1985 ರಲ್ಲಿ ಸಾಗರದಲ್ಲಿ ದಲಿತ ಸಂಘಷ೯ ಸಮಿತಿ ಪ್ರಾರಂಭದ ದಿವಸಗಳು, ಶಿವಾನಂದ ಕುಗ್ವೆ, ವಸಂತ ಕುಗ್ವೆ,ಸಿಗರೇಟು ನಾಗರಾಜ್, ತೀ.ನಾ.ಶ್ರೀನಿವಾಸ್, ಅದರOತೆ ವಿಶ್ವನಾಥ ಗೌಡರು ನಮಗೆ ನಾಯಕರು, ಬಗರ್ ಹುಕುಂ ಮಂಜೂರಾತಿ ಒತ್ತಾಯಿಸಿ ಸಾಗರದ AC ಕಚೇರಿ ಎದರು 43 ದಿನ ಧರಣಿ, ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಕಾಮಿ೯ಕ ಚಳವಳಿ, ಆನಂದಪುರದಿಂದ ಸಾಗರದ ವರೆಗೆ ಪಾದಯಾತ್ರೆ, ಆನಂದಪುರದಿಂದ ಶಿವಮೊಗ್ಗದ ತನಕ ಸೈಕಲ್ ಯಾತ್ರೆ, ಲಾಠಿ ಚಾಜ್೯ ಜೈಲು ಹೀಗೆ ಈ ಎಲ್ಲಾ ಸಂದಭ೯ದಲ್ಲಿ ಹಸಿವು ಕಾಡುತ್ತಿದ್ದಾಗ ಕಂಚಿನ ಕಂಠದಲ್ಲಿ ವಸಂತರ ಹಾಡು ನಮ್ಮ ಹೊಟ್ಟೆ ತುಂಬಿಸುತ್ತಿತ್ತು, ಅವರ ಕುಗ್ವೆ ಮನೇಲಿ ಅನ್ನ ಟೋಮೊಟೋ ಹಣ್ಣು ಮತ್ತು ಉಪ್ಪು ಹಾಕಿಕೊ೦ಡು ಊಟ ಮಾಡಿದ್ದು ನೆನಪು.
ಮೊನ್ನೆ ನನ್ನ ಮಗಳ ಮದುವೆಗೆ ತಂದೆ ಮತ್ತು ಮಗ ಕವಿಗಳಾದ ವಿ.ಟಿ.ಸ್ವಾಮಿ ಜೊತೆಗೆ ಬಂದಿದ್ದರು ತುಂಬಾ ಸಂತೋಷ ಪಟ್ಟಿದ್ದೆ ಇವತ್ತು ಈ ಲೇಖನ ಸಂತೋಷ ದುಪ್ಪಟ್ಟಾಗಿಸಿದೆ.
Comments
Post a Comment