ನಿನ್ನೆ ನನ್ನ ಮಗಳ ವಿವಾಹ ಗುರು- ಹಿರಿಯರ ಆಶ್ರೀವಾದ ಅನುಗ್ರಹದಿಂದ ಸಾಂಗವಾಗಿ ನೆರವೇರಿತು, ತಂದೆ ಆದ ನನ್ನ ಕತ೯ವ್ಯ ಪೂರೈಸಿದೆ. ನನಗೆ ಯಾರನ್ನೂ ವೈಯಕ್ತಿಕವಾಗಿ ಆಹ್ವಾನ ಮಾಡಲು ಆಗಲಿಲ್ಲ ಕೆಲವರಿಗೆ ಅಂಚೆಯಲ್ಲಿ ಕಳಿಸಿದೆ, ಹೆಚ್ಚಿನವರಿಗೆ ಮೆಸೆoಜರ್, ವಾಟ್ಸ್ಅಪ್ ಮಾಡಿದೆ, ಇಷ್ಟು ಜನ ಬರುತ್ತಾರೆ ಅಂತ ನಿರೀಕ್ಷೆಯೇ ಮಾಡಿರಲಿಲ್ಲ ಬಂದು ಶುಭ ಹಾರೈಸಿದವರಿಗೆ ಹೆಚ್ಚಿನ ಜನರಿಗೆ ಕೃತಜ್ಞತೆ ಸಲ್ಲಿಸಿದರೂ ಬಹಳಷ್ಟು ಜನರಿಗೆ ಸಲ್ಲಿಸಲು ಆಗಲಿಲ್ಲ. ಅವರೆಲ್ಲರಿಗೂ ಪುನಃ ಪೇಸ್ ಬುಕ್ ಮುಖಾ೦ತರವೇ ಕೃತಜ್ಞತೆ ಹೇಳಬೇಕಂತ ಇರುವಾಗ ಜೀವದ ಮಿತ್ರ ಪ್ರಗತಿ ಪರ ಕೃಷಿಕ, ಜೇನುತಜ್ಞ ಪತ್ರಕತ೯ ನಾಗೇಂದ್ರ ಸಾಗರ್ ಮಗಳನ್ನ ಅಳಿಯನ ಜೊತೆ ಕಳಿಸುವ ಸಂದಭ೯ದಲ್ಲಿ ಇದ್ದವರು ಅವರೇ ತೆಗೆದ ನನ್ನ ಕುಟುಂಬದ ಪೋಟೋ(ಪೇಸ್ ಬುಕ್ನಲ್ಲಿ ಪ್ರಕಟವಾದ ನನ್ನ ಕುಟುಂಬದ ಮೊದಲ ಪೋಟೋ ಕೂಡ) ಮತ್ತು ಬರೆದ ಲೇಖನ ನಿನ್ನೆಯ ಎಲ್ಲಾ ಶುಭ ಸಮಾರಂಭದ ಸಾರOಶವಾಗಿತ್ತು ಮತ್ತು ಸಮಯೋಜಿತವಾಗಿದೆ,ನನ್ನ ಮನ ಮುಟ್ಟಿತ್ತು ಹಾಗಾಗಿ ಅದನ್ನ ಪುನಃಶೇರ್ ಮಾಡಿದ್ದೇನೆ. ಎಲ್ಲರಿಗೂ ಕೃತಜ್ಞತೆಗಳು, ನಿಮ್ಮ ಶುಭ ಹಾರೈಕೆಗಳು ಸದಾ ನಮ್ಮನ್ನ ಸರಿ ಮಾಗ೯ದಲ್ಲಿ ಮುನ್ನಡಿಸಲಿ ಎಂದು ಪ್ರಾಥಿ೯ಸುತ್ತೇನೆ. ದನ್ಯವಾದಗಳೊಂದಿಗೆ ಇತಿ ತಮ್ಮ ಕೆ.ಅರುಣ್ ಪ್ರಸಾದ್. 11 ನವೆಂಬರ್ 2019 ಹೊಂಬುಜ ರೆಸಿಡೆನ್ಸಿ ಆನಂದಪುರಂ. www.hombujalodge.com ಆನಂದ...