#ಸಾಗರ ತಾಲ್ಲೂಕಿನ ಹೆಸರು ಪತ್ರಿಕೋದ್ಯಮದಲ್ಲಿ ಉತ್ತುಂಗಕ್ಕೆ ಏರಿಸಿದ ಆರ್.ಟಿ. ವಿಠಲ್ ಮೂತಿ೯#
ಆರ್.ಟಿ.ವಿ. ಸಾಗರದವರು ಇವರಣ್ಣ ಸಾಗರದ ಮುನ್ಸಿಪಲ್ ಹೈಸ್ಕೂಲಲ್ಲಿ ನನಗೆ ಕ್ಲಾಸ್ ಮೇಟ್, ಆರ್.ಟಿ.ವಿ.ಜೂನಿಯರ್ ನಮಗೆಲ್ಲರಿಗೂ ಹಾಲಿ ಮOತ್ರಿ ಶ್ರೀನಿವಾಸ ಪೂಜಾರ್ ರ ಈಗಿನ ವಿಶೇಷ ಕತ೯ವ್ಯಧಿಕಾರಿ ಆಗಿರುವ ಕೆ.ದಮ೯ಪ್ಪ ಸಾಹೇಬರು ಆಗ ಗುರುಗಳು, ಆರ್.ಟಿ.ವಿ ರವಿ ಬೆಳೆಗೆರೆ ಜೊತೆ ಸೇರಿ ಹಾಯ್ ಬೆಂಗಳೂರು ವಾರ ಪತ್ರಿಕೆಯಲ್ಲಿ ಬರೆಯಲು ಶುರು ಮಾಡಿದಾಗ ನಮಗೆಲ್ಲ ಅವರು ಸ್ಟಾರ್ ಪತ್ರಕತ೯ರು.
ನಾನು ಹೊಸದಾಗಿ ಜಿಲ್ಲಾ ಪಂಚಾಯತ್ ಸದಸ್ಯನಾಗಿ 1995 ರಲ್ಲಿ ಆಯ್ಕೆ ಆದಾಗ ಕಾಗೋಡು ತಿಮ್ಮಪ್ಪರ ಜೊತೆ ಹಳ್ಳಿ ತಿರುಗಾಟದಲ್ಲಿ ಹೋಗುವಾಗ ಹಳ್ಳಿಯ ರೈತರು ಕೃಷಿ ಇಲಾಖೆಯ ಭೂ ಸಂರಕ್ಷಣಾ ಇಲಾಖೆಯ ಬಗ್ಗೆ ದೂರುತ್ತಿದ್ದರು ಆಗ ಕಾಗೋಡು ನನಗೆ ಇದನ್ನೆಲ್ಲ ಪರಿಶೀಲನೆ ಮಾಡಲು ತಿಳಿಸಿದರು, ಹುಮ್ಮಸ್ಸಿನಿಂದ ಪರಿಶೀಲಿಸಿದಾಗ ಸಾಗರ ತಾಲ್ಲೂಕಿನಲ್ಲಿ ಕೋಟ್ಯಾ೦ತರ ರೂಪಾಯಿ ಅಪರಾ ತಪರಾ ಆಗಿದ್ದು ಬಯಲಾಯಿತು.
ತನಿಖೆ ಮಾಡಿದ ನಮ್ಮ ಕೈಕಟ್ಟಿ ಹಾಕುವ ಕೆಲಸ ಪ್ರಾರಂಭ ಆಯಿತು ಆಗ ಸಾಗರದ ಉತ್ಸಾಹಿ ಯುವಕ (ಈಗ ಕೆ.ಪಿ.ಸಿ.ಸಿ. ಸದಸ್ಯ) ತಾಳಗುಪ್ಪದ ಸಲೀo ವೈಕುಂಟ ರಾಜುರವರ ವಾರಪತ್ರಿಕೆಯಲ್ಲಿ ಆಗ ವರದಿಗಾರರಾಗಿದ್ದ ವಿಠಲ ಮೂತಿ೯ಯವರನ್ನ ಕರೆತಂದರು, ಸ್ಥಳ ಪರಿಶೀಲಿಸಿ ನಮ್ಮ ಆರೋಪದ ಸತ್ಯಾಸತ್ಯತೆ ತಿಳಿದ ಆರ್.ಟಿ.ವಿ. ವಾರಪತ್ರಿಕೆಯಲ್ಲಿ ವಿಶೇಷ ಲೇಖನ ಮಾಡಿದ್ದಲ್ಲದೆ ಆಗಿನ ಕೃಷಿ ಮಂತ್ರಿ ಬೈರೇಗೌಡರೇ ಆನಂದಪುರಕ್ಕೆ ಬರುವಂತೆ ಮಾಡಿದರು, ಇದರಿಂದ 8 ಜನ ಕೃಷಿ ಅಧಿಕಾರಿಗಳು ಜೈಲಿಗೆ ಮತ್ತು ತಕ್ಷಣದಿಂದ ಭೂಸಾರ ಸಂರಕ್ಷಣಾ ಇಲಾಖೆಯನ್ನೆ ಬೈರೇಗೌಡರು ರದ್ದು ಮಾಡಿದ್ದು ಇತಿಹಾಸ ಇಂತಹ ದೊಡ್ಡ ಉಪಕಾರ ಸಹಾಯ ಆರ್.ಟಿ.ವಿಯಿOದ ಹೋರಾಟ ಮಾಡಿದ ನಮಗಾಗಿದ್ದು ಮರೆಯುವುದು ಹೇಗೆ?
ಅವರ "ಇದೊಂಥರಾ ಆತ್ಮಚರಿತ್ರೆ" ಬಿಡುಗಡೆ ಆಗಿದೆ ಅವರು ಸಹಿ ಮಾಡಿದ 10 ಪುಸ್ತಕ ಪಡೆದಿದ್ದೇನೆ,ಮಗಳ ಮದುವೆ ಸಮಾರಂಭದಿಂದ ಓದಲಾಗಲಿಲ್ಲ ಇವತ್ತು ಸಂಜೆ 5ರಿಂದ ಪ್ರಾರ೦ಭಿಸಿ ರಾತ್ರಿ 10ರ ತನಕ ಮುಗಿಸಿದೆ, ಈ ಪುಸ್ತಕದ ಹೆಚ್ಚಿನ ಲೇಖನ ಅವರ fb ನಲ್ಲಿ ಓದಿದ್ದೆ ಇನ್ನೊಮ್ಮೆ ಓದಿದೆ, ರಾಜಕಾರಣಿಗಳು, ಪತ್ರಕತ೯ರು, ಪತ್ರಿಕೋದ್ಯಮದ ವಿದ್ಯಾಥಿ೯ಗಳು ವಿಶೇಷವಾಗಿ ಸಾಗರ ತಾಲ್ಲೂಕಿನವರು ಓದಿ ಸಂಗ್ರಹದಲ್ಲಿ ಇಡುವ ಪುಸ್ತಕ ಇದು.
ಇವರ ಅಜ್ಜಿ ತುಳಸಿ ಬಾಯಿ ಆನಂದಪುರದಲ್ಲಿನ ಸಂತೆಯಲ್ಲಿ ಬಟ್ಟೆ ವ್ಯಾಪಾರ ಮಾಡಿ ವಾರಕ್ಕೆ 5 ಪೈಸೆ ನೀಡುತ್ತಿದ್ದದ್ದು, ಬಡತನದ ಬಾಲ್ಯದಲ್ಲಿ ತಂದೆ ತಾಯಿಯ ನೀತಿ ಪಾಠ, ಸಿಗರೇಟು ಪ್ಯಾಕಿನಲ್ಲಿ ಹಿರಿಯ ಪತ್ರಕತ೯ ಸಾ.ಚ. ಶಿಪಾರಸ್ಸು ಪತ್ರ ಬರೆದು ಬೆಂಗಳೂರಲ್ಲಿ ವಿಧಾನ ಸೌದದಲ್ಲಿ ವರದಿ ಮಾಡಲು ಪತ್ರಿಕೆಗೆ ಸೇರಿಸಿದ್ದು, ಜಿಲ್ಲೆಯ ಕಾಗೋಡು, ಬಂಗಾರಪ್ಪ, ಪಟೇಲರು, ಸಾಗರದ ದೋಸೆ ಕೃಷ್ಣಪ್ಪ ಹೀಗೆ ಅನೇಕ ಸ್ವಾರಸ್ಯದ ನೆನಪಿನ ಬುತ್ತಿ ಇದೆ.
ರಾಜ್ಯವಾಳಿದ 17 ಮುಖ್ಯಮಂತ್ರಿಗಳ ಒಡನಾಟ ಸಂದಶ೯ನ ಮಾಡಿದ ಏಕೈಕ ಪತ್ರಕತ೯ ನಮ್ಮ ಸಾಗರದ ಆರ್.ಟಿ.ವಿಠಲ್ ಮೂತಿ೯ ಎಂಬುವುದು ಹೆಮ್ಮೆ ಮತ್ತು ಪತ್ರಿಕೋದ್ಯಮದಲ್ಲಿ ದಾಖಲೆ ಕೂಡ.
ಆನ್ ಲೈನ್ ನಲ್ಲಿ ಪ್ರಸ್ತಕ ಖರೀದಿಸಬಹುದು
Comments
Post a Comment