Blog number 1754. ಕಾಳುಮೆಣಸಿನ ರಾಣಿ ಚೆನ್ನಾ ಬೈರಾದೇವಿ ಸಮಾದಿ ಸಾಗರ ತಾಲೂಕಿನ ಆವಿನಳ್ಳಿಯಲ್ಲಿದೆ ಮತ್ತು ಸಾಗರ ತಾಲೂಕಿನ ಜೋಗ ಜಲಪಾತದ ಕೆಳಗಿನ ಹೆನ್ನೆ ಎ೦ಬ ಗ್ರಾಮದಲ್ಲಿ ರಾಣಿ ವಂಶಸ್ಥರು ಇದ್ದಾರೆ.
#ಗೇರುಸೊಪ್ಪೆಯ_ಜೈನರಾಣಿ_ವಂಶಸ್ಥರ_ಮತ್ತು_ರಾಣಿಚೆನ್ನಾಭೈರಾದೇವಿ_ಸಮಾದಿ_ಸ್ಥಳ_ಸಾರುವ_ಪ್ರಥಮ_ಲೇಖನ_ಇದು. #ಕಾಳುಮೆಣಸಿನ_ರಪ್ತಿನಿಂದ_ಯೂರೋಪ್_ದೇಶದಲ್ಲೂ_ಪ್ರಸಿದ್ಧಿ_ಆಗಿದ್ದ. #ಕಾನೂರು_ಕೋಟೆಯ_ಗೇರುಸೊಪ್ಪೆಯ_ಜೈನರ_ರಾಣಿ #ಅವ್ವರಸಿ_ಎಂದು_ಪೂಜಿಸಲ್ಪಡುವ_ರಾಣಿ_ಚೆನ್ನಾಭೈರಾದೇವಿ. #ಅವರ_ವಂಶಸ್ಥರು_ಸಾಗರ_ತಾಲ್ಲೂಕಿನಲ್ಲಿ_ಇದ್ದಾರೆ. #ಅವರನ್ನು_ಗುರುತಿಸುವ_ಕೆಲಸ_ಆಗಬೇಕು. #ಕೆಳದಿ_ರಾಜ_ವೆಂಕಟಪ್ಪನಾಯಕ_ಇಕ್ಕೇರಿ_ಕೋಟೆಯಲ್ಲಿ_ಬಂದನದಲ್ಲಿಟ್ಟ_ರಾಣಿ. #ರಾಣಿ_ಚೆನ್ನಾಭೈರಾದೇವಿ_ಸಮಾದಿ_ಸಾಗರ_ತಾಲ್ಲೂಕಿನ_ಅವಿನಹಳ್ಳಿಯಲ್ಲಿದೆ. #ಇದನ್ನು_ಸಂರಕ್ಷಿಸಬೇಕಾದ_ಪುರಾತತ್ವ_ಇಲಾಖೆ_ಮತ್ತು_ಹುಂಚಾದ_ಜೈನ_ಮಠಗಳಿಗೆ_ನಿರಾಸಕ್ತಿ_ಏಕೆ? ಪಶ್ಚಿಮ ಘಟ್ಟಗಳ ಕಾಳು ಮೆಣಸು ಸಂಗ್ರಹಿಸಿ ಸಂಸ್ಕರಿಸಿ ಯೂರೋಪು ಖಂಡಗಳಿಗೆ ರಪ್ತು ಮಾಡುತ್ತಿದ್ದ ಜೈನ ಕುಲದ ರಾಣಿ ಚೆನ್ನಾ ಬೈರಾದೇವಿ ಇತಿಹಾಸದ ಬಗ್ಗೆ ಇನ್ನೂ ಹೆಚ್ಚಿನ ಸಂಶೋದನೆಗಳು ಆಗ ಬೇಕು ಮತ್ತು ರಾಣಿಯ ಬಗ್ಗೆ ಹೆಚ್ಚು ಮಾಹಿತಿಗಳು ಪ್ರಕಟವಾಗಬೇಕು. ಸಾಗರ ತಾಲೂಕಿನ ಜೋಗ್ ಜಲಪಾತದ ಪಕ್ಕದಲ್ಲಿನ ದಟ್ಟ ಅರಣ್ಯದಲ್ಲಿ ಕಾನೂರಿನ ಕೋಟೆ ಇದೆ ಇದು ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಇನ್ನೂ ಅರಣ್ಯ ಇಲಾಖೆ ಸುಪರ್ದಿಯಲ್ಲಿದೆ. ಜೋಗ ಜಲಪಾತದಿಂದ ರಭಸದಿಂದ ದುಮುಕಿದ ಶರಾವತಿ ನದಿ ಶಾಂತವಾಗಿ ಹರಿಯುವ ಗೇರುಸೊಪ್ಪೆ ರಾಣಿ ಚೆನ್ನಾ ಬೈರಾದೇವಿಯ ರಾಜ್ಯದ ಕೇಂದ್ರ ಸ್ಥಳ ...