ಭಾಗ - 25, ಆನಂದಪುರಂನ ಪುರಾತನ ಬ್ರಹ್ಮಪುರಿ ಆಂಜನೇಯ ದೇವರ ಪರಿವಾರದ ಎ.ಎಸ್. ಆನಂದ್ ರಾಜ್ಯ ಸರ್ಕಾರದ ಸಾವಯವ ಕೃಷಿ ಮಿಷನ್ ಅಧ್ಯಕ್ಷರು
#ಭಾಗ_25.
#ರಾಜ್ಯಸರ್ಕಾರದ_ಈಗಿನ_ಸಾವಯುವ_ಕೃಷಿ_ಮಿಷನ್_ಅಧ್ಯಕ್ಷರ_ಪೂರ್ತಿ_ಹೆಸರು
#ಆನಂದಪುರಂ_ಶ್ರೀಪಾದಆಚಾರ್_ಆನಂದ್.
#ಇವರು_ಆನಂದಪುರಂಗೆ_ಬ್ರಹ್ಮಪುರಿ_ಆಂಜನೇಯ_ತಂದ_ಕುಟುಂಬದವರು
#ಈಗ_ಸಾಗರ_ಸಮೀಪದ_ಲಿಂಗದಳ್ಳಿಯಲ್ಲಿ_ಸಾವಯುವ_ಕೃಷಿ_ಪ್ರಯೋಗಶಾಲೆ_ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದಾಗೆಲ್ಲ ಎ.ಎಸ್ ಆನಂದ್ ರನ್ನು ಸಾವಯವ, ಜೀವ ವೈವಿಧ್ಯ, ಪಶ್ಚಿಮ ಘಟ್ಟ ಅಭಿವೃದ್ಧಿಯ ಬಗ್ಗೆಯ ನಿಗಮದ ಅಧ್ಯಕ್ಷರನ್ನಾಗಿ ಮಾಡಿ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುತ್ತಾರೆ, ಅವರಿಗೆ ನೀಡಿದ ಜವಾಬ್ದಾರಿಯನ್ನು ಅಷ್ಟೆ ಮುತುವಜಿ೯ಯಿಂದ ನಿರ್ವಹಿಸುತ್ತಾರೆ.
ಪ್ರಚಾರ ಪ್ರಿಯರಲ್ಲದ ಇವರು ಸಭೆ ಸಮಾರಂಭದಿಂದ ದೂರವಿರುತ್ತಾರೆ ಆದರೆ ಸಾವಯವ ಕೃಷಿ ಪರವಾರದ ಸದಸ್ಯರಲ್ಲಿ ತುಂಬಾ ಹತ್ತಿರ ಇರುತ್ತಾರೆ.
2004ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನ ರಾಜ್ಯಕ್ಕೆ ಕರೆ ತರುವ ಮಹತ್ತರ ಕಾರ್ಯಕ್ರಮದಲ್ಲಿ ಇವರು ಮುಂಚೂಣಿಯಲ್ಲಿದ್ದರು.
ಈಗ ಸಾಗರದ ಲಿಂಗದಳ್ಳಿ (ಎಲ್.ಟಿ.ಹೆಗ್ಗಡೆಯವರ ಊರು)ಯಲ್ಲಿ ಸಾವಯವ ಕೃಷಿ, ಗೋಶಾಲೆ, ಸಾವಯವ ಕೃಷಿ ಸಂಶೋಧನೆ ಮಾಡುತ್ತಿದ್ದಾರೆ.
ಆನಂದಪುರಂನ ಪ್ರಾಣೇಶ್ ಆಚಾರ್
ತಂದೆ ಶಿಕ್ಷಕರಾಗಿದ್ದ ಶೇಷಾಚಾರ್ ರ ದಾಯಾದಿ ಆನಂದಪುರಂ ಶ್ರೀನಿವಾಸಾಚಾರ್ ಗೆ 1966 ರಲ್ಲಿ ಸಾಗರದಲ್ಲಿ ಪೋಲಿಸ್ ಇಲಾಖೆಯಲ್ಲಿ DySP ಆಗಿದ್ದ ಮಗ ರಾಮಣ್ಣ ಮತ್ತು ಅರಣ್ಯಾಧಿಕಾರಿ ಆಗಿದ್ದ ಶಾಮಾಚಾರ್ ಎಂಬ ಪುತ್ರರು.
ತಂದೆ ಶಿಕ್ಷಕರಾಗಿದ್ದ ಶೇಷಾಚಾರ್ ರ ದಾಯಾದಿ ಆನಂದಪುರಂ ಶ್ರೀನಿವಾಸಾಚಾರ್ ಗೆ 1966 ರಲ್ಲಿ ಸಾಗರದಲ್ಲಿ ಪೋಲಿಸ್ ಇಲಾಖೆಯಲ್ಲಿ DySP ಆಗಿದ್ದ ಮಗ ರಾಮಣ್ಣ ಮತ್ತು ಅರಣ್ಯಾಧಿಕಾರಿ ಆಗಿದ್ದ ಶಾಮಾಚಾರ್ ಎಂಬ ಪುತ್ರರು.
ಅರಣ್ಯಾಧಿಕಾರಿ ಶ್ಯಾಮಾಚಾರ್ ಗೆ ಆನಂದಪುರಂ ಶ್ರೀಪಾದ ಆಚಾರ್ ಎಂಬ ಮಗ ಮತ್ತು ಇಬ್ಬರು ಪುತ್ರಿಯರು ಇವರು ಶಿವಮೊಗ್ಗದಲ್ಲಿ ಕಮಲಾ ನೆಹರು ಬಿಎಡ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು, ಒಬ್ಬ ಪುತ್ರಿ ಶಾಂತಿ ಈ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ.
ಶ್ರೀಪಾದ ಆಚಾರ್ ಸಾಗರ ಮತ್ತು ಶಿವಮೊಗ್ಗದಲ್ಲಿ ಶಿಕ್ಷಣ ಇಲಾಖೆಯಲ್ಲಿ ಕಾಯ೯ನಿವ೯ಹಿಸಿದ್ದರು. ಶಿವಮೊಗ್ಗ ಸಮೀಪದ ಉಂಬಳೆಬೈಲಿನ ಸರ್ಕಾರಿ ಪ್ರೌಡ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದರು ಇವರ ಪತ್ನಿ ಶ್ರೀಮತಿ ಆನಂದಪುರಂ ಸಮೀಪದ ಗೌತಮಪುರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡಿದ್ದರು ಇವರ ಪುತ್ರರೆ A. S. ಆನಂದ್ ಅಂದರೆ ಆನಂದಪುರಂ ಶ್ರೀಪಾದಾಚಾರ್ ಆನಂದ್ ಹಾಲಿ ರಾಜ್ಯ ಸರ್ಕಾರದ ಸಾವಯವ ಕೃಷಿ ಮಿಷನ್ ಎಂಬ ನಿಗಮ ಮಂಡಳಿ ಅಧ್ಯಕ್ಷರು.
ಭಾರತೀಯ ಜನತಾ ಪಕ್ಷದ ಸ್ಥಳಿಯರಿಗೆ ಇವರು ಇಲ್ಲಿಯವರಲ್ಲ ಅಂತನೇ ತಿಳಿದಿದ್ದಾರೆ, ಇವರ ಪೂರ್ವಜರು ಗುಲ್ಬರ್ಗದ ಬ್ರಹ್ಮಪುರಿಯಿಂದ ಬಹುಮನಿ ಸುಲ್ತಾನರ ಅಕ್ರಮಣದಿಂದ ಸಾಮೂಹಿಕವಾಗಿ ಬ್ರಹ್ಮಪುರಿ ಆಂಜನೇಯನ ಶಿಲಾ ವಿಗ್ರಹದೊಂದಿಗೆ ಆನಂದಪುರಂ ಗೆ ಬಂದು ಕೆಳದಿ ಅರಸರ ಆಶ್ರಯ ಪಡೆದ ಆನಂದಪುರದ ಶೇಷಾಚಾರ್ ಅಂದು ಬಂದುಗಳು ಇವರು.
ಇವರು ಆನಂದಪುರಂ ಮೂಲದವರು ಎಂಬುದು ಹೆಮ್ಮೆಯ ಸಂಗತಿ ಮತ್ತು ಇವರೆಲ್ಲ ವಂಶಸ್ಥರ ಹೆಸರಿನ ಮುಂದೆ ಆನಂದಪುರಂ ಎಂದೇ ನಮೂದಿಸಿ ತಮ್ಮ ಪೂರ್ವಿಕರಿಗೆ ಕೆಳದಿ ಅರಸರು ನೀಡಿದ ಜಾಗೀರ್ ಉಂಬಳಿಗಳ ನೆನಪಿಗಾಗಿ ಆನಂದಪುರಂ ಸ್ಮರಿಸುವುದು ವಂಶದಿಂದ ವಂಶಕ್ಕೆ ಮುಂದುವರಿಸಿದ್ದಾರೆ.
Comments
Post a Comment