#ಶ್ರದ್ದಾಂಜಲಿಗಳು #ನಾರಿ_ನಾರಾಯಣಪ್ಪ_ಹಾರ್ನಳ್ಳಿ #ಮಾಜಿ_ಮಂಡಲ್_ಪಂಚಾಯತ್_ಸದಸ್ಯರು_ಯಡೇಹಳ್ಳಿ #ಮಿತಬಾಷಿ_ಶ್ರಮಜೀವಿ_ಸಜ್ಜನ_ಕೃಷಿಕರು. 1985 ರಿಂದ 2000 ಇಸವಿ ತನಕ ನಾನು ನಮ್ಮ ಶ್ರೀ ಕೃಷ್ಣ ರೈಸ್ ಮಿಲ್ ಅಕ್ಕಿ ಗಿರಣಿ ಮಾಲಿಕ ಆಗ ಆನಂದಪುರಂ ಹೋಬಳಿ, ಪಕ್ಕದ ಹೊಸನಗರ ತಾಲ್ಲೂಕಿನ ಹರತಾಳು, ನಂಜವಳ್ಳಿ, ಹುಣಸಳ್ಳಿ, ನವಟೂರು, ಹಾಲುಗುಡ್ಡೆ, ಮಾದಾಪುರ ಈ ಕಡೆ ಶಿವಮೊಗ್ಗ ತಾಲ್ಲೂಕಿನ ಕುಣೇಹೊಸೂರು, ಸನ್ನಿ ವಾಸ, ತುಪ್ಪೂರು, ಬ್ಯಾಡನಳ್ಳ, ಚೊಡನಳ್ಳಗಳ ರೈತರು ತಾವು ಬೆಳೆದ ಭತ್ತ ತಂದು ನಮ್ಮ ಅಕ್ಕಿ ಗಿರಣಿಯಲ್ಲಿ ಅಕ್ಕಿ ಮಾಡಿ ಕೊಂಡು ಹೋಗುತ್ತಿದ್ದರು ಆದ್ದರಿಂದ ಈ ಪ್ರದೇಶದ ಪ್ರತಿ ಮನೆಗಳ ಒಡನಾಟವಿತ್ತು. ಆ ಕಾಲದಲ್ಲಿ ಹೊಸೂರು ಗ್ರಾಮದ ಹಂದಿಗ ಹಾರ್ನಳ್ಳಿ ಭಾಗದ ನಾರೀ ನಾರಾಯಣಪ್ಪರ ಕುಟುಂಬ ದೊಡ್ಡದು ಇವರ ತಂದೆ ಮತ್ತು ಅವರ ಸಹೋದರರಾದ ಇವರ ಚಿಕ್ಕಪ್ಪಂದಿರೆಲ್ಲ ಸೇರಿದ ನೂರಕ್ಕೂ ಹೆಚ್ಚಿನ ಅವಿಭಕ್ತ ಕುಟುಂಬ, ದೊಡ್ಡದಾದ ಕೆಲವು ಅಂಕಣದ ಹುಲ್ಲಿನ ಮನೆ, ನೂರಾರು ದನ, ಎಮ್ಮೆಗಳು, ಎತ್ತು, ಕೋಣಗಳು, ಎತ್ತಿನಗಾಡಿಗಳು ಮತ್ತು ಈ ದೊಡ್ಡ ಕುಟುಂಬದ ಅಕ್ಷಯ ಪಾತ್ರೆಯಂತ ಭತ್ತ ಬೆಳೆಯುವ ಜಮೀನುಗಳು. ಇಂತಹ ದೊಡ್ಡ ಕುಟುಂಬದ ಯಜಮಾನಿಕೆ ಇವರ ತಂದೆ ನಂತರ ಸಣ್ಣ ವಯಸ್ಸಲ್ಲೇ ನಾರೀ ನಾರಾಯಣಪ್ಪರಿಗೆ ಇವರ ನಾರೀಮನೆತನದ ಇವರ ದೊಡ್ಡಪ್ಪ ಚಿಕ್ಕಪ್ಪಂದಿರು ವಹಿಸಿಕೊಟ್ಟರು. ಮಿತ ಬಾಷಿ, ಶ್ರಮಜೀವಿ, ಕ...