#ಬಾರದ_ಲೋಕಕ್ಕೆ_ತೆರಳಿದ_ಗೆಳೆಯ_ಏಸುಪ್ರಕಾಶ್ #ಪ್ರೌಡಶಾಲಾ_ಸಹಪಾಠಿ #ಹೆಗ್ಗೋಡು_ನೀನಾಸಂ_ರಂಗ_ಕಲಾವಿದ #ಚಲನಚಿತ್ರ_ದಾರಾವಾಹಿ_ನಟ #ಪರಿಸರ_ಹೋರಾಟಗಾರ #ತಾಯಿಗೆ_ತಕ್ಕ_ಮಗನಾಗಿದ್ದವರು ನಿನ್ನೆ ರಾತ್ರಿ 8.41 ಕ್ಕೆ #ಏಸುಪ್ರಕಾಶ್ ಗೆ ಪೋನ್ ಮಾಡಿದ್ದೆ ಕೆಲವು ಬಾರಿ ಪ್ರಯತ್ನಿಸಿದೆ ರಿಂಗ್ ಆಗುತ್ತಿತ್ತು ಆದರೆ ರಿಸೀವ್ ಮಾಡಲಿಲ್ಲ... #ಡಿಜಿಟಲ್_ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳು ನೀನಾಸಂ - ಕೆ.ವಿ.ಸುಬ್ಬಣ್ಣ ಬಗ್ಗೆ ಕೆಲವು ಎಪಿಸೋಡು ಮಾಡುವ ಉದ್ದೇಶ ಹೊಂದಿದ್ದರಿಂದ ಏಸು ಪ್ರಕಾಶರಿಗೆ ಈ ದಂಪತಿಗಳಿಗೆ ಸಹಕರಿಸಲು ವಿನಂತಿಸಲು ಪೋನ್ ಮಾಡಿದ್ದೆ. ಏಸು ಪ್ರಕಾಶ್ ಫೋನಿಗೆ ಸಿಗಲಿಲ್ಲ ಅಂದಾಗ #ನೀನಾಸಂ_ಪ್ರಾಂಶುಪಾಲರಾದ_ಗಣೇಶರಿಗೆ ಪೋನ್ ಮಾಡಿದೆ ಅವರೂ ರಿಸೀವ್ ಮಾಡಲಿಲ್ಲ. ಕೆಲ ಸಮಯದ ನಂತರ ಪ್ರಾಂಶುಪಾಲರೆ ವಾಪಾಸು ಕರೆ ಮಾಡಿದಾಗ ಗೊತ್ತಾಗಿದ್ದು ಏಸು ಪ್ರಕಾಶ್ ಇನ್ನಿಲ್ಲ ಅಂತ. ಲಿವರ್ ಕ್ಯಾನ್ಸರ್ ಸ್ಟೇಜ್ 4 ಕ್ಕೆ ತಲುಪಿ ದೇಹದ ಅಂಗಾಂಗ ವೈಫಲ್ಯದಿಂದ ನಿನ್ನೆ ಕರಾವಳಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆನ್ನು ನೋವಿದೆ ಅನ್ನುತ್ತಾ ತಮಗೆ ಬಂದ ಕ್ಯಾನ್ಸರ್ ಕಾಯಿಲೆ ಎಲ್ಲರಿಂದ ಮರೆ ಮಾಚಿದ್ದಾರೆ... ಈ ವಿಚಾರ ಇವರಿಗೆ ಮತ್ತು ಇವರ ದೊಡ್ಡ ಮಗಳಿಗೆ ಬಿಟ್ಟು ಯಾರಿಗೂ ಗೊತ್ತಿರಲಿಲ್ಲ. ಎರಡು ತಿಂಗಳ ಹಿಂದೆ ಅವರು ಪೋನ್ ಮಾಡಿದ್ದರು ನಮ್ಮ ಕಲ್ಯಾಣ ಮಂಟಪದಲ್ಲಿ ಅವರ ಗೆಳ...