ಸುಕೇಳಿ ಬೇಕಾ ಸುಕೇಳಿ, ಬಿಸಿಲಲ್ಲಿ ಒಣಗಿಸಿದ ಬಾಳೆ ಹಣ್ಣು ಡ್ರೈ ಪ್ರೂಟ್ ಸಾಗರದ ನಾಗೇಂದ್ರ ಸಾಗರ್ ಕೃಷಿ ಪಾರಂ ನಲ್ಲಿ ತಯಾರಿಸುತ್ತಿದ್ದಾರೆ.
#ಸಾಗರದ_ನಾಗೇಂದ್ರ_ಸಾಗರ್_ತಯಾರಿಸಿದ_ಸುಕೇಳಿ_ನಂಬರ್_ಒನ್.
#ಬೇಕಾದವರು_8147299353_ಸಂಪರ್ಕಿಸಿ.
#ಶುದ್ದ_ಪರಿಸರದಲ್ಲಿ_ಸೋಲಾರ್_ಡ್ರೈಯರ್ನಲ್ಲಿ_ಒಣಗಿಸಿದ_ಬಾಳೆಹಣ್ಣು
ಸುಕೇಳಿ ಮರಾಠಿ ಭಾಷೆಯಲ್ಲಿ ಹಿಂದಿಯ ಸುಕ್ಕಾ - ಕೇಲ ಸೇರಿ ಆದ ಸುಕೇಳಿ ಅನ್ನುತ್ತಾರೆ, ಮಾಗಿದ ಬಾಳೆ ಹಣ್ಣು ಚಕ್ರಾಕಾರವಾಗಿ ಕತ್ತರಿಸಿ ಹದ ಬಿಸಿಲಲ್ಲಿ ಒಣಗಿಸಿಟ್ಟರೆ ಅದು ಅನೇಕ ಪೋಷಕಾಂಶಗಳನ್ನು ಹೊಂದಿದ ಡ್ರೈ ಪ್ರೂಟ್ ಆಗುತ್ತದೆ.
ಇದು ಮಹಾರಾಷ್ಟ್ರದ ಕೊಂಕಣ್ ಭಾಗದಲ್ಲಿ, ಗೋವಾ ಮತ್ತು ಕರ್ನಾಟಕದ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮಲ್ಲಿ ಹಪ್ಪಳ ಸಂಡಿಗೆ ಮಾಡಿ ಮಳೆಗಾಲಕ್ಕಾಗಿ ಸಂಗ್ರಹಿಸಿದಂತೆ ಆ ಭಾಗದಲ್ಲಿ ಅವರ ವಾರ್ಷಿಕ ಬಳಕೆಗೆ ಬೇಕಾಗುವಷ್ಟು ಒಣಗಿಸಿ ಶೇಖರಿಸಿಡುವ ಪದ್ದತಿ ಇದೆ.
ನಮ್ಮ ಭಾಗದಲ್ಲಿ ಇದು ಅಪರೂಪ ಅದರಲ್ಲೂ ಇದನ್ನು ಒಣಗಿಸುವುದರಲ್ಲಿ ಬೇಕಾದ ಕೌಶಲ್ಯದ ಹದ ಬಹಳ ಜನರಿಗೆ ಗೊತ್ತಿಲ್ಲ, ಬಿಸಿಲು ಜಾಸ್ತಿ ಆದರೂ ರುಚಿ ವ್ಯತ್ಯಾಸ, ಬೇಸಿಗೆಯ ದೂಳಿನ ಗಾಳಿ ಬಿಸಿಲಿಗಿಟ್ಟಾಗ ಬಾಳೆ ಹಣ್ಣಿಗೆ ಸೇರಿದರೆ ಅದು ಅನಾರೋಗ್ಯಕ್ಕೆ ಕಾರಣ, ನೇರವಾಗಿ ಮನುಷ್ಯರ ಕೈ ತಾಗಬಾರದು.
ನಾಗೇಂದ್ರ ಸಾಗರ್ ಕೃಷಿಯಲ್ಲಿ ಪ್ರಾಕ್ಟಿಕಲ್ ಮನುಷ್ಯರು, ಡೈರಿ, ಕ್ಯಾಟಲ್ ಪೀಡ್ಸ್, ಜೇನು ಸಾಗಾಣಿಕೆ, ಎರೆ ಹುಳದ ಗೊಬ್ಬರ ತಯಾರಿಸಿ ಮಾರಾಟದ ಜೊತೆ ವಿವಿದ ಕೃಷಿ ತೋಟಗಾರಿಕಾ ಮೌಲ್ಯವರ್ಧನೆಯ ಪ್ರಯೋಗ ಮಾಡುತ್ತಾರೆ. ಹೊಸದಾಗಿ ತಂದಿರುವ ಸೋಲಾರ್ ಡ್ರೈಯರ್ ನಲ್ಲಿ ಅವರದೇ ತೋಟದ ಬಾಳೆ ಹಣ್ಣಿನ ಸುಕೇಳಿ ಮೊದಲ ಬ್ಯಾಚ್ ತಯಾರು ಆದ ಬಗ್ಗೆ FB ಯಲ್ಲಿ ಬರೆದಿದ್ದರು, ಕೆಜಿಗೆ 220 ರೂಪಾಯಿ ಅಂತ ನಾನು ಎರೆಡು ಕೆಜಿಗೆ ಆರ್ಡರ್ ಮಾಡಿದ್ದೆ ಅತ್ಯುತ್ತಮವಾದ ಪ್ಯಾಕಿಂಗ್ ನಲ್ಲಿ 500 ಗ್ರಾಂ ನ ನಾಲ್ಕು ಡಬ್ಬಿ ಕಳಿಸಿದ್ದರು.
ನಿಜಕ್ಕೂ ಉತ್ಕೃಷ್ಟ ದರ್ಜೆಯ ಸುಕೇಳಿ ಇದು ಅಷ್ಟೇ ರುಚಿಯಾಗಿದೆ, ಯಾವುದೇ ಪ್ರಿಸವೇ೯ಟಿವ್ ಬಳಸದೇ ತಮ್ಮ ಸೋಲಾರ್ ಡ್ರೈಯರ್ ನಲ್ಲಿ ತಯಾರಿಸಿದ್ದು.
ಶುದ್ಧವಾದ ರುಚಿಕರವಾದ ಸುಕೇಳಿ ಬೇಕಾದವರು ನಾಗೇಂದ್ರ ಸಾಗರ್ ಅವರ 8147299353 ಗೆ ಸಂಪಕಿ೯ಸ ಬಹುದು.
Comments
Post a Comment