ನಿನ್ನೆ ನನ್ನ ಮಗಳ ವಿವಾಹ ಗುರು- ಹಿರಿಯರ ಆಶ್ರೀವಾದ ಅನುಗ್ರಹದಿಂದ ಸಾಂಗವಾಗಿ ನೆರವೇರಿತು, ತಂದೆ ಆದ ನನ್ನ ಕತ೯ವ್ಯ ಪೂರೈಸಿದೆ.
ನನಗೆ ಯಾರನ್ನೂ ವೈಯಕ್ತಿಕವಾಗಿ ಆಹ್ವಾನ ಮಾಡಲು ಆಗಲಿಲ್ಲ ಕೆಲವರಿಗೆ ಅಂಚೆಯಲ್ಲಿ ಕಳಿಸಿದೆ, ಹೆಚ್ಚಿನವರಿಗೆ ಮೆಸೆoಜರ್, ವಾಟ್ಸ್ಅಪ್ ಮಾಡಿದೆ, ಇಷ್ಟು ಜನ ಬರುತ್ತಾರೆ ಅಂತ ನಿರೀಕ್ಷೆಯೇ ಮಾಡಿರಲಿಲ್ಲ ಬಂದು ಶುಭ ಹಾರೈಸಿದವರಿಗೆ ಹೆಚ್ಚಿನ ಜನರಿಗೆ ಕೃತಜ್ಞತೆ ಸಲ್ಲಿಸಿದರೂ ಬಹಳಷ್ಟು ಜನರಿಗೆ ಸಲ್ಲಿಸಲು ಆಗಲಿಲ್ಲ.
ಅವರೆಲ್ಲರಿಗೂ ಪುನಃ ಪೇಸ್ ಬುಕ್ ಮುಖಾ೦ತರವೇ ಕೃತಜ್ಞತೆ ಹೇಳಬೇಕಂತ ಇರುವಾಗ ಜೀವದ ಮಿತ್ರ ಪ್ರಗತಿ ಪರ ಕೃಷಿಕ, ಜೇನುತಜ್ಞ ಪತ್ರಕತ೯ ನಾಗೇಂದ್ರ ಸಾಗರ್ ಮಗಳನ್ನ ಅಳಿಯನ ಜೊತೆ ಕಳಿಸುವ ಸಂದಭ೯ದಲ್ಲಿ ಇದ್ದವರು ಅವರೇ ತೆಗೆದ ನನ್ನ ಕುಟುಂಬದ ಪೋಟೋ(ಪೇಸ್ ಬುಕ್ನಲ್ಲಿ ಪ್ರಕಟವಾದ ನನ್ನ ಕುಟುಂಬದ ಮೊದಲ ಪೋಟೋ ಕೂಡ) ಮತ್ತು ಬರೆದ ಲೇಖನ ನಿನ್ನೆಯ ಎಲ್ಲಾ ಶುಭ ಸಮಾರಂಭದ ಸಾರOಶವಾಗಿತ್ತು ಮತ್ತು ಸಮಯೋಜಿತವಾಗಿದೆ,ನನ್ನ ಮನ ಮುಟ್ಟಿತ್ತು ಹಾಗಾಗಿ ಅದನ್ನ ಪುನಃಶೇರ್ ಮಾಡಿದ್ದೇನೆ.
ಎಲ್ಲರಿಗೂ ಕೃತಜ್ಞತೆಗಳು, ನಿಮ್ಮ ಶುಭ ಹಾರೈಕೆಗಳು ಸದಾ ನಮ್ಮನ್ನ ಸರಿ ಮಾಗ೯ದಲ್ಲಿ ಮುನ್ನಡಿಸಲಿ ಎಂದು ಪ್ರಾಥಿ೯ಸುತ್ತೇನೆ.
ದನ್ಯವಾದಗಳೊಂದಿಗೆ
ಇತಿ ತಮ್ಮ
ಕೆ.ಅರುಣ್ ಪ್ರಸಾದ್.
11 ನವೆಂಬರ್ 2019
ಹೊಂಬುಜ ರೆಸಿಡೆನ್ಸಿ
ಆನಂದಪುರಂ.
ಆನಂದಪುರದ ಅರುಣ್ ಪ್ರಸಾದ್ ನನ್ನ ಅಂತರಂಗದ ಮಿತ್ರರಲ್ಲಿ ಒಬ್ಬರು.. ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರು. ಇಂದು ಅವರ ಮಗಳ ಮದುವೆಯಿತ್ತು. ಎನಿತೇ ಕೆಲಸವಿದ್ದರೂ ಹೋಗಲೇ ಬೇಕು ಎಂದು ಕೊಂಡಿದ್ದೆ.. ಹಾಗಾಗಿ ಇಂದು ನೀಚಡಿಯಲ್ಲಿ ಹಮ್ಮಿಕೊಂಡಿದ್ದ ಜೇನುಕೃಷಿ ಕಾರ್ಯಾಗಾರ ನಡೆಸಿಕೊಟ್ಟು ಅಳುಕುತ್ತಲೇ ಅವರದೇ ಮಾಂಗಲ್ಯ ಮಂದಿರದಲ್ಲಿ ಕಾಲಿರಿಸಿದಾಗ ಹೊತ್ತು ಮೂರಕ್ಕೆ ಹತ್ತಿರ ಬಂದಿತ್ತು..
ವಧೂವರರು ಫೋಟೋ ಶೂಟೌಟಿನಲ್ಲಿದ್ದರೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಗೆಳೆಯ ಅರುಣ್ ಪ್ರಸಾದ್ ಆತ್ಮೀಯವಾಗಿ ಬರ ಮಾಡಿಕೊಂಡರು. ವಿವಾಹ ವೃತ್ತಾಂತ ಹೇಳುತ್ತಲೇ ಬಂಧು ಮಿತ್ರರ ಪರಿಚಯವನ್ನು ಎಂದಿನ ಅದೇ ಆತ್ಮೀಯತೆಯಿಂದ ಮಾಡಿಕೊಟ್ಟರು.. ಅವರಲ್ಲಿನ ಈ ವಿಶೇಷ ಗುಣವೇ ನಾವುಗಳು ಆತ್ಮೀಯರಾಗಲು ಕಾರಣವಾದದ್ದು..
ಸುಮಾರು ಇಪ್ಪತ್ತೈದು ವರ್ಷಗಳ ಸ್ನೇಹ ನಮ್ಮದು. ರಾಜಕಾರಣ, ಇಸಂಗಳ ಯಾವುದೇ ಲೆಕ್ಕಾಚಾರಗಳನ್ನು ಮೀರಿದ್ದು.. ಜೀವನದಲ್ಲಿ ಜೊತೆ ಜೊತೆಯಾಗಿಯೇ ಹಲವು ಏರಿಳಿತಗಳನ್ನು ಕಂಡವರು.
ನನಗಿನ್ನೂ ನೆನಪಿದೆ. ಆಗ ಇವರು ಅದೀಗಷ್ಟೆ ಜಿಲ್ಲಾ ಪಂಚಾಯ್ತಿಯ ಸದಸ್ಯರಾಗಿದ್ದರು. ವೈಯಕ್ತಿಕ ಕೆಲಸಕ್ಕಾಗಿ ಯಡೇಹಳ್ಳಿಯಲ್ಲಿರುವ ಇವರ ಮನೆಗೆ ಹೋದಾಗ ಇವರ ಮಗಳು ಮುಗ್ಧ ನಡೆನುಡಿಗಳಿಂದ ಮೋಡಿ ಮಾಡುತ್ತಿದ್ದ ಪುಟ್ಟ ಬಾಲೆ. ಈಗ ಹಸೆಮಣೆ ಏರಿದ್ದಾಳೆ.
ಅದನ್ನೇ ಮಾತಾಡಿದೆವು. ಜೀವನದ ಜಂಜಾಟಗಳಲ್ಲಿ, ಬದುಕಿನ ಭರಾಟೆಯಲ್ಲಿ ದಿನಗಳು ಸಾಗಿದ್ದೇ ಗೊತ್ತಾಗುವುದಿಲ್ಲ. ಮಕ್ಕಳು ನಮ್ಮಷ್ಟೆತ್ತರಕ್ಕೆ ಬೆಳೆದು ಹೀಗೆ ಹೊಸ ಸಂಸಾರ ಕಟ್ಟಿಕೊಂಡ ಹೊತ್ತಿನಲ್ಲಿ ಹೊರಳಿ ನೋಡಿದಾಗ ಅರೇ ಇದು ನಾವೇ ಹಾಸಿ ಬಂದ ಮಾರ್ಗವೇ ಎಂದು ಅಚ್ಚರಿ ಆಗುತ್ತದೆ. ಮಕ್ಕಳು ಎಷ್ಟು ಬೇಗ ಬೆಳೆದರಲ್ಲ ಅನ್ನುತ್ತಲೇ ಹೊಸ ಬದುಕಿಗೆ ತೆರೆದುಕೊಳ್ಳುತ್ತೇವೆ..
ಮಧ್ಯಾಹ್ನದಿಂದ ಹಿಡಿದು ಅರುಣ್ ಪ್ರಸಾದ್ ಮಗಳನ್ನು ಹರಸಿ ಬಾಳ ಸಂಗಾತಿಯೊಂದಿಗೆ ಕಳಿಸಿ ಕೊಡುವಾಗಿನ ಭಾವುಕ ಕ್ಷಣಗಳವರೆಗೆ ನಾನು ಅವರೊಂದಿಗಿದ್ದೆ. ಜೀವನದ ಇಂಥವೆಲ್ಲ ಕ್ಷಣಗಳನ್ನು ಸಾಮಾನ್ಯದ ಆಗು ಹೋಗುಗಳಂತೇ ಸ್ವೀಕರಿಸಬೇಕು ಎಂಬ ಎಣಿಕೆಯಿದ್ದರೂ ಇಂತಹ ಸಂದರ್ಭದಲ್ಲಿ ಮನವು ತನ್ನಿಂದ ತಾನೇ ಭಾವುಕವಾಗುತ್ತದೆ. ಆರ್ದ್ರಗೊಳ್ಳುತ್ತದೆ.
ಮಗಳ ಮೇಲೆ ಒಬ್ಬ ತಂದೆಯಲ್ಲಿ ಇರುವ ಅದೇ ಅಂತಃಕರಣದ ಪ್ರೀತಿಯನ್ನು ಅರುಣ ಪ್ರಸಾದರ ಕಣ್ಣೊಳಗೆ ಕಂಡೆ. ಮತ್ತು ಮುಂದಿನದು ನನ್ನ ಪಾಳಿಯಲ್ಲವೇ ಎಂದುಕೊಳ್ಳುತ್ತ ಕ್ಷಣಕಾಲ ತಲ್ಲಣಗೊಂಡೆ.
ಮಗಳನ್ನು ಬೀಳ್ಕೊಡುವ ಮುನ್ನ ಅವರ ಮನೆಯಲ್ಲಿ ಅವರ ಮಗ ಮಾಡಿಕೊಟ್ಟ ಕಾಫಿ ಗುಟುಕರಿಸುತ್ತ ಇರುವಾಗ ಬಾಲವಾಡಿಸುತ್ತ ಬಂದ ನಾಯಿಯನ್ನು ತೋರಿಸಿ ಇದು ಮಗಳ ಮುದ್ದಿನ ನಾಯಿ. ಇನ್ನು ಅವಳಿಲ್ಲದ ದಿನಗಳಲ್ಲಿ ಎಷ್ಟು ನೋಯುತ್ತದೇನೋ ಎಂದರು.. ಅಂಗಳದಲ್ಲಿನ ಹೂಗಿಡಗಳನ್ನು ತೋರಿ ಮಗಳ ಆರೈಕೆಯ ತೋಟವಿದು ಎಂದಿದ್ದರು.
ನಮ್ಮ ಬಾಳ ಪಯಣದಲ್ಲಿ ಅನೂಹ್ಯವಾದ ಬಂಧಕ್ಕೆ ಕಾರಣವಾದ ಮಕ್ಕಳು ಮುಂದೆ ತಮ್ಮ ಸ್ವಂತ ಬದುಕನ್ನು ಕಟ್ಟಿ ಕೊಳ್ಳುವ ಮಹತ್ವದ ಕಾಲಘಟ್ಟವಿದು. ಒಂದು ಕಡೆ ಹೇಳಿಕೊಳ್ಳಲಾಗದ ನೋವು. ಮತ್ತೊಂದೆಡೆ ಅನಿವಾರ್ಯತೆ. ತಿರುಗುತ್ತಲೇ ಇರುವ ಕಾಲಚಕ್ರ. ಪಯಣ ನಿಲ್ಲುವುದಿಲ್ಲ..
ಅರುಣ್ ಪ್ರಸಾದ್, ಬಹು ಕಾಲದ ನಂತರ ನಿಮ್ಮೊಂದಿಗೆ ಮತ್ತೊಮ್ಮೆ ಆತ್ಮೀಯ ಕ್ಷಣಗಳನ್ನು ಕಳೆದಿರುವೆ.. ದಯವಿಟ್ಟು ಕ್ಷಮಿಸಿ, ನಿಮ್ಮ ಮಗಳ ಮದುವೆಯ ಸಂದರ್ಭದಲ್ಲಿ ಕೆಲವು ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳ ಬಹುದಿತ್ತು. ತಪ್ಪಿನ ನೋವು ನನ್ನಲ್ಲಿದೆ. ನೂತನ ವಧೂವರರಿಗೆ ಹೃದಯಪೂರ್ವಕ ಹಾರೈಕೆಗಳು. ಮತ್ತು ನಮ್ಮ ಸ್ನೇಹಯಾನ ಹೀಗೆಯೇ ಮುಂದುವರೆಯುತ್ತಲಿರಲಿ ಎನ್ನುವ ಆಶಯ ನನ್ನದು.
ಮಿತ್ರ ನಾಗೇ೦ದ್ರ ಸಾಗರ್ Face bookನಲ್ಲಿ ಬರೆದದ್ದು.

Comments
Post a Comment