Blog number 1209. ಶಿವಮೊಗ್ಗದ ಪ್ರತಿಷ್ಟಿತ ಅಚ್ಯುತ್ ರಾವ್ ಲೇಔಟ್ ನಿರ್ಮಿಸಿದ ಮಿಲಿಟರಿ ಡಾಕ್ಟರ್ ಅಚ್ಯುತ್ ರಾವ್ ಪತ್ನಿ ಶ್ರೀಮತಿ ಅನ್ನಪೂರ್ಣಮ್ಮ ಶತಾಯುಷಿಗಳು, ಮೊನ್ನೆ 27- ನವೆಂಬರ್ -2022 ಅವರ ನೂರನೇ ಹುಟ್ಟು ಹಬ್ಬ.
#ಶಿವಮೊಗ್ಗದ_ಪ್ರತಿಷ್ಟಿತ_ಅಚ್ಯುತರಾವ್_ಲೇಔಟ್_ಒಡತಿ_ಆಗಿದ್ದ_ಶ್ರೀಮತಿ_ಅನ್ನಪೂರ್ಣಮ್ಮ_ಶತಾಯುಷಿ_ಆಗಿದ್ದಾರೆ. ಶಿವಮೊಗ್ಗದ ಜೈಲ್ ವೃತ್ತದ ಪಕ್ಕದ ಪ್ರತಿಷ್ಟಿತ ಅಚ್ಯುತರಾವ್ ಲೇಔಟ್ ನಿಮಾ೯ತೃ ದಿವ೦ಗತ ಮಿಲಿಟರಿ ವೆಟರ್ನರಿ ಡಾಕ್ಟರ್ ಅಚ್ಯುತರಾವ್ ಪತ್ನಿ ಶ್ರೀಮತಿ ಅನ್ನಪೂರ್ಣಮ್ಮರ ನೂರನೇ ಹುಟ್ಟು ಹಬ್ಬ ಅವರ ಕುಟುಂಬದವರು ಆಚರಿಸಿದ್ದಾರೆ ಅವರು ಹುಟ್ಟಿದ ದಿನಾ೦ಕ 27- ನವೆಂಬರ್-1922. ಅವರಿಗೆ 96 ವರ್ಷ ಆದಾಗ ಅವರ ಕುಟುಂಬದ ಜಮೀನು ಅಚ್ಯುತರಾವ್ ಲೇಔಟ್ ಕಥೆ ಪೋಸ್ಟ್ ಮಾಡಿದ್ದೆ. ನಿನ್ನೆ ಅವರ ಪುತ್ರ ಶ್ರೀನಿವಾಸ ರಾಯರಿಗೆ ಪೋನ್ ಮಾಡಿದಾಗ ಅವರ ಕಿರಿಯ ಸೊಸೆ ಅಜ್ಜಿಯ ಹುಟ್ಟುಹಬ್ಬದ ಶತಕಾಚಾರಣೆ ಹೆಮ್ಮೆಯಿಂದ ಹೇಳಿದರು. ಈಗ ಅಚ್ಯುತರಾವ್ ಕಿರಿಯ ಪುತ್ರರ ವಯಸ್ಸು 79 ಇವರ ಶತಾಯುಷಿ ತಾಯಿ ಅವರಿಗೆ ಶುಭಹಾರೈಕೆ ತಿಳಿಸಲು ವಿನಂತಿಸಿ ಅವರ ಹುಟ್ಟುಹಬ್ಬದ ಆಚರಣೆಯ ಪೋಟೋ ಕಳಿಸಲು ವಿನಂತಿ ಮಾಡಿದ್ದೆ. 2017ರ ಈ ಕೆಳಗಿನ ಪೋಸ್ಟ್ ಅಚ್ಯುತ್ ರಾವ್ ಲೇಔಟ್ ಆದ ವಿವರ ಇದೆ. https://arunprasadhombuja.blogspot.com/search?q=%E0%B2%B6%E0%B3%8D%E0%B2%B0%E0%B3%80%E0%B2%A8%E0%B2%BF%E0%B2%B5%E0%B2%BE%E0%B2%B8%E0%B3%8D+%E0%B2%B0%E0%B2%BE%E0%B2%B5%E0%B3%8D #ಶಿವಮೊಗ್ಗದ_ಅಚ್ಚುತ_...