ರೂಪಾ೦ತರಕಾರಿ ಕೊರಾನಾ ಎರಡನೆ ಅಲೆಗೆ ಜೀವ ತೆತ್ತ ಯುವಕ ಕಂಚಾಳಸರ ಗಣಪತಿ ( 45 ವರ್ಷ) ಗೆ ಶ್ರದ್ದಾಂಜಲಿಗಳು, ಮೈ ಮರೆಯದೇ ಜನ ಜಾಗೃತರಾಗಿರಬೇಕು.
#ಶ್ರದ್ಧಾ೦ಜಲಿಗಳು #ಆನಂದಪುರಂ_ಸಮೀಪದ_ಕಂಚಾಳಸರದ_ಗಣಪತಿ. ಗೌತಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಾಳಸರದ ಯಲಂದೂರು ನಾರಾಯಣಪ್ಪರ ದೊಡ್ಡ ಮಗ ಗಣಪತಿ 45 ವರ್ಷ ಕೊರಾನದಿಂದ ಮೃತರಾದ ಸುದ್ದಿ ಗೌತಮಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಗಣ್ಣನ ಕೆರೆ ಹಿರಿಯಣಪ್ಪ ನಿನ್ನೆ ತಿಳಿಸಿದಾಗ ತುಂಬಾ ಬೇಸರ ಆಯಿತು. ಇವರ ತಂದೆ ನಮ್ಮ ಅಕ್ಕಿ ಗಿರಣಿ ಇದ್ದಾಗ ಅಕ್ಕಿ ಮಾಡಿಸಲು ಎತ್ತಿನಗಾಡಿಯಲ್ಲಿ ಬರುವಾಗ ಗಣಪತಿ ಸಣ್ಣ ಚುರುಕಿನ ಸುಂದರ ಬಾಲಕ. ಅಂಬ್ಲಿಗೋಳ ದಟ್ಟ ಅರಣ್ಯದ ಮಧ್ಯದ ಸಣ್ಣ ಹಳ್ಳಿ ಕಂಚಾಳಸರ ಮುಖ್ಯ ಸಾರಿಗೆ ಸಂಪರ್ಕದ ರಸ್ತೆಗೆ ಸುಮಾರು 8 ಕೀ ಮಿ ಒಳಗಿದೆ, ಕೊರಾನಾ ರೂಪಾಂತರಗೊಂಡು ಸಣ್ಣ ವಯಸ್ಸಿನವರನ್ನೆ ಬಲಿ ಪಡೆಯುತ್ತಿರುವುದು ಅಪಾಯಕಾರಿ ಮುನ್ಸೂಚನೆ. 18 ವರ್ಷ ಮೇಲ್ಪಟ್ಟ 45 ವರ್ಷದ ಒಳಗಿನವರಿಗೆ ಸಿಗದ ಲಸಿಕೆ ಕಾರಣದಿಂದ ಯುವಜನತೆ ಹೆಚ್ಚು ಜಾಗೃತರಾಗಬೇಕಾದ ಅನಿವಾಯ೯ತೆ ಇದೆ. "ಕೊರಾನಾ ಎಲ್ಲಿದೆ? ಅನ್ನುವ ವಿತಂಡವಾದ, ಸಣ್ಣ ವಯಸ್ಸಿನವರಿಗೆ ಕೊರಾನಾ ಬರುವುದಿಲ್ಲ, ನಮ್ಮದು ಹಳ್ಳಿ ದಟ್ಟ ಅರಣ್ಯದ ಮಧ್ಯ ಇದೆ ಕೊರಾನಾ ಇಲ್ಲ, ಮಾಸ್ಕ್ ಬೇಕಾಗಿಲ್ಲ, ಎಲ್ಲಾ ಸುಳ್ಳು" ಇತ್ಯಾದಿ ವಾದ ಮಾಡುವ ಕಾಲ ಅಲ್ಲ ಇದು. ಹೊರಗಿನ ಜನಸಂಪರ್ಕ ಮಾಡುವವರು ಮಾಸ್ಕ್ ಹಾಕುವುದರಿಂದ ಸೋಂಕು ತಗಲುವುದಿಲ್ಲ, ಮಾಸ್ಕ ಹಾಕದಿದ್ದರೆ ಸೋಂಕು ತಗಲುತ್ತದೆ, ತಗ...