ಅಲ್ಲಿ ಸ್ಥಾಪಿತವಾಗಿರುವ ಆನೆಗಳಲ್ಲಿ ಒಂದು ಗಂಡಾನೆಯಾಗಿದ್ದು ವೆಂಕಟಪ್ಪ ನಾಯಕ ಮತ್ತು ಇನ್ನೊಂದು ಹೆಣ್ಣಾಗಿದ್ದು ಚಂಪಕ ಅರಸಿಯ ನೆನಪಿಗೆ ವೆಂಕಟಪ್ಪ ನಾಯಕ ನಿಲ್ಲಿಸಿ ಸತ್ತ ನಂತರ ಜನಮಾನಸದಲ್ಲಿ ಅವರ ನೆನಪು ಉಳಿಯಲಿ ಎಂದು ಹಾರೈಸಿದ್ದನಂತೇ.....
ಮೊಘಲ್ ದೊರೆಗಳು ಗುಲಾಬಿಯನ್ನು ಪ್ರೀತಿಯ ಸಂಕೇತ ವನ್ನಾಗಿ ಮಾಡುವ ಮೊದಲು ಕಮಲ ಪ್ರೀತಿಯ ಸಂಕೇತವಾಗಿತ್ತು...ಅರಳಿದ ಕಮಲ ಗಂಡಾನೆ ಬಳಿ ಇದ್ದು ಮೊಗ್ಗು ಕಮಲ ಹೆಣ್ಣಾನೆ ಬಳಿ ಇದೆ.....ಗಂಡನ್ನು ಅರಳಿದ ಕಮಲಕ್ಕೂ ಹೆಣ್ಣನ್ನು ಮೊಗ್ಗಾಗಿಯೂ ತೋರಿಸಿದ್ದಾರೆ.....ಗಂಡಾನೆಯ ಕಾಲುಗಳ ದಷ್ಟಪುಷ್ಟವಾಗಿದೆ, ಹೆಣ್ಣಾನೆಯ ಕಾಲು ಸ್ವಲ್ಪ ತಳುಕು ಬಳಕು ಹೊಂದಿದೆ, ಕಣ್ಣುಗಳ ಅಲಂಕಾರದಲ್ಲೂ ವ್ಯತ್ಯಾಸವಿದೆ, ಕಿವಿಗಳು ಬೇರೆ ಬೇರ ಅಕಾರದಲ್ಲಿದೆ....ಗಂಡಾನೆಯ ಹಣೆಯ ಮೇಲಿನ ಕೆತ್ತನೆಯು ಅರೇಬಿಯನ್ ಶೈಲಿಯ ಗಿಳಿ ಎಂದು ಕನಫ್ಯೂಸ್ ಆಗಬಹುದು ಆದರೆ ನಿಜವಾಗಲೂ ನೋಡಿದರೆ ಅದು ಗಂಡ ಬೇರುಂಡದ ಮಿರರ್ ಅಥವಾ ಫ್ಲೀಪ್ ಇಮೇಜ್ ಆಗಿದೆ.....
ಹೆಣ್ಣು ಮತ್ತು ಗಂಡಾನೆಯ ಹಣೆಯ ಅಲಂಕಾರವೂ ಬೇರೆ ಬೇರೆ ಆಗಿದೆ....
ಇನ್ನು ಚಂಪಕ ಅರಸಿ ಅಥವಾ ಸರಸಿ ಅತಿಲೋಕ ಸುಂದರಿಯಾಗಿದ್ದು ಬಾಂಗಾರದ ನೀಳ ರಾಶಿ ಹೊಂದಿದ್ದಳು, ಅವಳ ಕೂದಲು, ಬಟ್ಟೆ ಇನ್ನೂ ಎಲ್ಲಿಯೋ ಅನಂತಪುರದ ಯಾರದೋ ಮನೆಯಲ್ಲಿದೆ ಎಂಬ ಗುಮಾನಿಯಿದೆ...
ದೊಡ್ಡ ರಾಣಿಯ ಸನ್ಯಾಸತ್ವ,ಜನರ ಹೀಗೆಳಿಯುವಿಕೆ ಎದುರು ವೆಂಕಟಪ್ಪನ ಪ್ರೀತಿ ಕೆಲ ಕಾಲ ಕಾಪಾಡಿತ್ತಾದರೂ ಜನರ ದೂಷಣೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೋಟೆ ಅವಳೊಂದಿಗೆ ಕೊನೆಯಾಯಿತು...ಈಗ ಹಾಳು ಕೋಟೆಯ ಮಧ್ಯೆ ರೈಲ್ವೆ ಹಳಿ ಹೋಗಿದ್ದರಿಂದ ಎರಡು ಬತೇರಿಗಳು ಹಾಳಾಗಿದ್ದು ಈಗಲೂ ಕೊಟೆಯ ಒಳಗೊಂದು ಹೊರಗೊಂದು ಬತೇರಿ ಹಾಗೇ ಇದೆ...
ಕೋಟೆಯ ಒಳಗೊಂದು ದರ್ಬಾರ್ ಹಾಲ್ , ಅರಮನೆ, ಬಾವಿ, ಕೆಲಸದವರ ವಸತಿ ಇದ್ದ ಪ್ರಾಪರ್ ಮ್ಯಾಪ್ ಆಗ ಭಾರತಕ್ಕ ಬಂದಿದ್ದ ವಿದೇಶಿ ಪ್ರಯಾಣಿಕನೊಬ್ಬ ದಾಖಲಿಸಿದ್ದಾನೆ...ಈಗಿನ ಅನಂತಪುರ ಗದ್ದೆಗಳಿಂದಲೂ, ಎಡೆಹಳ್ಳಿ ಪ್ರಾಪರ್ ವ್ಯಾಪಾರಿ ಕೇಂದ್ರವಾಗಿತ್ತು, ಬತೇರಿಯಿಂದ ಮೂರು ರಸ್ತೆಗಳ ಕಾಣುತ್ತಿದ್ದು , ಬತೆರಿಯಿಂದ ಹಾರಿಸಿದ ಕಲ್ಲುಗುಂಡು ಕೆರೆ ದಾಟಿ ರಸ್ತೆಗೆ ಬೀಳುತ್ತಂತೇ.....
Comments
Post a Comment