Blog number 1164. ಶಬರಿಮಲೈ ಯಾತ್ರಾರ್ಥಿಗಳನ್ನೆ ಅವಲಂಬಿಸಿ ಉತ್ಪಾದನೆ ಮತ್ತು ಮಾರಾಟ ಆಗುತ್ತಿರುವ ಕೇರಳದ ಹಲ್ವಾ ಮಾರುಕಟ್ಟೆ 45 ದಿನದಲ್ಲಿ 150 ಕೋಟಿಗೂ ಮಿಕ್ಕಿದ ವಹಿವಾಟು.
#ಶಬರಿ_ಮಲೈ_ಯಾತ್ರೆ_ಪ್ರಾರಂಭವಾಗಿದೆ. #ಕೇರಳದ_ಕೆಂಪು_ಹಲ್ವಾ_ವ್ಯಾಪಾರ_ಕೂಡ. #ಪ್ರತಿಯೊಬ್ಬ_ಶಬರಿಮಲೈ_ಯಾತ್ರಾರ್ಥಿ_ಕನಿಷ್ಟ_ಹತ್ತು_ಕಿಲೋ_ಹಲ್ವಾ_ಖರೀದಿಸುತ್ತಾರೆ #ಪ್ರತಿದಿನ_ಶಬರಿಮಲೈಗೆ_ಬರುವ_ಯಾತ್ರಾರ್ಥಿಗಳ_ಸಂಖ್ಯೆ_90_ಸಾವಿರ #ಪ್ರತಿನಿತ್ಯ_ಕೇರಳದಲ್ಲಿ_ಶಬರಿಮಲೈ_ಯಾತ್ರಾರ್ಥಿಗಳಿಂದ_9_ಕೋಟಿಗೂ_ಮೀರಿದ_ಹಲ್ವಾ_ಖರೀದಿ #ಶಬರಿಮಲೈ_ಯಾತ್ರಾರ್ಥಿಗಳ_ಹಲ್ವಾ_ಖರೀದಿ_ಕಡ್ಡಾಯವಾ? ನಮ್ಮ ಮನೆಗೆ ನಿತ್ಯ 2 ಲೀಟರ್ ಮಲೆನಾಡು ಗಿಡ್ಡ ದನದ ಹಾಲು ನೀಡುವ ಹುಲಿಮರಡಿಯ ಮ೦ಜುನಾಥ ಶೆಟ್ಟರು ಇದೇ ಗುರುವಾರ ಶಬರಿಮಲೈ ಯಾತ್ರೆ ಹೋಗುವುದಾಗಿ ತಿಳಿಸಲು ಬಂದಿದ್ದರು ಇದು ಅವರು 5 ನೇ ಶಬರಿಮಲೆ ಯಾತ್ರೆ. ಒ0ದು ಯಾತ್ರೆಗೆ ಬರುವ ಖರ್ಚು ವೆಚ್ಚಗಳ ಬಗ್ಗೆ ಮಾತಾಡುವಾಗ ಹಲ್ವಾದ ವಿಚಾರ ಪ್ರಸ್ತಾಪವಾಯಿತು, ಕನಿಷ್ಟ 10 ಕೆ.ಜಿ. ಹಲ್ವಾ ಅವರು ತರುತ್ತಾರಂತೆ ಅದನ್ನು ಅವರ ಕುಟುಂಬಿಕರುಗಳಿಗೆ ಪ್ರಸಾದ ರೂಪದಲ್ಲಿ ಹ೦ಚುತ್ತಾರ೦ತೆ. ಶಬರಿಮಲೆಗೆ ಹೋಗುವ ಯಾತ್ರಾರ್ಥಿಗಳು ಕೇರಳದ ಹಲ್ವಾ ತರದೇ ಇರುವುದಿಲ್ಲ ಇದು ಶಬರಿಮಲೆ ಯಾತ್ರೆಯ ಭಾಗವಾಗಿ ಆಚರಣೆಯಲ್ಲಿದೆ. ಕೇರಳದಲ್ಲಿ ಬಾಳೆ ಹಣ್ಣಿನ ಹಲ್ವಾ,ಗೋದಿ ಹಲ್ವಾ, ಕೇರಳ ರೆಡ್ ಹಲ್ವಾ, ಕ್ಯಾಲಿಕಟ್ ಬ್ಲಾಕ್ ಹಲ್ವಾ, ಮೈದಾ ಹಲ್ವಾ, ಕೋಜಿಕಾಡ್ ಹಲ್ವಾ ವಿದೇಶದಲ್ಲೂ ಪ್ರಸಿದ್ದಿ ಪಡೆದಿದೆ. ಕ್ಯಾಲಿಕಟ್ಟಿನ ಬ್ಲ...