Skip to main content

Posts

Showing posts with the label it's signature brand of Kalparasa and it's Jaggery

Blog number 1832. ಉಡುಪಿಯ ಕಲ್ಪರಸ ರೈತ ಉತ್ಪಾದಕ ಕಂಪನಿಯ ತೆಂಗಿನ ಬೆಳೆಯ ಮೌಲ್ಯವರ್ಧನೆ ಮತ್ತು ಈ ಸಂಸ್ಥೆಯ ಆರೋಗ್ಯಕರ ಉತ್ಪಾದನೆಗಳಾದ ನೀರಾ ಮತ್ತು ನೀರಾದ ಬೆಲ್ಲ.

https://youtu.be/z0LG3BMnHe8?feature=shared #ಒರಿಜನಲ್_ನೀರಾ_ಬೆಲ್ಲಕ್ಕೆ_ಹುಡುಕುತ್ತಿದ್ದೆ. #ಉಡುಪಿ_ಕಲ್ಪರಸ_ರೈತ_ಉತ್ಪಾದಕ_ಕಂಪನಿ_ತಯಾರಿಸಿ_ಮಾರಾಟ_ಮಾಡುತ್ತಿದೆ. #ನೀರಾದಿಂದ_ತಯಾರಿಸಿದ_ಈ_ಬೆಲ್ಲದ_ದರ_ಕೇಜಿಗೆ_ಒಂದು_ಸಾವಿರ. #ಕಲ್ಪರಸ_ಲೀಟರಿಗೆ_250_ರೂಪಾಯಿ #ಮದುಮೇಹಿಗಳೂ_ಕುಡಿಯಬಹುದು.    ಕರಾವಳಿಯಲ್ಲಿ ಒ0ದು ಕಾಲದಲ್ಲಿ ಓಲೆ ಬೆಲ್ಲ / ತಾಳೆ ಬೆಲ್ಲ ಎಂದು ಕರೆಯುವ ಹನಿ ಬಂಡದ ಮರದಿಂದ ತೆಗೆದ ನೀರಾದಿಂದ ಬೆಲ್ಲ ತಯಾರಿಸಿ ಅದನ್ನು ಚಕ್ರಾಕಾರವಾಗಿರುವ ಅಚ್ಚಿನಲ್ಲಿ ಹಾಕಿ ಅದರ ಅಂಚೆಗೆ ತಾಳೆಗರಿ ಸುತ್ತಿ ನಂತರ ಹತ್ತಾರು ಓಲೆ ಬೆಲ್ಲದ ಚಕ್ರಗಳನ್ನು ಈ ಮರದ ಒಣ ಎಲೆಗಳಿಂದ ಮಾಡಿದ ಕೊಟ್ಟಿಯ ಪಟ್ಟಣದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.   ನಂತರ ಈ ಕಾಯಕ ಮಾಡುವವರು ಕಡಿಮೆ ಆದರು, ಮಾರಾಟ ಕೂಡ ಕಡಿಮೆ ಆದ್ದರಿಂದ ಈ ಬೆಲ್ಲ ತಯಾರಿಯೂ ಕಡಿಮೆ ಆಯಿತು ಈ ಜಾಗದಲ್ಲಿ ಕಬ್ಬಿನ ಆಲೆಮನೆ ಬೆಲ್ಲಕ್ಕೇ ಓಲೆ ಬೆಲ್ಲದ ಸಿಂಗಾರದ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವ ಕೌಶಲ್ಯದ ವ್ಯಾಪಾರದಿಂದ ಅನೇಕರು ಮೋಸ ಹೋದಂತೆ ನಾನೂ ಕೂಡ ಖರೀದಿ ಮಾಡಿ ನಂತರ ಬೇಸರ ಪಟ್ಟಿದ್ದೆ.   ಈಗ ಕರಾವಳಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಸರ್ಕಾರದ ಲೈಸೆನ್ಸ್ ಪಡೆದು ಕಲ್ಪರಸ (ನೀರಾ) ಸಂಸ್ಕರಣೆ ಮಾಡಿ ಮಾರಾಟ ಮಾಡುವ ರೈತ ಉತ್ಪಾದಕ ಕಂಪನಿ ಯಶಸ್ವಿಯಾಗಿ ಅನೇಕ ಕಡೆ ತನ್ನ ಮಾರಾಟ ಮಳಿಗೆಗಳನ್ನು ತೆರೆದಿದೆ.   ಈ...