Skip to main content

ಭಾಗ - 28, ಬ್ರಿಟೀಷರ ಮೋಜು ಮಸ್ತಿ ಮತ್ತು ವಿಶ್ರಾಂತಿಗೆ ನಿರ್ಮಿಸಿದ್ದ ಒಂದು ಕಾಲದ ಐಶಾರಾಮಿ ಬಂಗಲೆ.ಮೂರು ಶತಮಾನಕ್ಕೂ ನಂಟಿರುವ ಹಾಲಿ ಯಡೇಹಳ್ಳಿಯ ಹೊಸನಗರ ರಸ್ತೆಯ ಆನಂದಪುರಂನ ಈಗಿನ ಪ್ರವಾಸಿ ಮಂದಿರ, ಆನಂದಪುರಂ ತಾಲ್ಲೂಕ್ ಕೇಂದ್ರ ಆಗಿದ್ದಾಗ ತಾಲ್ಲೂಕ್ ಕಚೇರಿ, ಸಾಗರ ತಾಲ್ಲೂಕಿನ ಮೊದಲ ನ್ಯಾಯಾಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಕೂಡ ಆಗಿತ್ತು.

#ಭಾಗ_28

#ಬ್ರಿಟೀಷರ_ಆಡಳಿತದ_ಪಳಿಯುಳಿಕೆಯಂತೆ_ಉಳಿದಿರುವ_ಆನಂದಪುರಂನ_ಪ್ರವಾಸಿ_ಮಂದಿರ.

#ಸುಮಾರು_ಮೂರು_ಶತಮಾನಕ್ಕೂ_ನಂಟು_ಇದೆ.

#ಆನಂದಪುರಂ_ತಾಲ್ಲೂಕ್_ಆಗಿದ್ದಾಗ_ಇದು_ತಾಲ್ಲೂಕ್_ಕಚೇರಿ.

#ಸಾಗರ_ತಾಲ್ಲೂಕಿನ_ಮೊದಲ_ನ್ಯಾಯಾಲಯ_ಕಚೇರಿ_ಇದಾಗಿತ್ತು.

#ಆನಂದಪುರಂ_ಸ್ಟೇಟ್_ಬ್ಯಾಂಕ್_ಆಫ್_ಮೈಸೂರು_ಮೊದಲ_ಬ್ರಾಂಚ್_ಇದೇ_ಕಟ್ಟಡ_ಆಗಿತ್ತು.

#ಇಲ್ಲಿ_ತಂಗಿದ್ದ_ಮಹನೀಯರು_ಅನೇಕರು.

  ಬ್ರಿಟಿಷರು ಯಡೇಹಳ್ಳಿಯ ದಟ್ಟ ಅರಣ್ಯದ ಮಧ್ಯೆ ಎತ್ತರದ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಕಟ್ಟಿದ ಈ ಸುಸಜ್ಜಿತವಾದ ಬಂಗ್ಲೆ ಆ ಕಾಲದಲ್ಲಿ A ಗ್ರೇಡಿನದ್ದಂತೆ.
  ಪೂರ್ವದ ಎಡಗಡೆ ತಾವರೆಕೆರೆ ಬಲ ಬಾಗದಲ್ಲಿ ಶಿವಮೊಗ್ಗ ಕೊಲ್ಲೂರು ಹೆದ್ದಾರಿ ಇದೆ, ಕಾಡುಪ್ರಾಣಿಗಳು ನೀರು ಕುಡಿಯಲು ಬಂದಾಗ ಬ್ರಿಟೀಷ್ ದೊರೆಗಳು ಶಿಕಾರಿ ಮಾಡಲು ಅನುಕೂಲ ಇತ್ತು.
  ಸುಮಾರು 5 ಎಕರೆ ಪ್ರದೇಶದ ಮಧ್ಯದಲ್ಲಿ ಅತ್ಯುತ್ತಮ ಎರೆಡು ಬೆಡ್ ರೂಂನ (ಅಟ್ಯಾಚ್ ಟಾಯಲೆಟ್ ಇರುವ) ಸೂರ್ಯೋದಯ ಮತ್ತು ಸೂಯಾ೯ಸ್ಥಗಳ ವೀಕ್ಷಣೆಗೆ ವರಾಂಡಗಳಿರುವ, ಸುಸಜ್ಜಿತ ಅಡುಗೆ ಮನೆ ಮತ್ತು ಹಾವು ಇತ್ಯಾಧಿ ಸರಿಸೃಪಗಳಿಂದ ರಕ್ಷಣೆಗಾಗಿ ಸುಮಾರು 4 ಅಡಿ ಎತ್ತರದ ಅಡಿಪಾಯದ ವಿಷಾಲವಾದ ಮೆಟ್ಟಿಲುಗಳ ಈ ಸುಸಜ್ಜಿತ ಕಟ್ಟಡದ ಉತ್ತರಕ್ಕೆ ತೆರೆದ ಬಾವಿ ಅದರ ಸಮೀಪ ಬಂಗ್ಲೆ ಕಾವಲುಗಾರನ ಮನೆ ನಿರ್ಮಿಸಿದ್ದಾರೆ.
  ಇಲ್ಲಿ ತಂಗಿ ವಿಹರಿಸಲು ಬ್ರಿಟಿಷರಿಗೆ ಇದು ಸೊಗಸಾದ ಸುಸಜ್ಜಿತವಾದ ತಂಗುದಾಣವಾಗಿ ನೂರಾರು ವರ್ಷ ಬಳಕೆ ಆಗಿತ್ತು.
  ಇದು ಬ್ರಿಟಿಷ್ ರಿಗೆ ಮೋಜು, ಮಸ್ತಿ, ಶಿಕಾರಿ, ತಂಗುದಾಣಕ್ಕಾಗಿ ನಿರ್ಮಿಸಿದ ಐಶಾರಾಮಿ ಬಂಗಲೆ ಆಗಿತ್ತು.
  1970ರವರೆಗೆ ಇದೊಂದು ಪ್ರೇಕ್ಷಣಿಯ ಸ್ಥಳ ಆಗಿತ್ತು. ಸುತ್ತಲೂ ಮಣ್ಣಿನ ಅಂಗಳ, ಕಾವಲುಗಾರರ ಮನೆತನಕ ರಸ್ತೆಯ ಇಕ್ಕೆಲದಲ್ಲಿ ನಾಗಸಂಪಿಕೆ ಮರ, ಬಂಗಲೆ ಎದುರಲ್ಲಿ ಸಣ್ಣ ಗಾಳಿಮರದ ತೋಪು ಅದರ ಮಧ್ಯ ಆನಂದಪುರಂನ ಕೋಟೆ ಒಳಗಿನ ಪಿರಂಗಿ, ವಿಗ್ರಹ ಇತ್ಯಾದಿ ಜೋಡಿಸಿಟ್ಟಿದ್ದರು.
   ಶರಾವತಿ ವಿದ್ಯುತ್ ಉತ್ಪಾದನೆ ಶುರು ಮಾಡುವಾಗ ಮಳೆ ಮಾಪಕ ಯ೦ತ್ರ ಇಲ್ಲಿ ಸ್ಥಾಪಿಸಿದ್ದರು.
  ಇಲ್ಲಿನ ಸುಂದರವಾದ ಉದ್ಯಾನವನ ನಿರ್ವಣೆಯ ಮಾಲಿ ಕೆಲಸ ಇಲ್ಲಿನ ಮೇಟಿಯದ್ದೇ ಆಗಿತ್ತು, ಬಾವಿಯಿಂದ ಗಿಡಗಳಿಗೆ ನೀರುಣಿಸಲು ಇಂಗ್ಲೆಂಡ್ ನಿಂದ ತಂದಿದ್ದ ಒಂಟೆ ಚಕ್ರದ ಕೈಗಾಡಿ ಇತ್ತು.
  ಸಂಜೆಯ ಹೊತ್ತಲ್ಲಿ ಮತ್ತು ಬೆಳಗಿನ ಸೂಯೋ೯ದಯದಲ್ಲಿ ವಾಯುವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ ಇದಾಗಿತ್ತು.
  ನಂತರ ಇಲ್ಲಿ ಇಟ್ಟಿದ್ದ ಪಿರಂಗಿ ಇತ್ಯಾದಿ ಕಳ್ಳರಿಂದ ರಕ್ಷಿಸಲಿಕ್ಕಾಗಿ ಸಾಂಗ್ಲಿಯಾನರು SP ಆಗಿದ್ದಾಗ  ಶಿವಮೊಗ್ಗದ ಜಿಲ್ಲಾ ಪೋಲಿಸ್ ಕಚೇರಿ ಎದರು ತೆಗೆದುಕೊಂಡು ಸ್ಥಾಪಿಸಿದ್ದಾರೆ.
  ಸಾಗರ ತಾಲ್ಲೂಕ್ ಕೇಂದ್ರವಾಗಿ ಬೆಳೆಯುತ್ತಾ ಇಲ್ಲಿನ ಬ್ರಿಟೀಷರ ಈ ಬಂಗ್ಲೆ ನಿರಾಸಕ್ತಿಗೆ ಒಳಗಾಗಿ ಹಿಂದಿನ ಎಲ್ಲಾ ವಿಜೃಂಬಣೆ ಕಳೆದುಕೊಂಡು ಒಂದು ಕಟ್ಟಡದ ರೀತಿ ಉಳಿದಿದೆ, ಆಗಾಗ್ಗೆ ದುರಸ್ತಿ ಇತ್ಯಾದಿ ನಡೆಯುತ್ತದೆ ಆದರೆ ಬ್ರಿಟೀಷರ ದೂರದೃಷ್ಠಿ ಇಲ್ಲದ ಸ್ವಾತಂತ್ರ ಭಾರತದ ಸರ್ಕಾರಿ ಇಂಜಿನಿಯರ್ ಗಳಿಂದ ಸುಂದರವಾಗಿದ್ದ ಇದರ ಸೌಂದರ್ಯ ಈಗ ಉಳಿದಿಲ್ಲ.
   1890ರಲ್ಲಿ ಆನಂದಪುರಂ ತಾಲ್ಲೂಕ್ ಆಗಿತ್ತು (ಈಗ ಸಾಗರ ತಾಲ್ಲೂಕ್ ಸೇರಿದ ಹೋಬಳಿ) ಆಗ ಈ ಬಂಗ್ಲೆ ತಾಲ್ಲೂಕ್ ಕಚೇರಿ ಆಗಿತ್ತು.
   ನಂತರ ಇದು ಸಾಗರ ತಾಲ್ಲೂಕಿನ ಮೊದಲ ನ್ಯಾಯಾಲಯ ಆಗಿ ಕಾರ್ಯನಿರ್ವಹಿಸಿತ್ತು.
  1960 ರ ದಶಕದಲ್ಲಿ ಬದರೀನಾರಾಯಣ್ ಆಯ್ಯಂಗಾರ್, ವೆಂಕಟಾಚಲಯ್ಯಂಗಾರ್, ದೈಹಿಕ ಶಿಕ್ಷಕರಾಗಿದ್ದ ಎಸ್.ಆರ್.ಕೃಷ್ಣಪ್ಪ ಮತ್ತು ವಿಲೇಜ್ ಪಂಚಾಯತನ ಚೇರ್ಮನ್ ಸದಸ್ಯರ ಮನವಿ ಮೇರೆಗೆ 1964ರಲ್ಲಿ ದೇಶದ ಮೊದಲ "ಒನ್ ಮ್ಯಾನ್ ಬ್ಯಾಂಕ್ " ಆನಂದಪುರಂ ಗೆ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ  ವಿಶೇಷವಾಗಿ ರಿಸರ್ವ ಬ್ಯಾಂಕ್ ನಿಂದ ಮಂಜೂರಾತಿ ಪಡೆದು ಇದೇ ಬಂಗ್ಲೆಯಲ್ಲಿ ಉದ್ಘಾಟನೆ ಮಾಡುತ್ತಾರೆ.
  ಇದೇ ನ್ಯಾಯಾಲಯ ಕಟ್ಟಡದಲ್ಲಿ ವಿಶೇಷ ಕೋಟ್೯ ನಡೆದಾಗ ರೈತರ ಪರಿಹಾರ ನಿಧಿಗಾಗಿ ಬಂಗಾರಪ್ಪನವರು (ಮಾಜಿ ಮುಖ್ಯಮಂತ್ರಿ) ಕೆಲ  ಕಾಲ ಕೋರ್ಟ್ ಕಲಾಪದಲಿ ವಕೀಲರಾಗಿ ಭಾಗವಹಿಸಿದ್ದರು, ಆಗ ಅವರು ಕಣ್ಣೂರಿನ ಅಡಿಗೆ ಮನೆಯವರಲ್ಲಿ (ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಕೆ.ಟಿ.ತಿಮ್ಮೇಶ್ ರ ಮೂಲ ಮನೆ) ಅತಿಥಿ ಆಗಿ ಉಳಿದಿದ್ದರು ಮತ್ತು ಆಗ ಅವರ ಸವಾರಿ ಹೊಸ ಸ್ಯೆಕಲ್ ನಲ್ಲಿ ಅಂತ ನೋಡಿದ ಹಿರಿಯರು ನೆನಪಿಸುತ್ತಾರೆ.
   ಇಲ್ಲಿ ಪ್ರಖ್ಯಾತ ನರಭಕ್ಷಕ ಶಿಕಾರಿಗಾರ ಮತ್ತು ಬರಹಗಾರ ಕೆನೆತ್ ಅಂಡರ್ಸನ್, ದೀವಾನರಾಗಿದ್ದ ವಿಶ್ವೇಶ್ವರಯ್ಯ ಆದಿ ಆಗಿ ಅನೇಕ ನಾಡಿನ ಪ್ರಖ್ಯಾತರು ಇಲ್ಲಿ ವಿಶ್ರಮಿಸಿದ್ದ ದಾಖಲೆ ಹೊಂದಿದ ಈ ಬ್ರಿಟೀಷ್ ಬ೦ಗ್ಲೆ ನಂತರ ಅಧಿಕಾರಿಗಳಿಗೆ ಅವರ ಸರ್ಕಾರಿ ಕಾರ್ಯ ನಿಮಿತ್ತದ ಮಧ್ಯೆವಿಶ್ರಾಂತಿ ಪಡೆಯಲು ತಂಗಲು ಇನ್ಸ್‌ಪೆಕ್ಷನ್ ಬಂಗ್ಲೆ ಆಗಿ ನಂತರ PWD ಇಲಾಖೆ ಪ್ರವಾಸಿ ಮಂದಿರ ಆಗಿ ಪರಿವರ್ತಿಸಿದೆ.
  ನಂತರ ಇದರ ಎದುರೆ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಆಯಿತು, ಅದರ ಇನ್ನೊಂದು ಭಾಗದಲ್ಲಿ ಕ್ಯಾಥೋಲಿಕ್ ಚರ್ಚ್ ಆಯಿತು, ಆನಂದಪುರಂ ಹೊಸನಗರ  ರಸ್ತೆ ಡಾಂಬರೀಕರಣ ಆಯಿತು, ಎದುರಿಗೆ ಯಡೇಹಳ್ಳಿ ಗ್ರಾ.ಪಂ. ಕಚೇರಿ ಆಗಿದೆ, ಸುತ್ತಲೂ ಜನ ವಸತಿ ಬೆಳೆದು ಆ ಕಾಲದ ಏಕಾಂತತೆ, ವಾಯು ವಿಹಾರ ತಾಣ, ಉದ್ಯಾನವನ ಯಾವುದು ಈಗ ಇಲ್ಲವಾಗಿದೆ ಆ ಕಾಲದ ರಾಜ ವೈಭೋಗ ನೋಡಿದವರಿಗೆ ಕೇಳಿದವರಿಗೆ ಬ್ರಮನಿರಸನ ಆಗುವಂತ ಒಂದು ಸರ್ಕಾರಿ ಕಟ್ಟಡ ಇರುವ ಪ್ರದೇಶ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...