#ಸಂಯುಕ್ತ ಕನಾ೯ಟಕದ ಶಾಮರಾವ್ ರ ಆತ್ಮಚರಿತ್ರೆ ಸಂಜಯ ಉವಾಚದಲ್ಲಿ ಸಾಗರ ತಾಲ್ಲೂಕ್ #
1. ಕೆಳದಿ ಮಠದ ಹೋರಾಟದಲ್ಲಿ.
ಶಾಮರಾಯರು.
ಸಂಯುಕ್ತ ಕನಾ೯ಟಕದ ಸಂಪಾದಕರಾದ ಶಾಮರಾಯರೆಂದರೆ ಪತ್ರಿಕೋದ್ಯಮದ ಬೀಷ್ಮರಿದ್ದ೦ತೆ ಅವರು ಪ್ರಾರಂಭದಲ್ಲಿ ಸಂಜಯ ಎಂಬ ವಾರ ಪತ್ರಿಕೆ ನಡೆಸುತ್ತಿದ್ದರು ಆ ವಾರ ಪತ್ರಿಕೆಗೆ ಸಾಗರ ತಾಲ್ಲೂಕಿನಲ್ಲಿ ಹೆಚ್ಚು ಚಂದಾದರರಿದ್ದರು, ಈ ಪತ್ರಿಕೆ ಸಾಗರ ತಾಲ್ಲೂಕಿನ ಅಡಕೆ ಬೆಳೆಗಾರರು, ಕೆಳದಿ ಮಠ, ಕಾಗೋಡು ಹೋರಾಟದ ಬಗ್ಗೆ ಹೆಚ್ಚು ವರದಿ ಮಾಡಿದ ಖ್ಯಾತಿ ಇದೆ.
ಶಾಮರಾಯರ ಆತ್ಮಚರಿತ್ರೆ ಅವರ ಶಿಷ್ಯ ಖ್ಯಾತ ಪತ್ರಕತ೯ ವಿಶ್ವೇಶ್ವರ ಭಟ್ಟರು ಬರೆದು ಪ್ರಕಟಿಸಿದ್ದಾರೆ ಅದರ ಹೆಸರು "ಸಂಜಯ ಉವಾಚ ''ಆದರಲ್ಲಿ ಸಾಗರ ತಾಲ್ಲೂಕಿನ ಕೆಲ ನೆನಪು ಘಟನೆ ದಾಖಲಿಸಿದ್ದಾರೆ ಅದನ್ನ ಕೆಲ ಬಾಗಗಳಾಗಿ ಇಲ್ಲಿ ಬರೆದಿದ್ದೇನೆ.
ಕೆಳದಿ ರಾಜ ಮಠದ ವ್ಯಾಜ್ಯಗಳು ಸ್ವಾತಂತ್ರ ಪೂವ೯ದಿOದಲೂ ಇದೆ, ಮೊನ್ನೆ ದಸರಾದಲ್ಲಿ ಆ ಮಠದ ಪಚ್ಚೆ ಲಿಂಗ ಲಾಕರ್ ನಿಂದ ತಂದು ಪ್ರದಶ೯ನಕ್ಕೆ ಇಡಲಾಗಿತ್ತು.
ಇದು ಕೆಲ ವ್ಯಾಜ್ಯದಿಂದ ಭಕ್ತರ ದಶ೯ನಕ್ಕೆ ಲಭ್ಯವಿದ್ದಿಲ್ಲ ಹಾಲಿ ಮಠದ ಸ್ವಾಮಿಗಳು ಸಾಗರದ ಶಾಸಕರಾದ ಹಾಲಪ್ಪರಿಗೆ ಮನವಿ ಮಾಡಿದಾಗ ಅವರು ರಾಜ್ಯದ ಮುಖ್ಯಮಂತ್ರಿ ಯಡೂರಪ್ಪರಿಗೆ ವಿನಂತಿಸಿ ಭಕ್ತರ ದಶ೯ನಕ್ಕೆ ಅಪೂವ೯ವಾದ ಕೆಳದಿ ಅರಸರು ನೀಡಿದ ಪಚ್ಚೆ ಲಿಂಗ ಈ ವಷ೯ ಪ್ರದಶ೯ನಕ್ಕೆ ಇಡಲಾಗಿತ್ತು.
ಈ ಮಠದ ಸ್ವಾಮಿಯವರನ್ನ ಕೆಳಗಿಳಿಸಿ ಬೇರೆಯವರನ್ನ ಪೀಠದಲ್ಲಿ ಕೂರಿಸಲು ಆಗಿನ ಸಾಗರ ಪ್ರಾ೦ತ್ಯದ ವೀರಶೈವ ಸಮಾಜದ ಪ್ರಮುಖರು ಮು೦ದಾಗುತ್ತಾರೆ ಆಗ ಆ ಸ್ವಾಮಿಜಿ ಆಗಿನ ಆಳನಾವರ ಅಡಿಕೆ ಮಂಡಿ ಅಧ್ಯಕ್ಷರು, ಸಾಗರದ ಖ್ಯಾತ ವಕೀಲರಾದ ಲಕ್ಷ್ಮಿನಾರಾಯಣಪ್ಪರ ಮೊರೆ ಹೋಗುತ್ತಾರೆ (ಮತ್ತಿಕೊಪ್ಪದ ಜಯಪ್ರಕಾಶ್ ರಾಯರ ತಂದೆ ಮತ್ತು ಮತ್ತಿಕೊಪ್ಪದ ಹರನಾಥ ರಾಯರ ದೊಡ್ಡಪ್ಪ ) ಇದರಿಂದ ವೀರಶೈವ ಸಮಾಜದವರಿಗೆ ಆಕ್ರೋಶ ಉoಟಾಗುತ್ತದೆ.
ಲಕ್ಷ್ಮಿನಾರಾಯಣಪ್ಪರು ಇದಕ್ಕೆ ಜಗ್ಗದೆ ಶಾಮರಾಯರಿಗೆ ವಹಿಸುತ್ತಾರೆ, ಶಾಮರಾಯರು ಆಗಿನ ಅವರ ಪರಿಚಿತ ಸುಪ್ರಸಿದ್ದ ಹೈಕೋಟ್೯ ವಕೀಲರನ್ನ ನೇಮಿಸಿ ತಡೆ ಆದೇಶ ತರುತ್ತಾರೆ ಇದರಿಂದ ಸಾಗರದ ವೀರಶೈವ ಮುಖಂಡರಿಗೆ ಹವ್ಯಕ ಮುಖಂಡರಾದ ಲಕ್ಷ್ಮಿನಾರಾಯಣಪ್ಪರ ಮೇಲೆ ಹೆಚ್ಚು ಕೋಪ ಉoಟಾಯಿತOತೆ ನಂತರ ಸುಪ್ರಿಂ ಕೋಟ್೯ಗೆ ಮೇಲ್ಮನವಿ ಆಗಿ ನಂತರ ರಾಜಿ ಆಯಿತೆಂದು ಬರೆದಿದ್ದಾರೆ.
ಇದೊಂದು ಅಪೂವ೯ ದಾಖಲೆ ಕೂಡ
Comments
Post a Comment