#ಸಕ್ಕರೆಗೆ_ಬದಲಾಗಿ_ಡ್ರೈ_ಚಿಕ್ಕು ! #ಇವತ್ತು_ವಿಶೇಷ_ಸ್ವಾದದ_ಚಹಾ #ಇದು_ಮದುಮೇಹಿಗಳು_ಬಳಸಬಹುದು #ಸಸ್ಯಹಾರಿ_ಜೀವನ_ಶೈಲಿಯ_ಬದಲಿ_ಸಕ್ಕರೆ https://youtu.be/243mMEncDoA ನಮ್ಮ ಕುಟ್ಟೀಚನ್ ಯಾರದ್ದೊ ಸಪೋಟಾ ಹಣ್ಣಿನ ಮರಗಳನ್ನು ವಹಿಸಿಕೊಂಡಿರುವುದಾಗಿ ಅದರ ಹಣ್ಣುಗಳು ತುಂಬಾ ಸಿಹಿ ಇದೆ ತಗೊಳ್ಳಿ ಸಾರ್... ಅಂತ ಹೇಳಿದಾಗ ಯುಗಾದಿಗೆ ಒಂದು ವಾರ ಬಾಕಿ ಇತ್ತು. ಪ್ರತಿ ಹಬ್ಬಕ್ಕೆ ಬೇಳೆ ಮತ್ತು ಕಾಯಿ ಹೋಳಿಗೆ ತಯಾರಿಸಿ ತುಪ್ಪದ ಜೊತೆ ನಮ್ಮೆಲ್ಲ ಸಂಸ್ಧೆಯ ಸಿಬ್ಬಂದಿ ಮತ್ತು ಸಹಯೋಗಿಗಳಿಗೆ ನೀಡುವ ಸಂಪ್ರದಾಯ ಇರುವುದರಿಂದ ಹೋಳಿಗೆ ಜೊತೆ ಚಿಕ್ಕು ಹಣ್ಣು ಕೊಡುವ ತೀರ್ಮಾನ ಮಾಡಿದೆ. ಕುಟ್ಟೀಚನ್ ಗೆ ತರಲು ಹೇಳಿದ್ದು 20 ರಿಂದ 30 ಕೇಜಿ ಆದರೆ ಅವರು ತಂದಿದ್ದು 60 ಕೇಜಿ ಅದು ಕೇಜಿಗೆ 20 ರೂಪಾಯಿ ಬೆಲೆಯ ತಾಜಾ ಹಣ್ಣುಗಳು ಆದ್ದರಿಂದ ಅಷ್ಟೂ ಹಣ್ಣು ಖರೀದಿಸಿದ್ದೆ. ಈ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನನ್ನ ಬಾವ ಅವರು ರಾಜಸ್ಥಾನದಲ್ಲಿ ಈ ಚಿಕ್ಕೂ ಹಣ್ಣು ಒಣಗಿಸಿ ಚಹಾ ಮಾಡಲು ಬಳಸುತ್ತಾರೆಂಬ ವಿಷಯ ಹೇಳಿದ್ದು ನನಗೂ ಅದನ್ನು ಪ್ರಯೋಗ ಮಾಡಲು ಪ್ರೇರಣೆ ಆಯಿತು. ಚಿಕ್ಕು ಹಣ್ಣು ತುಂಡುಗಳಾಗಿಸಿ ಬಿರುಬಿಸಿಲಿನಲ್ಲಿ ಒಣಗಿಸಿ ಅದರ ಪುಡಿ ಮಾಡಿ ನನ್ನ ಮಗ ನನಗೆ ಸಹಾಯ ಮಾಡಿದ, ಇವತ್ತು ಬೆಳಿಗ್ಗೆ ಚಹಾ ಮಾಡಿ ಚಿಕ್ಕು ಹಣ್ಣಿನ ಪುಡಿ ಸೇರಿಸಿಕೊ...