Skip to main content

Posts

Showing posts with the label Keral Kutti chachan famous regional God

Blog number 1036. ಕುಟ್ಟಿಚಾತನ್ ಕೇರಳದ ಪ್ರಸಿದ್ಧ ದೈವ,ಸಾಗರ ತಾಲ್ಲೂಕಿನ ಇಡುವಾಣಿಯಲ್ಲಿ ಸಾರ್ವಜನಿಕರ ಎದುರೇ ನಡೆದ ಕುಟ್ಟಿಚಾತನ್ ಕೈ ಚಳಕ, 1984 ರಲ್ಲಿ ಭಾರತದ ಮೊದಲ 3D ಸಿನಿಮಾ ಮಲೆಯಾಳಂನ ಮೈ ಡಿಯರ್ ಕುಟ್ಟಿಚಾತನ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು.

#ಮೈ_ಡಿಯರ್_ಕುಟ್ಟಿಚಾತನ್_1984ರ_ಬ್ಲಾಕ್_ಬಸ್ಟರ್_ಸಿನಿಮಾ #ಭಾರತದ_ಮೊದಲ_3D_ಸಿನಿಮಾ #ಸಾಗರ_ತಾಲ್ಲೂಕಿನ_ಇಡುವಾಣಿಯಲ್ಲಿ_ನಡೆದ_ಸತ್ಯ_ಘಟನೆ #ಕುಟ್ಟಿ_ಚಾತನ್_ಆರಾದಕರಾದ_ಇಡುವಾಣಿ_ಪಂಡಿತರು #ಈ_ಘಟನೆಯಿಂದ_ಪ್ರಸಿದ್ದರಾದ_ಇಡುವಾಣಿ_ಪಂಡಿತರು #ಅರಣ್ಯ_ಇಲಾಖೆ_ರೇಂಜರ್_ಅನುಭವ_ಸಾಕ್ಷಿ_ಆದ_ಸಿಬ್ಬಂದಿ_ಗ್ರಾಮಸ್ಥರು.   ಕಾಂತಾರ ಸಿನಿಮಾದ ಯಶಸ್ಸಿನಿಂದ ಕರಾವಳಿಯ ದೈವಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ ಇದು ಸಂಪ್ರದಾಯಿಕ ದೈವ ಆರಾದಕರಿಗೆ ಹೆಮ್ಮೆ ಅನ್ನಿಸಿದೆ.    ಕಾಂತಾರ ಹೊಗಳುವ ಭರದಲ್ಲಿ ಇದು ದೈವಗಳ ಬಗ್ಗೆ ಭಾರತೀಯ ಮೊದಲ ಚಲನಚಿತ್ರ ಅನ್ನುತ್ತಿದ್ದಾರೆ ಆದರೆ 1984 ರಲ್ಲಿ ಭಾರತೀಯ ಮೊದಲ 3D ಸಿನೆಮಾ ಮಲೆಯಾಳಂನಲ್ಲಿ #ಮೈ_ಡಿಯರ್_ಕುಟ್ಟಿಚಾತನ್ ನಿರ್ದೇಶಕ ಜಿಜೋ ಪುನ್ನಾಸ್ ಆ ಕಾಲದಲ್ಲಿ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಹಲವು ಕೋಟಿಗಳಿಸಿದ ಕೇರಳದ ದೈವ ಕುಟ್ಟಿಚಾತನ್ ಮೇಲೆ ನಿರ್ಮಿಸಿದ ಸಿನಿಮಾ ಆಗಿತ್ತು.   97 ನಿಮಿಷದ ಈ ಸಿನೆಮಾ ನೋಡುವವರಿಗೆ ವಿಶೇಷ ಕನ್ನಡಕ ನೀಡುತ್ತಿದ್ದರು ಇದನ್ನು ಹಾಕಿಕೊಂಡರೆ ಮಾತ್ರ 3D ಅನುಭವ ಗೊತ್ತಾಗುತ್ತಿತ್ತು ನಂತರ 1997 ರಲ್ಲಿ ಹಿಂದಿಯಲ್ಲಿ ಚೋಟಾ ಚೇತನ್ ಅಂತ, 2010 ರಲ್ಲಿ ತಮಿಳಿನಲ್ಲಿ ಚುಟ್ಟಿ ಚಾಚನ್ ಅಂತ ಈ ಸಿನಿಮಾ ಬಾಕ್ಸ್ ಆಫೀಸ್ ದೂಳಿ ಪಟ ಮಾಡಿತ್ತು. 1984ರಲ್ಲಿ ಹೈದ್ರಾಬಾದ್ ನಲ್ಲಿ NTR ನಿರ್ಮಿಸಿದ್ದ ಅವರ ಪ್ರಸಿದ್ದ ಸಿನಿಮಾ ಮಂದಿರದಲ್ಲಿ ಈ ಸಿನೆಮಾ...