Skip to main content

Posts

Showing posts with the label Sagar Ravindra Pusthakalaya Mr Danthi and Mangalore Athri Book house Mr Ashok vardan both persons great contribution to Kannada literature

Blog number 1203. ಯಲ್ಲಪ್ಪ ಅಪ್ಪಾರಾವ್ ದಂತಿ ಕನ್ನಡ ಸಾಹಿತ್ಯದ ಅತಿರಥ ಮಹಾರಥರ ಪುಸ್ತಕ ಮಲೆನಾಡಿನ ಮೂಲೆ ಸಾಗರ - ಕಾರ್ಗಲ್ ನ ರವೀ೦ದ್ರ ಪುಸ್ತಕಾಲಯದಿಂದ ಪ್ರಕಟಿಸಿದವರು, ಇವರು ಪ್ರಕಟಿಸಿದ ಅನೇಕ ಕಾದಂಬರಿ ಕನ್ನಡದ ಹಿಟ್ ಸಿನಿಮಾವಾಗಿದೆ ಇವತ್ತಿಗೆ ಇವರಿಗೆ 85 ವರ್ಷ, ಇವರ ವಿವಾಹಕ್ಕೆ 50 ವಷ೯ ಇವರಂತದೇ ವ್ಯಕ್ತಿತ್ವದ ಮಂಗಳೂರಿನ ಅತ್ರಿಪುಸ್ತಕಾಲಯದ ಅಶೋಕ ವರ್ಧನರು ಇವರಿಬ್ಬರೂ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಸ್ತುತ್ಯಾರ್ಹ.

#ಮಲೆನಾಡಿಗರಿಗೆ_ಏನಾಗಿದೆ? #ಅಹ೯ರಿಗೆ_ಅಹ೯ತೆಯೆ_ಅನರ್ಹತೆಯೇ? #ಸಾಗರದ_ರವೀ೦ದ್ರ_ಪುಸ್ತಕಾಲಯದ_ಯಲ್ಲಪ್ಪಅಪ್ಪಾರಾವ್_ದಂತಿಯವರ_ಕನ್ನಡ_ಸಾದನೆ_ಸಣ್ಣದೇ ? #ದಂತಿಯವರಿಗೆ_85_ಅವರ_ವಿವಾಹಕ್ಕೆ_50ವರ್ಷ #ಇವತ್ತಿನ_ಪ್ರಜಾವಾಣಿಯಲ್ಲಿ_ಎಂ_ರಾಘುರವರ_ಲೇಖನ_ಅಭಿನಂದನೀಯ #ಎಲೆಮರೆಯ_ಕಾಯಿಯಂತ_ಕನ್ನಡಸಾಹಿತ್ಯ_ಲೋಕದ_ದಂತಿ_ದಂಪತಿಗಳಿಗೆ_ಶುಭಹಾರೈಕೆಗಳು.    ಐವತ್ತು ವರ್ಷಗಳ ಹಿಂದೆಯೇ ಮಲೆನಾಡಿನ ಕುಗ್ರಾಮದ ಕಾರ್ಗಲ್ - ಸಾಗರದಂತ ಊರಿನಿಂದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಕತೆ- ಕಾದಂಬರಿ ಪ್ರಕಟಿಸಿ ಅದನ್ನು ಮಾರಾಟ ಮಾಡಿ ಜನಪ್ರಿಯಗೊಳಿಸಿದ ಯಲ್ಲಪ್ಪ ಅಪ್ಪಾರಾವ್ ದಂತಿ ಅವರ ಸಾದನೆ ಸಣ್ಣದಲ್ಲ.     ಇವರು ಪ್ರಕಟಿಸಿದ ಕಾದ೦ಬರಿಗಳು ಸೂಪರ್ ಡೂಪರ್ ಸಿನಿಮಾ ಆಗಿದ್ದು ಕೂಡ ಇಷ್ಟೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡದರು ಯಾರಿಗೂ ಹೇಳಿಕೊಳ್ಳದ, ಯಾರಿಂದ ಏನನ್ನೂ ಬಯಸದ ಮತ್ತು ಪ್ರಚಾರ ಪ್ರಶಸ್ತಿಯ ಕೀರ್ತಿಗಳಿ೦ದ ಮಾರಲ್ಲ ಮೈಲಿಗಳ ಅಂತರ ಕಾಪಾಡಿಕೊಂಡ ದಂತಿ ನಮ್ಮ ಸಾಗರದ ರವೀಂದ್ರ ಪುಸ್ತಕಾಲಯ, ಗ್ರಂಥಾಲಯದವರು ಎಂಬುದು ನನಗೆ ಹೆಮ್ಮೆ.   ಇವರ ಬಗ್ಗೆ ಈ ಹಿಂದೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು https://arunprasadhombuja.blogspot.com/2021/09/blog-post_20.html.    ಅವರೊಂದು ದಂತಕಥೆಯೆ ಇವರ೦ತವರೇ ಆದ ಮಂಗಳೂರಿನ ಅತ್ರಿ ಪುಸ್ತಕಾಲಯದ...