ಮಂಗಳೂರಿನ ರೈತ ಸ್ನೇಹಿ ಮೋಣು ಇಕ್ಬಾಲ್ ಸಾಹೇಬರು ಸರಬರಾಜು ಮಾಡುವ ಮೀನು, ಕೋಳಿ ಗೊಬ್ಬರ, ಮೂಳೆ ಪುಡಿ, ಎರೆಹುಳ, ಹರಳೆ ಗೊಬ್ಬರ ಮತ್ತು ಬೇವಿನ ಹಿಂಡಿ ಮಿಶ್ರಣ ಶುಂಠಿ, ಅಡಿಕೆ, ತೆಂಗು ಮತ್ತು ರಬ್ಬರ್ ಗೆ ಸೂಪರ್ ಗೊಬ್ಬರ.
#ಮೀನಿನಪುಡಿ_ಮೂಳೆಪುಡಿ_ಬೇವಿನಹಿಂಡಿ_ಕೋಳಿಗೊಬ್ಬರದ_ಈ_ಮಿಶ್ರಗೊಬ್ಬರದ_ಪಲಿತಾಂಶ_ಅದ್ಬುತ
#ಮಂಗಳೂರಿನ_ಮೋನು_ಇಕ್ಬಾಲ್_ಎಂಬ_ರೈತ_ಸ್ನೇಹಿ_ಗೊಬ್ಬರ_ಸರಬರಾಜುದಾರ
#ಶುಂಠಿ_ಅಡಿಕೆ_ತೆಂಗು_ಮತ್ತು_ರಬ್ಬರ್_ಬೆಳೆಯಲ್ಲಿ_ಹೆಚ್ಚು_ಇಳುವರಿ_ಸಾಧ್ಯ.
#ರಬ್ಬರ್_ಬೇಸಾಯದಲ್ಲಿ_ನನ್ನ_ಸ್ವಂತ_ಅನುಭವ.
ಕೆಲ ವರ್ಷದ ಹಿಂದೆ ನಮ್ಮ ಊರ ಸಮೀಪದ ಗೌಡರು ಅಡಿಕೆ ತೋಟಕ್ಕೆ ಮೀನಿನ ಗೊಬ್ಬರ ಹಾಕಿಸಿದರು ಅನ್ನುವುದೇ ದೊಡ್ಡ ಸುದ್ದಿ ಯಾಕೆಂದರೆ ಮಾಂಸಹಾರಿಗಳು ಅಲ್ಲದವರು ಮೀನು ಗೊಬ್ಬರ ಹಾಕಲು ಒಪ್ಪುವುದು ಕಷ್ಟಸಾಧ್ಯ.
ಒಂದೆರೆಡು ವರ್ಷದಲ್ಲಿ ಅವರ ಅಡಿಕೆ ಇಳುವರಿ ಹೆಚ್ಚು ಇದೆ, ಮಿಡಿ ಅಡಿಕೆ ಉದುರುವುದು ಕಡಿಮೆ, ಅಡಿಕೆ ತೋಟ ಹಸಿರಾಗಿದೆ ಅಂತೆಲ್ಲ ಸುದ್ದಿಯೂ ಬಂತು ಆದರೆ ಈ ಗೊಬ್ಬರ ಯಾರಲ್ಲಿ ಸಿಗುತ್ತೆ, ಎಲ್ಲಿ ಸಿಗುತ್ತೆ ಅಂತ ಮಾಹಿತಿ ಇರಲಿಲ್ಲ.
ನನ್ನ ರಬ್ಬರ್ ಕೃಷಿಗೆ ಸಲಹೆ ಸಹಕಾರ ನೀಡುವ ನಾಗೇಶ್ ಗೌಡರು ಮಂಗಳೂರು ಕೇರಳದಲ್ಲಿ ಮೂಳೆ ಪುಡಿ ಮೀನು ಗೊಬ್ಬರ ಸಿಗುತ್ತೆ ತಂದು ನಿಮ್ಮ ರಬ್ಬರ್ ಗೆ ಹಾಕಿ ರಬ್ಬರ್ ಹಾಲು ಜಾಸ್ತಿ ಬರುತ್ತೆ ಅಂತಲೇ ಇದ್ದರು.
ಈ ಗೊಬ್ಬರ ಮಾರಾಟಗಾರರು ಅಂತ ಕೆಲವರಲ್ಲಿ ಸಂಪರ್ಕಿಸಿದೆ ಆದರೆ ಅವರು ಮಾರುವ ಗೊಬ್ಬರ ಗುಣಮಟ್ಟ ಇರಲಿಲ್ಲ, ಹೀಗಿರುವಾಗಲೇ ಒಂದು ದಿನ ಮೋನು ಇಕ್ಬಾಲ್ ಅಂತ ಮಂಗಳೂರಿಂದ ಬಂದು ನಮ್ಮ ಲಾಡ್ಜ್ ನಲ್ಲಿ ಉಳಿದರು ಅವರೇ ನಮ್ಮ ಊರಿನ ಗೌಡರಿಗೆ ಮೀನು ಗೊಬ್ಬರ ಪ್ರತಿ ವರ್ಷ ಸರಬರಾಜು ಮಾಡುವವರು ಅಂತ ಗೊತ್ತಾಯಿತು, ಇವರು ಚಿಕ್ಕಮಗಳೂರು ಕೊಡಗು ಬಾಗದಲ್ಲಿ ಹೆಚ್ಚು ವ್ಯವಹರಿಸುತ್ತಾರೆ.
ನಮ್ಮ ಭಾಗದಲ್ಲಿ ಮೀನು ಗೊಬ್ಬರ ಸರಬರಾಜು ಮಾಡಿ ಅಂದೆ, ಕನಿಷ್ಟ 300 ಚೀಲ ವ್ಯಾಪಾರದ ಆಡ೯ರ್ ಇದ್ದರೆ ತರಬಹುದು ಅಂದರು ನನ್ನ ಗೆಳೆಯ ಶೇಖ್ ಆಹಮದ್ ಸಾಹೇಬರಿಗೆ ( ಆಚಾಪುರ ಕೆರೆ ಕೆಳಗೆ ಅಡಿಕೆ ತೋಟ ಮಾಡಿದ್ದಾರೆ) ಪರಿಚಯಿಸಿದೆ ನಂತರ ಎರೆಡು ವರ್ಷ ಸತತವಾಗಿ ನನ್ನ ರಬ್ಬರ್ ಪ್ಲಾಂಟೇಶನ್ ಗೆ ಪ್ರತಿ ರಬ್ಬರ್ ಮರಕ್ಕೆ 1 ಕೆ.ಜಿ. ಅಂತೆ ಹಾಕಿದೆ ಕಳೆದ ವರ್ಷ ಕೊರಾನ ಮೊದಲ ಅಲೆಯಿಂದ ಗೊಬ್ಬರ ಬೇಕಾದ ಸಮಯದಲ್ಲಿ ಪೂರೈಕೆ ಆಗಲಿಲ್ಲ ಆದ್ದರಿಂದ ನಾನು ಹಾಕಲಿಲ್ಲ.
ಆದರೆ ನಮ್ಮ ರಬ್ಬರ್ ಶೀಟ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯಿತು, ರಬ್ಬರ್ ಟ್ಯಾಪರ್ ಗಳು ನಿಮ್ಮ ರಬ್ಬರ್ ಮರ ಒಳ್ಳೇ ಇಳುವರಿ ನೀಡುತ್ತೆ ಅಂದರು, ರಬ್ಬರ್ ಶೀಟ್ ಖರೀದಿಸುವ ಅಂಗಡಿಯವರು ನಮ್ಮ ಹುಡುಗರಿಗೆ ನಿಮ್ಮ ಸಾಹುಕಾರರು ಒಳ್ಳೇ ಕೃಷಿ ಮಾಡುತ್ತಾರೆ ಕಾಣುತ್ತೆ ಅದಕ್ಕೆ ರಬ್ಬರ್ ಇಳುವರಿ ಅಂದರು.
ಈ ವರ್ಷ ರಬ್ಬರ್ ಮರಗಳಿಗೆ ಮಳೆಗಾಲದಲ್ಲಿ ರಬ್ಬರ್ ಟ್ಯಾಪ್ ಮಾಡಲು ರೈನ್ ಗಾಡ್೯ ಅಳವಡಿಸಲು ನಾಗೇಶ್ ಗೌಡರಿಗೆ ವಹಿಸಿದ್ದೆ ಅವರು 3 ವರ್ಷದ ಹಿಂದೆ ನಿಮ್ಮ ರಬ್ಬರ್ ತೋಟ ಬೇರೆಯವರ ತೋಟಕ್ಕಿಂತ ಕೆಟ್ಟದಾಗಿ ಸೊರಗಿತ್ತು ಈಗ ಮೀನು ಗೊಬ್ಬರದಿಂದ ನಿಮ್ಮ ತೋಟ ನೋಡೋ ಹಂಗೆ ಇದೆ ಅಂದರು ಮತ್ತು ಈ ವರ್ಷ ಮೀನು ಗೊಬ್ಬರ ಪ್ರತಿ ಮರಕ್ಕೆ 2 kg ರೀತಿ ಹಾಕಿಸಿ ಅಂದರು.
ಕೊರಾನಾ ಲಾಕ್ ಡೌನ್ ನಲ್ಲಿ ಊರಲ್ಲೇ ಉಳಿದ ಮೋನು ಇಕ್ಬಾಲ್ ಸಾಹೇಬರಿಗೆ ಸಂಪರ್ಕಿಸಿ 50 ಚೀಲ ಮೀನು ಗೊಬ್ಬರ 30% + ಬೋನ್ ಮಿಲ್ 20% + ಎರೆಹುಳ ಗೊಬ್ಬರ 10% + ಕೋಳಿ ಗೊಬ್ಬರ 20% + ಬೇವಿನ ಹಿಂಡಿ 20% + ಹರಳೆ ಗೊಬ್ಬರ 10% ಅಂಶದ್ದು ತರಿಸಿ ಹಾಕಿಸಿದೆ.
ನಮ್ಮ ಬಾಗದಲ್ಲಿ ಶುಂಠಿ ಬೆಳೆಯುವವರು ಈ ಗೊಬ್ಬರ ಖರೀದಿಸುತ್ತಾರೆ, ಅಡಿಕೆ ತೆಂಗುಗಳಿಗೂ ಹಾಕುತ್ತಿದ್ದಾರೆ ಅವರೆಲ್ಲರ ಅಭಿಪ್ರಾಯ ನಂಬರ್ ಒನ್ ಗೊಬ್ಬರ ಮೋಸ ಇಲ್ಲದೆ ಸರಬರಾಜು ಮಾಡುವ ಮೋನು ಇಕ್ಬಾಲ್ ಬಗ್ಗೆ ಹೊಗಳುತ್ತಾರೆ.
ಈ ಮೀನು ಮಿಶ್ರ ಗೊಬ್ಬರ ಬೇಕಾದವರು ಮಂಗಳೂರಿನ ಮೋನು ಇಕ್ಬಾಲ್ ಸಾಹೇಬರ ಸೆಲ್ ನಂಬರ್ 9535031521 ಗೆ ಸಂಪರ್ಕಿಸ ಬಹುದು
Comments
Post a Comment