#ಉಕ್ಕಿನ_ಮಹಿಳೆ_ಇಂದಿರಾಗೆ_ಕಲ್ಲೆಸೆದ_ಶಿವಮೊಗ್ಗದ_ಕಹಿಘಟನೆಗೆ_44ವರ್ಷ. #ಇವತ್ತು_ಇಂದಿರಾ_104ನೇ_ಹುಟ್ಟುಹಬ್ಬ #ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ. ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಇಂದಿರಾರ 104 ನೇ ಹುಟ್ಟುಹಬ್ಬ. 19- ನವೆಂಬರ್ -1917 ಇಂದಿರಾರ ಜನ್ಮ ದಿನ. ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು. ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು. ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ತಯಾರಿ ಒ0ದು ನಡೆದಿತ್ತು. ಶಿವಮೊಗ್ಗ ತೀರ್ಥಹಳ್ಳಿ ಮಾರ್ಗದಲ್ಲಿ (ಈಗಿನ ಬೈಪಾಸ್ ಸಮೀಪ) ಯುವಕರ ಗುಂಪೊಂದು ಇಂದಿರಾ ವಿರೋದಿ ಘೋಷಣೆಯೊಂದಿಗೆ ಇಂದಿರಾ ಕಾರು ಅಡ್ಡಗಟ್ಟಿ ಕಲ್ಲಿನ ಸುರಿಮಳೆ ನಡೆಸಿತು, ಇಂದಿರಾ ಗಾಂದಿ ಪ್ರಯಾಣಿಸುತ್ತಿದ್ದ ಅಂಬಾಸಿಡರ್ ಕಾರಿನ ಡ್ರೈವ...