ಭಾಗ - 17, ಬದರಿನಾರಾಯಣ ಅಯ್ಯಂಗಾರನ್ನು ಮಂತ್ರಿ ಮಾಡದ ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು, ಆನಂದಪುರಂನಲ್ಲಿ ದೇವರಾಜ ಅರಸರ ನೇತೃತ್ವದಲ್ಲಿ ನಡೆಯುತ್ತಿದ್ದ ಕಾಂಗ್ರೇಸ್ ಬಿನ್ನ ಮತೀಯ ಸಭೆಗಳು.
#ಭಾಗ_17.
#ಶಿವಮೊಗ್ಗ_ಜಿಲ್ಲೆಯ_ಆಕಾಲದ_ಪ್ರಭಾವಿ_ನಾಯಕರನ್ನು_ಮಂತ್ರಿ_ಮಾಡದ_ಲಾಭಿ
#ಅನಿವಾಯ೯ವಾಗಿ_ಬಿನ್ನಮತೀಯ_ಗುಂಪು_ಸೇರಿದ_ಬದರಿನಾರಾಯಣ್_ಅಯ್ಯ೦ಗಾರರು.
#ಆನಂದಪುರಂ_ಸಮೀಪದ_ಅವರ_ಹೊಸಕೊಪ್ಪದ_ತೋಟದ_ಮನೆಯಲ್ಲಿ_ನಡೆದ_ಸರಣಿ_ಬಿನ್ನಮತಿಯ_ಸಭೆಗಳು.
ತೀಥ೯ಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಾಗರ - ಹೊಸನಗರ- ಮತ್ತು ತೀಥ೯ಹಳ್ಳಿ ತಾಲ್ಲೂಕು ಸೇರಿ ಒಂದು ಕ್ಷೇತ್ರ. ಸಾಗರ ತಾಲ್ಲೂಕಿನ ಆನಂದಪುರಂ ಕ್ಷೇತ್ರ ಮತ್ತು ಸಾಗರ ಪಟ್ಟಣದವರೆಗೆ ತೀಥ೯ಗಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿತ್ತು ಈ ಕ್ಷೇತ್ರದಿಂದ 1957 ರ ಎರಡನೇ ಮಹಾ ಚುನಾವಣೆಯಲ್ಲಿ ಕಾಂಗ್ರೇಸ್ ಪಾರ್ಟಿಯಿಂದ ಬದರಿನಾರಾಯಣ ಅಯ್ಯಂಗಾರ್ ಸಮಾಜವಾದಿ ಪಾರ್ಟಿಯಿಂದ ಸ್ಪರ್ದಿಸಿದ್ದ (1952 ರಲ್ಲಿ ಈ ಕ್ಷೇತ್ರದಿಂದ ಮೊದಲ ಸಾವ೯ತ್ರಿಕ ಚುನಾವಣೆಯಲ್ಲಿ ಇದೇ ಬದರಿನಾರಾಯಣ ಅಯ್ಯಂಗಾರ್ ರನ್ನು ಸೋಲಿಸಿದ್ದ ) ಶಾಂತವೇರಿ ಗೋಪಾಲಗೌಡರನ್ನು ಸೋಲಿಸಿ ಆಯ್ಕೆ ಆಗುತ್ತಾರೆ.
ಎರಡನೇ ವಿದಾನ ಸಭಾ ಚುನಾವಣೆಯಲ್ಲಿ (1957 ರಲ್ಲಿ) ತೀಥ೯ಹಳ್ಳಿ ವಿದಾನ ಸಭಾ ಕ್ಷೇತ್ರದಿಂದ ಹೊರತು ಪಡಿಸಿದ ಸಾಗರ ತಾಲ್ಲೂಕ್ ಮತ್ತು ಸೊರಬ ತಾಲ್ಲೂಕ್ ಸೇರಿ ಸಾಗರ ವಿಧಾನ ಸಭಾ ಕ್ಷೇತ್ರ ಆಗುತ್ತದೆ ಇಲ್ಲಿ ಕಾಂಗ್ರೇಸ್ ನಿಂದ ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರನ್ನು ಸ್ಪರ್ದಿಸಲು ಅವಕಾಶ ನೀಡುತ್ತಾರೆ ಆದರೆ ಹಿರಿಯರು ರೈತ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಮರ್ತೂರು ಮೂಕಪ್ಪನವರು ತಮಗೆ ಸ್ಪರ್ದಿಸಲು ಅವಕಾಶ ನೀಡಲು ಗಣಪತಿಯಪ್ಪರನ್ನು ವಿನ೦ತಿಸುತ್ತಾರೆ,ಇದನ್ನು ಒಪ್ಪಿ ಗಣಪತಿಯಪ್ಪನವರು ಮೂಕಪ್ಪರಿಗೆ ಅವಕಾಶ ನೀಡಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಮೂಕಪ್ಪನವರು ಸೊರಬದ ಮರಿಯಪ್ಪರನ್ನು ಸೋಲಿಸಿ ಶಾಸಕರಾಗುತ್ತಾರೆ.
ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ನ ಮೂಕಪ್ಪರ ಪರ ಮತ್ತು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಾಟಿ೯ ಶಾಂತವೇರಿ ಗೋಪಾಲಗೌಡರ ಪರ ಗಣಪತಿಯಪ್ಪ ಪ್ರಚಾರ ನಡೆಸುತ್ತಾರೆ, ಅವರಿಗೆ ತಮ್ಮ ರೈತ ಹೋರಾಟ ಕಾಗೋಡು ಹೋರಾಟದ ಸಹವರ್ತಿಗಳನ್ನು ಪಕ್ಷ ಮೀರಿ ಬೆಂಬಲಿಸುವ ಅನಿವಾಯ೯ ಉಂಟಾಗುತ್ತದೆ.
ನಂತರದ ಚುನಾವಣೆಯಲ್ಲಿ ಬದರಿನಾರಾಯಣ ಆಯ್ಯಂಗಾರರನ್ನು ಶಿವಮೊಗ್ಗ ಕ್ಷೇತ್ರದಿಂದಲೇ ಸ್ಪರ್ದಿಸುವಂತೆ ಶಿವಮೊಗ್ಗದ ಸ್ವಾತಂತ್ರ ಹೋರಾಟಗಾರರು ಮತ್ತು ಕಾಂಗ್ರೇಸ್ ನ ಪಕ್ಷದ ಮುಖಂಡರು ಒತ್ತಾಯಿಸುತ್ತಾರೆ, ವಕೀಲರಾಗಿ, ಡಿವಿಸ್ ಶಿಕ್ಷಣ ಸಂಸ್ಥೆ, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ಶಿವಮೊಗ್ಗದ ಗಾಂಧಿ ಮಂದಿರ ಹೀಗೆ ಅನೇಕ ಜನಪರ ಕೆಲಸದಲ್ಲಿ ಭಾಗವಹಿಸಿ ಬದರಿನಾರಾಯಣ ಅಯ್ಯಂಗಾರರು ಶಿವಮೊಗ್ಗದಲ್ಲಿ ಪ್ರಸಿದ್ದಿ ಪಡೆದಿರುವುದು ಒಂದು ಕಾರಣ.
ಆ ಕಾಲದಲ್ಲಿ ಹಿರಿಯ ಮುಖಂಡ ಕುರುಬ ಸಮಾಜದ ಮುಖಂಡರಾದ ಎಸ್.ಆರ್.ತಿಮ್ಮಯ್ಯ (ಈಗಿನ ಕಾಂಗ್ರೇಸ್ ಮುಖಂಡರಾದ ಶೇಷಾದ್ರಿ ತಂದೆ ಮತ್ತು ಕೆಂಚಪ್ಪ (ಈಗಿನ ನಗರ ಸಭಾ ಮುಖಂಡರಾದ ಮರಿಯಪ್ಪರ ತ೦ದೆ) ಬದರಿನಾರಾಯಣರ ರಾಜಕಾರಣದ ಕೊನೆಯವರೆಗೂ ಅವರ ಕಟ್ಟಾ ಬೆಂಬಲಿಗರಾಗುತ್ತಾರೆ, ಶೀನಪ್ಪ ಶೆಟ್ಟರು ಮತ್ತು ನಾಗಪ್ಪ ಶೆಟ್ಟರೂ ಬೆಂಬಲಿಸುತ್ತಾರೆ.
ಸತತವಾಗಿ ಶಾಸಕರಾದರೂ, ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದ ಸಂಘಟನೆಯಲ್ಲಿ ಪ್ರಮುಖರಾದ ಬದರಿನಾರಾಯಣ ಅಯ್ಯಂಗಾರರನ್ನು ಮಂತ್ರಿ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಮುಂದಾಗಲಿಲ್ಲ ಇದರಿಂದ ಬದರಿನಾರಾಯಣ ಅಯ್ಯಂಗಾರರು ಅವರ ವಿರೋದಿ ಗುಂಪಾದ ದೇವರಾಜ ಅರಸು, ಕೊಲ್ಲೂರು ಮಲ್ಲಪ್ಪ, ಸಿದ್ಧ ವೀರಪ್ಪ, ಆರ್.ಎ೦. ಪಟೇಲರ ಜೊತೆ ಸೇರುತ್ತಾರೆ ಇವರ ಅನೇಕ ಗುಪ್ತವಾದ ಬಿನ್ನಮತಿಯ ಕಾಂಗ್ರೇಸ್ ಸಭೆಗಳು ಆನಂದಪುರಂ ಸಮೀಪದ ಅಯ್ಯಂಗಾರರ ಹೊಸಕೊಪ್ಪದ ತೋಟದ ಮನೆ ಸಾಕ್ಷಿ ಆಗುತ್ತದೆ.
ಈ ತೋಟ ಈಗ ಬೆಂಗಳೂರಿನ ಪ್ರಸಿದ್ದ ಮದುರಾ ಗಾರ್ಮೆಂಟ್ ನ ನಾರಾಯಣ ಭಟ್ ಆಯ್ಯಂಗಾರರಿಂದ ಖರೀದಿಸಿದ್ದಾರೆ ಅಲ್ಲಿ ಸಾವಯುವ ಕೃಷಿ ಮತ್ತು ಸಾವಯುವ ಡೈರಿ ನಡೆಸುತ್ತಿದ್ದಾರೆ ಅಲ್ಲಿ ಈಗ ಮಾಲಕಿ ಶ್ರೀಮತಿ ಮದುರಾ ಭಟ್ಟರು ವಿಶ್ರಾಂತ ಜೀವನ ನಡೆಸಿದ್ದಾರೆ.
ವೀರೆಂದ್ರ ಪಾಟೀಲರು ಮುಖ್ಯಮಂತ್ರಿ ಆದರೂ ಬದರಿನಾರಾಯಣರಿಗೆ ದೂರ ಇಡುತ್ತಾರೆ ಆದರೆ ದೇವರಾಜು ಅರಸು ಅವರು ಮುಖ್ಯಮಂತ್ರಿ ಆದ ಮೇಲೆ ಬದರಿನಾರಾಯಣ ಅಯ್ಯಂಗಾರರು ವಿದ್ಯಾಮಂತ್ರಿಗಳಾಗುತ್ತಾರೆ.
Comments
Post a Comment