ನಾಗತಿಹಳ್ಳಿಯವರ ಮೊದಲ ಚಲನ ಚಿತ್ರ ಉಂಡೂ ಹೋದ ಕೊಂಡೂ ಹೋದ ಸಿನಿಮಾದಲ್ಲಿ ನನ್ನ ಬಸ್ ಚಿತ್ರಿಕರಣದಲ್ಲಿ ಉಪಯೋಗಿಸಿದ ನೆನಪಿನ ಅನಾವರಣ
#ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು.
*#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ*
*#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು*
#ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾಗೆ_ನನ್ನ_ಬಸ್ಸು.
*#ಎಷ್ಟೋ_ವರ್ಷದ_ನಂತರ_ಈ_ಬಗ್ಗೆ_ಚಲನ_ಚಿತ್ರ_ನಟ_ದೊಡ್ಡಣ್ಣ_ಜೊತೆ*
*#ಬೆಂಗಳೂರು_ಕಾನಿಷ್ಕಾ_ಹೋಟೆಲ್ನಲ್ಲಿ_ಪುನಃ_ನೆನಪಿಸಿ_ಕೊಂಡ_ಸವಿನೆನಪು*
ರಿಪ್ಪನ್ ಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ ಅನಂತನಾಗ್ ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು.
ಇದು ಸಣ್ಣ ಸಾಹಸವಲ್ಲ! ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು.
ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು ತಮ್ಮ ಊರು ರಿಪ್ಪನ್ ಪೇಟೆ ಸುತ್ತಾ ಮುತ್ತಾ ಮಾಡಿದ್ದರು ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು, ಈ ಗ್ರಾಮಾಂತರ ಸಾರಿಗೆ ಕಲ್ಪನೆ ಆಗಿನ ಜಿಲ್ಲಾಧಿಕಾರಿ ವಿಜಯ ಕುಮಾರ್ ಕನಸಾಗಿತ್ತು. ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ಅವರೇ ಆಯ್ಕೆ ಮಾಡಿದ್ದರು, ಇದರ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯoನಲ್ಲಿ ಆಗಿನ ಮುಖ್ಯಮಂತ್ರಿ ವಿರೇ೦ದ್ರ ಪಾಟೀಲರಿಂದ ಇಡೀ ಸ್ಟೇಡಿಯO ಹಸಿರು ಬಣ್ಣದ ಗ್ರಾಮಾoತರ ಸಾರಿಗೆ ಬಸ್ಸಿನಿಂದ ಕಂಗೊಳಿಸುತ್ತಿತ್ತು, ಆ ಸಭೆಯಲ್ಲಿ ಪ್ರಸ್ತಾವನಾ ಭಾಷಣ ನನ್ನದಾಗಿತ್ತು.
ಸ್ವಾಮಿ ಅವರ ಸಿನಿಮಾದಲ್ಲಿ ನನ್ನ ಬಸ್ ನ್ನ ಬಳಸಿಕೊಂಡಿದ್ದರು ಇದಾಗಿ ಸುಮಾರು ವಷ೯ದ ನಂತರ ಬೆಂಗಳೂರಲ್ಲಿ ಖ್ಯಾತ ಚಿತ್ರ ನಟ ದೊಡ್ಡಣ್ಣ ನಾಗತೀಹಳ್ಳಿ ಚಂದ್ರಶೇಖರ್ ಗೆ ಪರಿಚಯ ಮಾಡಿ ಕೊಟ್ಟಾಗ ನಾನು ನನ್ನ ಬಸ್ಸಿನ ನೆನಪು ಮಾಡಿದೆ ಇದರಿಂದ ತಕ್ಷಣ ನಾಗತೀಹಳ್ಳಿಯವರು ನನ್ನ ಕೈ ಒತ್ತಿ ನಿಮ್ಮ ಬಸ್ ಮೂಲಕ ನನ್ನ ಚಿತ್ರರಂಗದ ಪ್ರಯಾಣ ಅಂತ ಹೇಳಿ ನಂತರ ಆ ಸಿನಿಮಾ ರಿಲೀಸ್ ತನಕ ಅನುಭವಿಸಿದ ಯಾತನೆ ನೆನಪಿಸಿಕೊಂಡರು.
ಇವತ್ತು ಲಾಕ್ ಡೌನ್ ನಲ್ಲಿ ಈ ಸಿನೆಮಾ ಬೆಂಗಳೂರಿನಲ್ಲಿ ನೋಡಿದ ಮಗಳು ಈ ಬಸ್ಸನ ಪೋಟೋ ಕಳಿಸಿದಾಗ ಇದೆಲ್ಲ ನೆನಪಾಯಿತು.
ಈ ಬಸ್ಸು ಕೇರಳದ ಕಾಸರಗೋಡಿನಿಂದ ತಂದ ನೆನಪಿನ ಕಥೆ ಕೂಡ ನೆನಪಾಯಿತು ಅದು ಇನ್ನೊ೦ದು ದಿನ ಬರೆಯಬೇಕು.
Comments
Post a Comment