ಭಾಗ - 20, ತುಂಬೆ ಸುಬ್ರಾಯರು ಆ ಕಾಲದಲ್ಲಿ ಬದರೀನಾರಾಯಣ್ ಅಯ್ಯಂಗಾರರ ಪರಮಾಪ್ತರು, ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ನಂಬಿಕೆಯ ಗೆಳೆಯರು.
#ಬದರಿನಾರಾಯಣ್_ಅಯ್ಯ೦ಗಾರರ_ಅಚ್ಚುಮೆಚ್ಚಿನ_ತುಂಬೆ_ಸುಬ್ರಾಯರು_ಮತ್ತು_ಮೂಗಿಮನೆ_ಗಣೇಶ್_ಹೆಗ್ಗಡೆಯವರು
#ಅಳ್ನಾವರ್_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆ_ಸುಬ್ರಾಯರು
#ಆನಂದಪುರಂನ_ಅಯ್ಯ೦ಗಾರರ_ಕಾಂಗ್ರೇಸ್_ಮುಖಂಡರಾದ_ಆಹ್ಮದ್_ಆಲೀ_ಖಾನರ_ಮುರಿದು_ಬಿದ್ದ_ಜಮೀನು_ವ್ಯಾಪಾರ.
#ಮತೂ೯ರು_ಮೂಕಪ್ಪರನ್ನು_ಶಾಸಕರಾಗಿಸಿದವರು.
ಬದರಿನಾರಾಯಣ ಅಯ್ಯಂಗಾರರ ರಾಜಕಾರಣ ಪ್ರಾರಂಭದಿಂದ ಉತ್ತುಂಗದಲ್ಲಿಂದ ಅಂತ್ಯದವರೆಗೆ ತುಂಬೆ ಸುಬ್ರಾಯರ ಗೆಳೆತನ ಮುಂದುವರಿದಿತ್ತು, ಬದರಿನಾರಾಯಣ ಅಯ್ಯಂಗಾರರು ಸಾಗರಕ್ಕೆ ಬಂದಾಗೆಲ್ಲ ಅವರ ಊಟ ಉಪಹಾರ ಮತ್ತು ವಸತಿ ತುಂಬೆಯ ಸುಬ್ರಾಯರ ಮನೆಯೇ ಆಗಿತ್ತು.
ಸದಾ ಇರುತ್ತಿದ್ದರು (ತಾಳಗುಪ್ಪ ಮೂಗಿಮನೆ ಸುಬ್ರಾಯ ಹೆಗ್ಗಡೆ ತಂದೆ).
ಸಾಗರ ಯಡಜಿಗಳೆಮನೆ ಮಾರ್ಗದ ಹಕ್ಕರೆ ಮಾರ್ಗದ ತುಂಬೆಗೆ ಆ ಕಾಲದಲ್ಲಿ ಬಸ್ ಇರಲಿಲ್ಲ, ಪ್ರತಿಷ್ಟಿತ ಅಳ್ನಾವರ ಕಂಪನಿಯ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾರಾಯರು ನಡೆದುಕೊಂಡೆ ಮಂಕಾಳೆ ಮೂಲಕ ಕಾಲು ದಾರಿಯಲ್ಲಿ ಸಾಗರದ ಹಾನ೦ಬಿ ಹೊಳೆ ದಾಟಿ ಬರುತ್ತಿದ್ದರಂತೆ ಹಾಗೆ ಬಂದವರು ವಾರದಲ್ಲಿ ಮೂರರಿಂದ ನಾಲ್ಕು ದಿನ ಈಗಿನ ವೀರಶೈವ ಕಲ್ಯಾಣ ಮಂಟಪದ ಎದರು ಗೊಜನೂರು ಓಣಿಯ ಬಾಡಿಗೆ ಮನೆಯಲ್ಲಿ ಉಳಿಯುತ್ತಿದ್ದರು ಅಲ್ಲಿ ಅಳ್ನಾವರ ಅಡಿಕೆ ಕಂಪನಿಯ ಅಟೆಂಡರ್ ನಾರಾಯಣ ಎಂಬುವವರು ಅವರ ಸಹಾಯಕ ಆಗಿರುತ್ತಿದ್ದರಂತೆ.
ಅಳ್ನಾವರ ಅಡಿಕೆ ಮಂಡಿ ಉಪ್ಪರಿಗೆ ಮೇಲೆ ಗಾಧಿ ದಿಂಬುಗಳನ್ನು ಹಾಕಿದ್ದ ವಿಶಾಲವಾದ ಮೀಟಿಂಗ್ ಹಾಲ್ ಆಗ ಸಾಗರ ತಾಲ್ಲೂಕಿನ ನೂರಾರು ಪಂಚಾಯಿತಿಗಳಿಗೆ ಸಾಕ್ಷಿ ಆಗಿತ್ತು.
ಸರಳವಾಗಿ ಅಷ್ಟೇ ಸ್ಪಷ್ಟವಾದ ಮಾತಿನಿಂದ ನ್ಯಾಯ ಪಂಚಾಯಿತಿ ಮಾಡುತ್ತಿದ್ದ ತುಂಬೆ ಸುಬ್ರಾಯರನ್ನ ಆ ಕಾಲದಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯಿತರೂ ಮೆಚ್ಚಿಕೊಂಡಿದ್ದರು.
1957 ರಲ್ಲಿ ಮತೂ೯ರು ಮೂಕಪ್ಪರನ್ನು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರನ್ನು ಒಪ್ಪಿಸಿ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ತುಂಬೆ ಸುಬ್ರಾಯರ ಮತ್ತು ಮೂಗಿಮನೆ ಗಣೇಶ ಹೆಗ್ಗಡೆಯವರ ಶ್ರಮ ಹೆಚ್ಚಿನದ್ದು.
ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿ ಆಗಿದ್ದಾಗಲೆ ಸಾಗರದ ಕೆಲ ಭೂಮಾಲಿಕರು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರನ್ನು ಜೈಲಿಗೆ ಕಳಿಸಲು ಸಾಗರದ ಆಗಿನ ನ್ಯಾಯಾದೀಶರಾಗಿದ್ದ ರಾಮಸ್ವಾಮಿ ಎಂಬುವವರ ಮುಖಾಂತರ ಷಡ್ಯಂತ್ರ ನಡೆದಾಗ ಮುಖ್ಯಮಂತ್ರಿ ಕಡಿದಾಳರು (ಕಡಿದಾಳು ಮ೦ಜಪ್ಪ ಗೌಡರು )
ಸಾಗರ ಪ್ರವಾಸಿ ಮಂದಿರಕ್ಕೆ ದಿಡೀರ್ ಬೇಟಿ ನೀಡಿ ತುಂಬೆ ಸುಬ್ರಾಯರನ್ನ ಕರೆಸಿಕೊಂಡು ಸತ್ಯಾಂಶ ತಿಳಿದುಕೊಳ್ಳುತ್ತಾರೆ ಮತ್ತು ಮರುದಿನವೇ ಆ ಷಡ್ಯಂತ್ರದಲ್ಲಿ ಭಾಗಿ ಆಗಿದ್ದ ನ್ಯಾಯಾದೀಶರನ್ನು ವರ್ಗಾಯಿಸುತ್ತಾರೆ, ಗಣಪತಿಯಪ್ಪರನ್ನು ಸುಳ್ಳು ಕೇಸಿನಲ್ಲಿ ಜೈಲಿಗೆ ಕಳಿಸುವ ಪ್ರಯತ್ನ ವಿಫಲ ಆಗುತ್ತದೆ ಹೀಗೆ ತುಂಬೆ ಸುಬ್ರಾಯರಿದ್ದರು.
ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.
ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾರೆ ಹಾಗಾಗಿ ತುಂಬೆ ರಸ್ತೆ,ಮೋರಿ ಇತ್ಯಾದಿ ಖಾನ್ ಸಾಹೇಬರೇ ಮಾಡಬೇಕೆಂಬ ಶಿಪಾರಸ್ಸು ತುಂಬೆ ಸುಬ್ರಾಯರದ್ದು ಇದಕ್ಕೆ ಮುಖ್ಯ ಕಾರಣ ಮತ್ತಿಕೊಪ್ಪ ಹರನಾಥ ರಾಯರ ದೊಡ್ಡಪ್ಪರಾಗಿದ್ದ ಅಳ್ನಾವರ ಅಡಿಕೆ ಕಂಪನಿಯ ನಿರ್ಧೇಶಕರು ಆಗಿದ್ದ ಮತ್ತಿಕೊಪ್ಪ ಲಕ್ಷ್ಮೀನಾರಾಯಣರು ಮತ್ತು ಖಾನ್ ಸಾಹೇಬರ ಆತ್ಮೀಯತೆ ಕೂಡ.
ಹಾಗಾಗಿ ತುಂಬೆ ಸುಬ್ರಾಯರು ಎಲ್ಲೇ ಹೋಗುವುದಾದರೂ ಖಾನ್ ಸಾಹೇಬರು ಜೊತೆ ಕರೆದೊಯ್ಯುತ್ತಿದ್ದರು ಆದ್ದರಿಂದ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ತುಂಬೆ ಸುಬ್ರಾಯರ ಜೊತೆ ಖಾನ್ ಸಾಹೇಬರು ಯಾವಾಗಲೂ ಆನಂದಪುರಂಗೆ ಬರುತ್ತಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ, ಈ ಸಂದರ್ಭದಲ್ಲೇ ತುಂಬೇ ಸುಬ್ರಾಯರು, ಬದರಿನಾರಾಯಣ ಅಯ್ಯಂಗಾರರು ಆನ೦ದಪುರಂನ ಎರೆಡು ಕೆರೆ ಕೆಳಗಿನ ನೀರಾವರಿ ಜಮೀನು ಅಂತಿಮ ಬೆಲೆ ಎಕರೆಗೆ 3000 ಸಾವಿರದಂತೆ ವ್ಯಾಪಾರ ಆಗುತ್ತದೆ ಆದರೆ ಆಗಲೇ ಇವರ ಅಕ್ಕಿ ಗಿರಣಿಗಳನ್ನು ಖರೀದಿಸಿ ಯಶಸ್ವಿ ಉದ್ದಿಮೆದಾರರಾಗಿದ್ದ ಸುಬ್ಬಣ್ಣ ನಾಯಕರು ಈ ಜಮೀನು ತನಗೆ ಬೇಕೆಂದು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಚಲಾಯಂಗಾರ್ ರಿಂದ ( ವೆ೦ಕಟಾಚಲ ಅಯ್ಯ೦ಗಾರ್
ಒತ್ತಡ ತಂದಿದ್ದರಿಂದ ಈ ವ್ಯವಹಾರ ಮುರಿದು ಬಿತ್ತಂತೆ.
1964 ರಲ್ಲಿ ಲಕ್ಷ್ಮೀಕಾಂತಪ್ಪನವರು ಶಾಸಕರು, ಮಲ್ಕೋಡು ಗೋವಿಂದಪ್ಪನವರು ( ಪುತ್ತೂರಾಯರ ತಂದೆ) ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು ಇವರೆಲ್ಲ ತುಂಬೆ ಸುಬ್ರಾಯರ ಮಾತು ಮೀರುತ್ತಿರಲಿಲ್ಲ ಅಂತಹ ವ್ಯಕ್ತಿತ್ವ ಅವರದ್ದೆಂದು ಖಾನ್ ಸಾಹೇಬರು ನೆನಪಿಸಿ ಕೊಳ್ಳುತ್ತಾರೆ.
ಆಗ ಸಾಗರದಲ್ಲಿ ತಾಲ್ಲೂಕ್ ಕಾಂಗ್ರೇಸ್ ಪಾರ್ಟಿ ಕಛೇರಿ ಸೂರಬ ರಸ್ತೆಯ ಯು.ಜಿ.ಮಲ್ಲಿಕಾರ್ಜುನರ ಕಟ್ಟಡದಲ್ಲಿ ನಡೆಯುತ್ತಿತ್ತು ನಂತರ ಸಾಗರದಲ್ಲಿ ಗಾಂಧಿ ಮಂದಿರ ನಿರ್ಮಿಸುವ ತೀಮಾ೯ನ ಆಗುತ್ತದೆ ಇದಕ್ಕೆ ಬದರೀನಾರಾಯಣ ಆಯ್ಯಂಗಾರರು, ತುಂಬೆ ಸುಬ್ರಾಯರು, ಹುಣಾಲು ಮಡಕೆ ಸ್ವಾಮಿ ಗೌಡರು (ಹುಣಾಲು ಮಡಕೆ ಬಸವರಾಜ್ ಗೌಡರ ತಂದೆ), ಖಾನ್ ಸಾಹೇಬರು ಮತ್ತು ಅನೇಕರು ದೇಣಿಗೆ ನೀಡುತ್ತಾರೆ ಆಗ ಸಾಗರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರು ಮದೂರು ರುದ್ರಪ್ಪ ಗೌಡರು ಮತ್ತು ಕಾರ್ಯದಶಿ೯ ಆಗಿ ಎಲ್ ಟಿ.ತಿಮ್ಮಪ್ಪ ಹೆಗಡೆ ಇರುತ್ತಾರೆ.
ಖಾನ್ ಸಾಹೇಬರು ತುಕಾರಾಂ ಶೆಟ್ಟರು ಆಗ ಕಾಂಗ್ರೇಸ್ ಪಕ್ಷದ ಯುವ ಮುಖಂಡರು.
ಬೆಂಗಳೂರಲ್ಲಿ ಬದರಿನಾರಾಯಣ್ ಆಯ್ಯಂಗಾರರು ಇಹ ಲೋಕ ತ್ಯಜಿಸಿದಾಗ ಅಹ್ಮದ್ ಅಲೀ ಖಾನ್ ಸಾಹೇಬರು ಅಂತಿಮ ದರ್ಶನಕ್ಕೆ ಹೋಗಿದ್ದು ಅವರಿಗೆ ಬದರೀನಾರಾಯಣ ಅಯ್ಯಂಗಾರ್ ಮೇಲಿದ್ದ ಪ್ರೀತಿ ಮತ್ತು ಆ ಲಾಗಯಿತಿನಿಂದ ಅವರಿಗೆ ಕಾಂಗ್ರೇಸ್ ಪಕ್ಷದ ಮೇಲೆ ಇರುವ ನಿಷ್ಟೆ ತೋರಿಸುತ್ತದೆ.
ನಮ್ಮ ತಂದೆ ನನಗೆ ಸಾಗರದ ಕಾಗೋಡು ತಿಮ್ಮಪ್ಪರ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಲು 1982ರಲ್ಲಿ ಬದರೀನಾರಾಯಣ ಅಯ್ಯಂಗಾರರಿಂದ ಆಗ ಪಾಲಿಟೆಕ್ನಿಕ್ ಕಾಲೇಜ್ ನ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಮತ್ತು ಸಮಿತಿ ಸದಸ್ಯರಾಗಿದ್ದ ಖಾನ್ ಸಾಹೇಬರಿಗೆ ಹೇಳಿಸಿದ್ದರು ಅವತ್ತು ಸಾಗರದ ಆಸ್ಪತ್ರೆ ಎದುರಿನ ಪುತ್ತೂರಾಯರ ಕಟ್ಟಡದಲ್ಲಿ ಪಾಲಿಟೆಕ್ನಿಕ್ ಕಛೇರಿಯಲ್ಲಿ ನಾನು ಇವರ ಸಂದರ್ಶನದಲ್ಲಿ ಭಾಗವಹಿಸಿದ್ದೆ ಅವತ್ತೆ ಮೊದಲ ಬಾರಿ ತುಂಬೆ ಸುಬ್ರಾಯರನ್ನು ಮತ್ತು ಖಾನ್ ಸಾಹೇಬರನ್ನು ನೋಡಿದ್ದು, ನನ್ನ ಅರ್ಜಿ ನೋಡಿದ ಕೂಡಲೆ ಖಾನ್ ಸಾಹೇಬರು ಸಮಿತಿ ಸದಸ್ಯರಿಗೆ ಬದರಿ ಕ್ಯಾಂಡಿಡೇಟ್ ಅಂದ ಕೂಡಲೆ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಆಯ್ತು ಉಚಿತ ಸೀಟು ನೀಡಿ ಬಿಡಿ ಅಂದಿದ್ದು ನನಗೆ ಮರೆಯಲಾರದ ನೆನಪು.
ಕಾಗೋಡು ತಿಮ್ಮಪ್ಪ ಹಿಂದುಳಿದ ಜನಾಂಗದಿಂದ ವಕೀಲರಾಗಲು ಮತ್ತು ವಕೀಲ ವೃತ್ತಿ ಮಾಡಲು ತುಂಬೆ ಸುಬ್ರಾಯರ ಹೆಚ್ಚಿನ ಬೆಂಬಲವಿತ್ತಂತೆ ಆ ಕಾರಣದಿಂದ ಕಾಗೋಡು ತಿಮ್ಮಪ್ಪನವರು ಪಕ್ಷ ಬೇದ ಮರೆತು ತುಂಬೆ ಸುಬ್ರಾಯರಲ್ಲಿ ಗೌರವ ಹೊಂದಿದ್ದರೆಂದು ಖಾನ್ ಸಾಹೇಬರು ಹೇಳುತ್ತಿದ್ದರು.
Comments
Post a Comment