ಕನ್ನಡದ ಪ್ರಖ್ಯಾತ ಮನರಂಜನಾ ಶೋ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕಾರ್ಯಕ್ರಮ ಯಶಸ್ವಿ 500 ಸಂಚಿಕೆ ಪೂರೈಸಿ ಶೋ ಗೆ ತೆರೆ ಎಳೆಯಲಾಯಿತು. ಆದರೆ ಕಾರ್ಯಕ್ರಮದ ಕೊನೆಯ ಕೆಲ ತಿಂಗಳುಗಳ ಕಾಲ ಶೋ ಪ್ರಾರಂಭವಾಗುವ ಮುನ್ನ ಅನೇಕ ಅದ್ಭುತ ವಿಚಾರಗಳನ್ನು ಸೃಜನ್ ಅವರು ಹಂಚಿಕೊಂಡಿದ್ದರು.
ಕನ್ನಡದ ಸ್ಟಾರ್ ನಟ ಮಗುವಾಗಿದ್ದಾಗ ಅವನ ತಾಯಿಯೇ ಕೇವಲ 8 ರೂಪಾಯಿಗೆ ಮಾರಿಬಿಡುತ್ತಾಳೆ.. ಮುಂದೆ ಆತ ದೊಡ್ಡ ನಟನಾಗಿ.. ಇಡೀ ಕರುನಾಡೇ ಮೆಚ್ಚುವಂತ ಮಹಾನ್ ಕಲಾವಿದನಾಗಿ ಬೆಳೆದು ನಿಲ್ಲುತ್ತಾನೆ.. ಯಾರಾತ?? ನಿಜಕ್ಕೂ ಮನಮುಟ್ಟುವ ಕತೆ ಕೇಳಿದರೆ ಆಶ್ಚರ್ಯವಾಗುತ್ತದೆ..
ಹಾಸನದಲ್ಲಿ 95 ವರ್ಷಗಳ ಹಿಂದೆ ಜೀವನ ನಡೆಸುವುದು ಕಷ್ಟ ಎಂದು ತನ್ನ ಮಗುವನ್ನ 8 ರೂಪಾಯಿಗೆ ಮಾರಿ ಬಿಡುತ್ತಾಳೆ… ಆ ಹುಡುಗನ ಬಾಲ್ಯ ಬಹಳ ಕಷ್ಟಕರವಾಗಿತ್ತು.. ಆ ಹುಡುಗನ ತಾಯಿ ಆತನನ್ನು ಮಂಡಿ ವ್ಯಾಪಾರಿಗಳಿಗೆ ಮಾರ್ತಾಳೆ.. ಆನಂತರ ಸಾಕು ತಂದೆ ತಾಯಿ ಜೊತೆ ಆ ಹುಡುಗ ಇರ್ತಾನೆ.. ಆ ಹುಡುಗನಿಗೆ ನಾಟಕದ ಹುಚ್ಚು ಜಾಸ್ತಿ ಇತ್ತು.. ಒಂದು ದಿನ ನಾಟಕ ನೋಡೋಕೆ ಅಂತ ಆ ಹುಡುಗ ತನ್ನ ಸಾಕು ತಂದೆಯ ಜೇಬಿನಿಂದ ಹಣವನ್ನ ಕದಿತಾನೆ.. ಇದು ಆ ಸಾಕು ತಂದೆಗೆ ಗೊತ್ತಾಗಿ ಬಿಡತ್ತೆ.. ತಕ್ಷಣ ಆ ಹುಡುಗನಿಗೆ ಹೊಡೆದು ಬಡೆದು ಮನೆ ಬಿಟ್ಟು ಓಡಿಸಿ ಬಿಡ್ತಾರೆ..
ಆಮೇಲೆ ಏನ್ ಮಾಡೋದು.. ಹೆತ್ತವರು ಮಾರಿಬಿಟ್ಟರು.. ಸಾಕಿದವರು ಮನೆ ಬಿಟ್ಟು ಓಡಿಸಿದರು.. ಆ ಹುಡುಗ ಸುಮ್ಮನಾಗಲಿಲ್ಲ.. ನಾಟಕದ ಪೋಸ್ಟರ್ ಗಳನ್ನ ಅಂಟಿಸೋದು.. ಬೋರ್ಡ್ ಬರೆಯೋ ಕೆಲಸಕ್ಕೆ ಸೇರಿಕೊಳ್ತಾನೆ..
ಮುಂದೆ ದೊಡ್ಡ ನಟನಾಗಿ ಬೆಳಿತಾರೆ.. 550 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.. ಆತ ಮತ್ಯಾರು ಅಲ್ಲ ನಮ್ಮ ಪ್ರೀತಿಯ ಹೆಮ್ಮೆಯ ಬಾಲಣ್ಣ..
ಹೌದು ಬಾಲಣ್ಣನಲ್ಲಿ ಮತ್ತೊಂದು ವಿಶೇಷತೆ ಇದೆ.. ಸಾಮಾನ್ಯರು ಅಭಿನಯಿಸೋದೇ ಕಷ್ಟ.. ಆದರೆ ಬಾಲಣ್ಣನಿಗೆ ಕಿವಿ ಕೇಳಿಸ್ತಾ ಇರ್ಲಿಲ್ಲ.. ಆದರೂ ಕೂಡ ಎದುರು ಇದ್ದ ಕಲಾವಿದರ ತುಟಿಯ ಚಲನವನ್ನ ನೋಡಿ ಸರಾಗವಾಗಿ ಸರಿಯಾದ ಸಮಯದಲ್ಲಿ ಡೈಲಾಗ್ ಡೆಲಿವರಿ ಮಾಡುತ್ತಿದ್ದರು.. ನಿಜಕ್ಕೂ ಎಂತಹ ಪ್ರತಿಭೆ ಆ ಮಹಾನ್ ಕಲಾವಿದ.
Comments
Post a Comment