತವರು ಮುಖ್ಯಮಂತ್ರಿ ಆಗ ಬೇಕು ಅಂತ ನಾವೆಲ್ಲ ಅನೇಕ ಬಾರಿ ಚಚಿ೯ಸಿದ್ದೆವು.
  ಇವತ್ತು ಇವರು ನನ್ನ ಕಚೇರಿಗೆ ಬಂದಿದ್ದು ನನ್ನ ಆತಿಥ್ಯ ಸ್ವೀಕರಿಸಿದ್ದು ನನಗೆ ಅತ್ಯಂತ ಸಂತೋಷ ಆಯಿತು, ಕಾಫಿ, ಟೀ ಹಾಲು ಸೇರಿಸಿದ್ದು ಇವರಿಗೆ ಆಗಿ ಬರುವುದಿಲ್ಲ, ಲೆಮನ್ ಸೋಡ, ಬ್ಲಾಕ್ ಟೀ ಸೇವಿಸಿದರು.
  ವಿಶೇಷ ಅಂದರೆ ಇವರ ಸೋಷಿಯಲ್ ಮೀಡೀಯಾದ ಪೇಸ್ ಬುಕ್, ವಾಟ್ಸ್ಪ್ ಇವರೇ ನಿವ೯ಹಿಸುತ್ತಾರೆ! ಇವತ್ತಿನ ದಿನದ ರಾಜಕಾರಣಿಗಳಲ್ಲಿ ಇಂತವರು ವಿರಳ.
 ಇದೆಲ್ಲ ಹೇಳಿದ್ದಕ್ಕೆ ಅವರು ಹೇಳಿದ್ದು ನಾನು ಇನ್ನು ಎಷ್ಟು ದಿನ ರಾಜಕಾರಣ ಮಾಡಬಲ್ಲೆ? ಅಂತ ನನಗೆ ನಾನೇ ಪ್ರಶ್ನೆ ಮಾಡಿಕೊಳ್ಳುತ್ತೇನೆ ಅಂದರು.
  ಸ್ವಚ್ಚ, ಸಜ್ಜನ ರಾಜಕಾರಣ ಮಾಡುವ ಇಂತವರು ರಾಜಕಾರಣದಲ್ಲಿ ಯಾವತ್ತೂ ಇರಲಿ, ಮುಂದಿನ ದಿನದಲ್ಲಿ ಕನ್ನಡ ನಾಡಿನ ಮುಖ್ಯಮಂತ್ರಿಯೂ ಆಗಲಿ ಅಂತ ಹಾರೈಸಿದೆ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...